
ಮಂಗಳೂರು: ಮೂಡುಬಿದಿರೆ ಬಜರಂಗದಳದ ಕಾರ್ಯಕರ್ತ ಪ್ರಶಾಂತ್ ಪೂಜಾರಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮತ್ತೆ ನಾಲ್ವರು ಶಂಕಿತರನ್ನು ಬಂಧಿಸಿದ್ದಾರೆ. ಇದುವರೆಗೂ 8 ಆರೋಪಿಗಳನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದೆ.
ಪ್ರಕರಣದ ತನಿಖೆ ಚುರುಕುಗೊಳಿಸಿದ್ದು, ಪೂಜಾರಿ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿರುವ ಇತರೆ ಆರೋಪಿಗಳನ್ನು ಸದ್ಯದಲ್ಲೇ ಬಂಧಿಸಲಾಗುವುದು ಎಂದು ಮಂಗಳೂರು ಪೊಲೀಸ್ ಆಯುಕ್ತ ಎಸ್.ಮುರಗನ್ ಅವರು ತಿಳಿಸಿದ್ದಾರೆ.
ಪ್ರಕರಣ ಸಂಬಂಧ ಮೊಹಮ್ಮದ್ ಶರೀಫ್, ಮುಸ್ತಾಫ್ ಕಾವೂರ್, ಮೊಹಮ್ಮದ್ ಮುಸ್ತಾಫ್ ಮತ್ತು ಕಬೀರ್ ಎಂಬ ಶಂಕಿತ ಆರೋಪಿಗಳನ್ನು ಇಂದು ಬಂಧಿಸಲಾಗಿದೆ.
ಇದಕ್ಕೂ ಮುನ್ನ ಮೊಹಮ್ಮದ್ ಹನೀಫ್, ಮೊಹಮ್ಮದ್ ಇಲ್ಯಾಸ್, ಇಬ್ರಾಹಿಂ ಲಿಯಾಖತ್ ಮತ್ತು ಅಬ್ದುಲ್ ರಶೀದ್ ಎಂಬುವವರನ್ನು ಪೊಲೀಸರು ಬಂಧಿಸಿದ್ದರು.
ಗೋಕಳ್ಳರ ವಿರುದ್ಧದ ಕಾರ್ಯಾಚರಣೆ ಸಂದರ್ಭ ಮುಂಚೂಣಿಯಲ್ಲಿದ್ದ ಪ್ರಶಾಂತ್ ಪೂಜಾರಿ ಅವರನ್ನು ಅ.9ರಂದು ದುಷ್ಕರ್ಮಿಧಿಗಳ ಹತ್ಯೆ ಮಾಡಿದ್ದರು.
Advertisement