ಹೈಕೋರ್ಟ್(ಸಂಗ್ರಹ ಚಿತ್ರ)
ಹೈಕೋರ್ಟ್(ಸಂಗ್ರಹ ಚಿತ್ರ)

ಕೋಲಾ ವಿರುದ್ಧ ಎಫ್ಐಆರ್‍ಗೆ ತಡೆ

ಅವಘಡವೊಂದರಲ್ಲಿ ಚಾಲಕ ಗಾಯಗೊಂಡ ಪ್ರಕರಣ ಸಂಬಂಧ ಹಿಂದೂಸ್ತಾನ್ ಕೊಕೊ ಕೋಲಾ ಸಂಸ್ಥೆ ನಿರ್ದೇಶಕರ, ಕಂಪೆನಿ ಸಿಬ್ಬಂದಿ ವಿರುದ್ಧದ ಎಫ್ಐಆರ್ಗೆ ಹೈಕೋರ್ಟ್ ತಡೆ ನೀಡಿದೆ ಘಟನೆ ಕುರಿತು ತಮ್ಮ ವಿರುದ್ಧ ಬಿಡದಿ ಪೊಲೀಸರು ದಾಖಲಿಸಿದ್ದ ಎಫ್ಐಆರ್ ರದ್ದುಗೊಳಿಸುವಂತೆ...

ಬೆಂಗಳೂರು: ಅವಘಡವೊಂದರಲ್ಲಿ ಚಾಲಕ ಗಾಯಗೊಂಡ ಪ್ರಕರಣ ಸಂಬಂಧ ಹಿಂದೂಸ್ತಾನ್ ಕೊಕೊ ಕೋಲಾ ಸಂಸ್ಥೆ ನಿರ್ದೇಶಕರ, ಕಂಪೆನಿ ಸಿಬ್ಬಂದಿ ವಿರುದ್ಧದ ಎಫ್ಐಆರ್ ಗೆ ಹೈಕೋರ್ಟ್ ತಡೆ ನೀಡಿದೆ ಘಟನೆ ಕುರಿತು ತಮ್ಮ ವಿರುದ್ಧ ಬಿಡದಿ ಪೊಲೀಸರು ದಾಖಲಿಸಿದ್ದ ಎಫ್ಐಆರ್ ರದ್ದುಗೊಳಿಸುವಂತೆ ಕೋರಿ ಕಂಪೆನಿಯ ಮಾನವ ಸಂಪನ್ಮೂಲ
ವಿಭಾಗದ ಮಾ್ಯನೇಜರ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ್ದ ನ್ಯಾ. ರತ್ನಕಲಾ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿದೆ.

ಹಿಂದೂಸ್ತಾನ್ ಕೊಕೊ-ಕೋಲಾ ಬೇವರೇಜಸ್ ಪ್ರೈವೇಟ್ ಲಿಮಿಟೆಡ್‍ನ ಬಿಡದಿ ಘಟಕದಲ್ಲಿ ವಾಹನದಿಂದ ಸರಕುಗಳನ್ನು ಕೆಳಗಿಳಿಸುವಾಗ ಅವಘಡ ಸಂಭವಿಸಿ ಚಾಲಕ ಶಿವೇಗೌಡ ಅವರ ಭುಜಕ್ಕೆ ಗಾಯವಾಗಿತ್ತು. ಈ ಸಂಬಂಧ ಬಿಡದಿ ಪೊಲೀಸರು ಕಂಪೆನಿ ನಿರ್ದೇಶಕರೂ ಸೇರಿದಂತೆ ಒಟ್ಟು 12 ಜನರ ವಿರುದಟಛಿ ಎಫ್ಐಆರ್ ದಾಖಲಿಸಿದ್ದರು. ಇದನ್ನು ಹೈಕೋರ್ಟ್‍ನಲ್ಲಿ ಪ್ರಶ್ನಿಸಲಾಗಿದೆ.

Related Stories

No stories found.

Advertisement

X
Kannada Prabha
www.kannadaprabha.com