ಮಾಲಿನ್ಯ ತಪಾಸಣೆಗೆ ಮಂಡಳಿ ಮುಂದಡಿ

ಸಿಲಿಕಾನ್ ಸಿಟಿ ಎಂದು ಕರೆಯಲಾಗುತ್ತಿರುವ ನಮ್ಮ ರಾಜಧಾನಿಯನ್ನು ಹಿಂದೊಮ್ಮೆ ಗಾರ್ಡನ್‍ಸಿಟಿ ಎಂದು ಕರೆಯಲಾಗುತ್ತಿತ್ತು. ಬಹುಶಃ ಆ ಹೆಸರು ಎಲ್ಲರ...
ವಿಷಕಾರಿ ಅನಿಲ
ವಿಷಕಾರಿ ಅನಿಲ

ಬೆಂಗಳೂರು: ಸಿಲಿಕಾನ್ ಸಿಟಿ ಎಂದು ಕರೆಯಲಾಗುತ್ತಿರುವ ನಮ್ಮ ರಾಜಧಾನಿಯನ್ನು ಹಿಂದೊಮ್ಮೆ ಗಾರ್ಡನ್‍ಸಿಟಿ ಎಂದು ಕರೆಯಲಾಗುತ್ತಿತ್ತು. ಬಹುಶಃ ಆ ಹೆಸರು ಎಲ್ಲರ ನೆನಪಿನಿಂದ ಮಾಸಿ ಹೋಗಿದೆ. ನಗರದ ಮಾಲಿನ್ಯ ಇದಕ್ಕೆ ಕಾರಣ ಇರಬಹುದು. ಆದರೆ, ಬೆಂಗಳೂರಿನ ಮಾಲಿನ್ಯ ಪ್ರಮಾಣವನ್ನು ಅಳೆಯಲು ಮತ್ತು ನಿಯಂತ್ರಿಸಲು ಮಾಲಿನ್ಯ ಮಂಡಳಿ ಹೊಸದೊಂದು ಹೆಜ್ಜೆ ಇಟ್ಟಿದೆ.

ನಗರದ ಜಲ, ವಾಯು ಹಾಗೂ ಶಬ್ದ ಮಾಲಿನ್ಯ ಮಟ್ಟವನ್ನು ಖಚಿತವಾಗಿ ಹಾಗೂ ನಿರಂತರವಾಗಿ ಅಳೆಯುವ ವ್ಯವಸ್ಥೆಯನ್ನು ಮಾಲಿನ್ಯ ನಿಯಂತ್ರಣ ಮಂಡಳಿ ಅಳವಡಿಸಿಕೊಳ್ಳಲು ಮುಂದಡಿ ಇಟ್ಟಿದ್ದು, ಇದಕ್ಕಾಗಿ ನಗರಾದ್ಯಂತ 12 ಮೊಬೈಲ್ ವ್ಯಾನ್ ಗಳು, ಶಬ್ದ ಮಾಲಿನ್ಯ ಅಳೆಯಲು 100 ಶಬ್ದಮಾಪನ ಉಪಕರಣಗಳನ್ನು ಅಳವಡಿಸಲಿದೆ. ಇದರ ಆಧಾರದಲ್ಲಿ ತಪ್ಪಿತಸ್ಥರಿಗೆ ದಂಡ ವಿಧಿಸಲು ನೆರವಾಗುತ್ತದೆ ಎಂದು ಅರಣ್ಯ ಮತ್ತು ಪರಿಸರ ಸಚಿವ ಬಿ.ರಮಾನಾಥ ರೈ ತಿಳಿಸಿದ್ದಾರೆ.

ಕೈಗಾರಿಕೆಗಳಿಗೆ ಆನ್‍ಲೈನ್ ಪರಿಸರ ಪ್ರಮಾಣ ಪತ್ರ ನೀಡುವ ವ್ಯವಸ್ಥೆಗೆ ಪರಿಸರ ಭವನದಲ್ಲಿ ಚಾಲನೆ ನೀಡಿದ ಅವರು, 'ನಗರ ವ್ಯಾಪ್ತಿಯಲ್ಲಿರುವ ಕೈಗಾರಿಕಾ ವಲಯಗಳ ಜಲ, ವಾಯು ಹಾಗೂ ತ್ಯಾಜ್ಯಮಾಪನಕ್ಕೆ ಮೂರು ಮೊಬೈಲ್ ಪ್ರಯೋಗಾಲಯಗಳನ್ನು ಖರೀದಿಸಲಾಗುವುದು,'' ಎಂದು ಹೇಳಿದರು.

ಪಿಒಪಿ ಬಳಕೆಗೆ ನಿರ್ಬಂಧ: ರಾಜ್ಯಾದ್ಯಂತ ಜಲಮೂಲಗಳಲ್ಲಿ ವಿಸರ್ಜನೆಯಾಗುವ ಮೂರ್ತಿ ತಯಾರಿಕೆಯಲ್ಲಿ ಪ್ಲ್ಯಾಸ್ಟರ್ ಆಫ್ ಪ್ಯಾರಿಸ್(ಪಿಒಪಿ) ಬಳಕೆ ನಿರ್ಬಂಧಿಸುವಂತೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸರ್ಕಾರಕ್ಕೆ ಶಿಫಾರಸು ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com