ಕೆಸಿಡಿಸಿಯ ಅಧಿಕಾರಿಗಳಿಗೆ ಮಂಜುನಾಥ ರೆಡ್ಡಿ ತರಾಟೆ

ಕರ್ನಾಟಕ ಕಾಂಪೋಸ್ಟ್ ಅಭಿವೃದ್ಧಿ ನಿಗಮ (ಕೆಸಿಡಿಸಿ)ಕ್ಕೆ ಭಾನುವಾರ ಭೇಟಿ ನೀಡಿದ ಬಿಬಿಎಂಪಿ ಮೇಯರ್ ಮಂಜುನಾಥ ರೆಡ್ಡಿ ಅವರು...
ಬಿಎನ್ ಮಂಜುನಾಥ್ ರೆಡ್ಡಿ
ಬಿಎನ್ ಮಂಜುನಾಥ್ ರೆಡ್ಡಿ
Updated on
ಬೆಂಗಳೂರು: ಕರ್ನಾಟಕ ಕಾಂಪೋಸ್ಟ್ ಅಭಿವೃದ್ಧಿ ನಿಗಮ (ಕೆಸಿಡಿಸಿ)ಕ್ಕೆ ಭಾನುವಾರ ಭೇಟಿ ನೀಡಿದ ಬಿಬಿಎಂಪಿ ಮೇಯರ್ ಮಂಜುನಾಥ ರೆಡ್ಡಿ ಅವರು ಅಲ್ಲಿನ ಚಟುವಟಿಕೆಗಳನ್ನು ವೀಕ್ಷಿಸಿದರು. ತ್ಯಾಜ್ಯ ವಿಲೇವಾರಿಯಲ್ಲಿ ಆಗುತ್ತಿರುವ ವಿಳಂಬದ ಬಗ್ಗೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. 
ಬೊಮ್ಮನಹಳ್ಳಿ ಸಮೀಪದ ಕೂಡ್ಲುವಿ ನಲ್ಲಿರುವ ಘಟಕಕ್ಕೆ ಭೇಟಿ ನೀಡಿದ ಅಲ್ಲಿನ ಸಮಸ್ಯೆಗಳನ್ನು ನೋಡಿ ಅಸಮಾಧಾನ ವ್ಯಕ್ತಪಡಿಸಿದರು. ಸುತ್ತಲಿನ ಪ್ರದೇಶಗಳಲ್ಲಿ ಕಸದ ವಾಸನೆ ಸೇರಿದಂತೆ, ನೋಣ ಹಾಗೂ ಸೊಳ್ಳೆಗಳ ಕಾಟ ಹೆಚ್ಚಿದ್ದರೂ ಸೂಕ್ತ ಕ್ರಮ ಕೈಗೊಂಡಿಲ್ಲವೆಂದು ಅಧಿಕಾರಿಗಳನ್ನು ಪ್ರಶ್ನಿಸಿದರು. ವೈಜ್ಞಾನಿಕವಾಗಿ ನಿರ್ವಹಣೆ ಮಾಡಿದರೆ ಯಾವುದೇ ರೀತಿಯ ಅಡ್ಡಪರಿ ಣಾಮಗಳು ಉಂಟಾಗದು. ಆದರೆ ಕರ್ತವ್ಯ ನಿರ್ವಹಣೆಯಲ್ಲಿನ ಬೇಜವಾಬ್ದಾರಿಯೇ ಸಮಸ್ಯೆಗಳಿಗೆ ಮೂಲ ಕಾರಣ ಎಂದು ಅಭಿಪ್ರಾಯಪಟ್ಟರು. 
