
ಪಾಂಡವಪುರ: ಸಣಬದಕೊಪ್ಪಲು ಗ್ರಾಮದ ಮೃತ ರೈತ ಲೋಕೇಶ್ ಪತ್ನಿ ಶೋಭಾ ಅವರಿಗೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಆನಂದ್ ಗುರುವಾರ ರು. 1 ಲಕ್ಷ ರು. ಪರಿಹಾರ ಚೆಕ್ ವಿತರಿಸಿದರು.
ಈ ಮೂಲಕ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಭೇಟಿ ನೀಡಿ ಹಿಂದಿರುಗಿದ ನಂತರ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆ ಹಾಗೂ ರಾಜಕೀಯ ವಿಷಯವಾಗಿ ರೂಪುಗೊಂಡಿದ್ದ ಚೆಕ್ ರಾಜಕಾರಣಕ್ಕೆ ತೆರೆ ಬಿದ್ದಿದೆ. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಆನಂದ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆತ್ಮಾನಂದ ಹಾಗೂ ಸ್ಥಳೀಯ ನಾಯಕರೊಂದಿಗೆ ಸಣಬದಕೊಪ್ಪಲು ಗ್ರಾಮದ ಮೃತ ಲೋಕೇಶ್ ನಿವಾಸಕ್ಕೆ ತೆರಳಿ ಲೋಕೇಶ್ ಪತ್ನಿ ಶೋಭಾರವರ ಕೈಗೆ ಕೆಪಿಸಿಸಿ ನೀಡಿದ್ದ ಪರಿಹಾರ ಚೆಕ್ ನೀಡಿದರು. ಆತ್ಮಹತ್ಯೆ ಮಾಡಿಕೊಂಡ ರೈತ ಲೋಕೇಶ್ ಪತ್ನಿ ಶೋಭ ಅವರಿಗೆ ಸಾಂತ್ವನ ಹೇಳಿ ಧೈರ್ಯ ತುಂಬಿದರು.
Advertisement