ಇಂದ್ರಧನುಷ್ ಸಾರ್ವತ್ರಿಕ ಲಸಿಕಾ ಅಭಿಯಾನಕ್ಕೆ ಚಾಲನೆ

ಕೇಂದ್ರ ಸರ್ಕಾರದ `ಇಂದ್ರಧನುಷ್' ಸಾರ್ವತ್ರಿಕ ಲಸಿಕಾ ಅಭಿಯಾನವು ಎರಡನೇ ಹಂತದಲ್ಲಿ ರಾಜ್ಯದ 18 ಜಿಲ್ಲೆಗಳಲ್ಲಿ ಅನುಷ್ಠಾನಗೊಳ್ಳುತ್ತಿದೆ....
ಯು.ಟಿ.ಖಾದರ್
ಯು.ಟಿ.ಖಾದರ್

ಕೇಂದ್ರ ಸರ್ಕಾರದ `ಇಂದ್ರಧನುಷ್' ಸಾರ್ವತ್ರಿಕ ಲಸಿಕಾ ಅಭಿಯಾನವು ಎರಡನೇ ಹಂತದಲ್ಲಿ ರಾಜ್ಯದ 18 ಜಿಲ್ಲೆಗಳಲ್ಲಿ ಅನುಷ್ಠಾನಗೊಳ್ಳುತ್ತಿದೆ. ಈ ಕಾರ್ಯಕ್ರಮದ ಅನುಷ್ಠಾನ ಸಂಬಂಧ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಮಂಗಳವಾರ ವಿಡಿಯೋ ಕಾನ್ಫರೆನ್ಸ್ ನಡೆಸಿದ ಆರೋಗ್ಯ ಸಚಿವ ಯು.ಟಿ.ಖಾದರ್, ಮಾರ್ಗದರ್ಶನ ಮಾಡಿದರು.

 ಬಳಿಕ ಮಾಧ್ಯಮಗಳಿಗೆ ಮಾಹಿತಿ ನೀಡಿದ ಸಚಿವರು, 2 ವರ್ಷದೊಳಗಿನ ಅಪೂರ್ಣ ಲಸಿಕೆ ಪಡೆದಿರುವ ಮತ್ತು ಯಾವುದೇ ಲಸಿಕೆಗಳನ್ನು ಪಡೆಯದಿರುವ ಗರ್ಭಿಣಿಯರು ಮತ್ತು ಮಕ್ಕಳಿಗೆ ಕಾಲಕಾಲಕ್ಕೆ ನೀಡಬೇಕಾಗಿರುವ ಲಸಿಕೆಗಳನ್ನು ನೀಡು ವುದು ಹಾಗೂ 2020ರೊಳಗೆ ಎಲ್ಲಾ ಗರ್ಭಿಣಿಯರಿಗೆ ಮತ್ತು 2 ವರ್ಷದೊಳಗಿನ ಮಕ್ಕಳಿಗೆ ಕಾಲಕಾಲಕ್ಕೆ ಲಸಿಕೆ ಪಡೆಯುವಂತೆ ಮಾಡುವುದು ಅಭಿಯಾನದ ಉದ್ದೇಶ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com