ಆವರಣದೊಳಗೆ ಹಂದಿಗಳು: ಮೇಯರ್ ಅವರು ಘಟಕದ ಪರಿಶೀಲನೆಗೆ ಆಗಮಿಸುವಾಗಹಂದಿಗಳು ಆವರಣದೊಳಗೆ ಓಡಾಡಿಕೊಂಡಿದ್ದವು. ಇದರಿಂದ ಕುಪಿತರಾದ ಅವರು ಸುತ್ತಮುತ್ತಲು ವಾಸಿಸುತ್ತಿರುವ ಹಂದಿಗಳನ್ನು ಕೆಲವೇ ದಿನಗಳ ಒಳಗೆ ಸ್ಥಳಾಂತರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದು.ಇದಕ್ಕೆ ದನಿ ಗೂಡಿಸಿದ ಸ್ಥಳೀಯ ಮುಖಂಡ ವಾಸುದೇವ ರೆಡ್ಡಿ, ಹಂದಿಗಳು ಬೀದಿಯಲ್ಲಿ ಓಡಾಡಿ ಕೊಂಡು ಸಾರ್ವಜನಿಕರಿಗೆ ತೊಂದರೆಯಾ ಗುತ್ತಿದ್ದರೂ ಅಧಿಕಾರಿಗಳು ಮೌನವಹಿಸಿದ್ದಾರೆಂದು ಆರೋಪಿಸಿದರು.
ಬಿಬಿಎಂಪಿಯಿಂದ ಕೋಟಿಗಟ್ಟಲೆ ಹಣ ವನ್ನು ಘಟಕಕ್ಕೆ ನೀಡುತ್ತಿದ್ದರೂ ಯಾವುದೇ ರೀತಿಯ ಆದಾಯ ಪಾಲಿಕೆಗೆ ಸಿಗುತ್ತಿಲ್ಲ. ಜತೆಗೆ ಕಸದ ನಿರ್ವಹಣೆ ಕೂಡ ಸರಿಯಾಗಿ ಆಗುತ್ತಿಲ್ಲ. ದುರ್ನಾತದ ವಿರುದ್ಧ ಸ್ಥಳೀಯರು ಪ್ರತಿಭಟನೆಗಿಳಿಯುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. ಖಾಸಗಿ ಕಂಪನಿಗಳಿಂದ ಕಸವನ್ನು ನೇರವಾಗಿ ವಿಲೇವಾರಿ ಮಾಡು ತ್ತಿರುವ ಕುರಿತು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಕೇವಲ ಮಾರುಕಟ್ಟೆ ತ್ಯಾಜ್ಯಕ್ಕೆ ಸೀಮಿತವಾಗಿರುವ ಘಟಕದಲ್ಲಿ ಖಾಸಗಿ ಕಂಪನಿಗಳ ಕಸವನ್ನು ಏಕೆ ಸುರಿಯಲಾಗುತ್ತಿದೆ? ಕಸದ ಟೆಂಡರ್ ಪಡೆದ ಕೆಲವು ಪ್ರಭಾವಿಗಳ ಒತ್ತಡಕ್ಕೆ ಮಣಿದು ಅನಗತ್ಯ ಕಸವನ್ನು ವಿಲೇವಾರಿ ಮಾಡುತ್ತಿರುವುದಕ್ಕೆ ಕಾರಣವೇನು ಎಂದು ಪ್ರಶ್ನಿಸಿದರು. 
ಅಧಿಕಾರಿಗಳಿಂದ ಸಮರ್ಪಕ ಉತ್ತರ ಬಾರದೇ ಇದ್ದಾಗ ಪ್ರವೇಶ ದ್ವಾರದಲ್ಲಿ ಸಿಸಿ ಕ್ಯಾಮೆರಾ ಅಳವಡಿಸುವಂತೆ ಸ್ಥಳೀಯ ಜಂಟಿ ಆಯುಕ್ತರಿಗೆ ಸೂಚನೆ ನೀಡಿದರು. ಭೇಟಿ ವೇಳೆ ಬಿಬಿಎಂಪಿ ಸದಸ್ಯೆ ಶೋಭಾ ಜಗದೀಶ್‍ಗೌಡ, ಕೆ. ವಾಸುದೇವ್, ರಂಜಿತ್, ಬಾಬು ಮತ್ತಿತರರು ಹಾಜರಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com