ರಜೆ ಮೊಟಕುಗೊಳಿಸಲಿ ಇಲ್ಲವೇ ರಾಜಿನಾಮೆ ಕೇಳಲಿ: ಎ.ಕೆ.ಸುಬ್ಬಯ್ಯ

ಜನರು ನೀಡುವ ದೂರುಗಳಿಗೆ ಪರಿಹಾರ ಸಿಗುತ್ತಿಲ್ಲ, ಯಾವುದೇ ಪ್ರಕರಣಗಳು, ಆರೋಪ ಪಟ್ಟಿಗಳನ್ನು ದಾಖಲಿಸಿಕೊಳ್ಳದೆ ಲೋಕಾಯುಕ್ತ ಕಚೇರಿ ನಿಷ್ಕ್ರಿಯವಾಗಿದೆ...
ಹಿರಿಯ ವಕೀಲ ಎ.ಕೆ. ಸುಬ್ಬಯ್ಯ (ಸಂಗ್ರಹ ಚಿತ್ರ)
ಹಿರಿಯ ವಕೀಲ ಎ.ಕೆ. ಸುಬ್ಬಯ್ಯ (ಸಂಗ್ರಹ ಚಿತ್ರ)

ಬೆಂಗಳೂರು: ಜನರು ನೀಡುವ ದೂರುಗಳಿಗೆ ಪರಿಹಾರ ಸಿಗುತ್ತಿಲ್ಲ, ಯಾವುದೇ ಪ್ರಕರಣಗಳು, ಆರೋಪ ಪಟ್ಟಿಗಳನ್ನು ದಾಖಲಿಸಿಕೊಳ್ಳದೆ ಲೋಕಾಯುಕ್ತ ಕಚೇರಿ ನಿಷ್ಕ್ರಿಯವಾಗಿದೆ.

ಕೂಡಲೇ ರಾಜ್ಯಪಾಲರು ಮತ್ತು ಮುಖ್ಯಮಂತ್ರಿಗಳು ಎಚ್ಚೆತ್ತುಕೊಂಡು ಲೋಕಾಯುಕ್ತರ ರಜೆ ಮೊಟಕುಗೊಳಿಸಬೇಕು ಇಲ್ಲವೇ ಲೋಕಾಯುಕ್ತರ ರಾಜಿನಾಮೆ ಕೇಳಬೇಕು ಎಂದು ಹಿರಿಯ ವಕೀಲ ಎ.ಕೆ. ಸುಬ್ಬಯ್ಯ ತಾಕೀತು ಮಾಡಿದ್ದಾರೆ.

ಲೋಕಾಯುಕ್ತ ನ್ಯಾಯಮೂರ್ತಿ ಭಾಸ್ಕರರಾವ್ ರಜೆ ಮೇಲೆ ತೆರಳಿರುವ ಕಾರಣ ಕಚೇರಿಯಲ್ಲಿನ ಕೆಲಸಗಳನ್ನು ಸ್ಥಗಿತಗೊಂಡಿವೆ. ಅಲ್ಲದೆ ಸರ್ಕಾರ ಮತ್ತೊಂದು ಉಪ ಲೋಕಾಯುಕ್ತರ ಹುದ್ದೆ ಭರ್ತಿಗೆ ಮುಂದಾಗುತ್ತಿಲ್ಲ. ಇದರಿಂದಾಗಿ ಜನರಿಗೆ ಸರ್ಕಾರ ಮತ್ತು ಲೋಕಾಯುಕ್ತ ಸಂಸ್ಥೆ ನಡುವೆ ಏನೋ ನಡೆಯುತ್ತಿದೆ ಎಂಬ ಅನುಮಾನ ಮೂಡುತ್ತಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com