ಅನ್ನಭಾಗ್ಯದ ಅಕ್ಕಿ ಚೀಲಗಳಲ್ಲಿ ಅಕ್ಕಿ ಬದಲು ಕಲ್ಲು!

ರಾಜ್ಯ ಸರ್ಕಾರ ಬಡವರಿಗಾಗಿ ಅನ್ನಭಾಗ್ಯ ಯೋಜನೆ ಜಾರಿಗೆ ತಂದಿರುವ ವಿಷಯ ಗೊತ್ತೇ ಇದೆ. ಸರ್ಕಾರದ ಹೆಚ್ಚಿನ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಚಿಕ್ಕಬಳ್ಳಾಪುರ: ರಾಜ್ಯ ಸರ್ಕಾರ ಬಡವರಿಗಾಗಿ ಅನ್ನಭಾಗ್ಯ ಯೋಜನೆ ಜಾರಿಗೆ ತಂದಿರುವ ವಿಷಯ ಗೊತ್ತೇ ಇದೆ. ಸರ್ಕಾರದ ಹೆಚ್ಚಿನ ಯೋಜನೆಗಳಲ್ಲಿಯೂ ಅನೇಕ ಸಂದರ್ಭಗಳಲ್ಲಿ ಅಕ್ರಮ ನಡೆಯುತ್ತದೆ. ಇಲ್ಲಿಯೂ ಆಗಿದ್ದು ಅದುವೇ. ಕೆಲವರು ಹಣಕ್ಕೋಸ್ಕರ ಏನು ಬೇಕಾದರೂ ಮಾಡಲು ಸಿದ್ಧ ಎಂಬುದಕ್ಕೆ ಇದುವೇ ಉದಾಹರಣೆ.

 ಈ ಘಟನೆ ನಡೆದಿದ್ದು ಚಿಕ್ಕಬಳ್ಳಾಪುರ ಜಿಲ್ಲೆಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ . ಸಾರ್ವಜನಿಕರೇ ಅವ್ಯವಹಾರವನ್ನು ಬಯಲಿಗೆಳೆದಿದ್ದಾರೆ.ಬೆಂಗಳೂರಿನಿಂದ ಬಂದ ಮೂರು ಲಾರಿಗಳಲ್ಲಿ  ಅಕ್ಕಿ ಚೀಲಗಳಲ್ಲಿ ಸೈಜುಗಲ್ಲುಗಳನ್ನು ಹಾಕಿ ತೂಕ ಸರಿಬರುವಂತೆ ಮಾಡಲಾಗುತ್ತಿತ್ತು. ಹೀಗೆ ಮೂರು ಲಾರಿಗಳಲ್ಲಿ ಅಕ್ಕಿ ಚೀಲಗಳಲ್ಲಿ ಸುಮಾರು 1500 ಕೆಜಿ ಕಲ್ಲುಗಳು ಪತ್ತೆಯಾಗಿದೆ.
 
ಲಾರಿ ಚಾಲಕ ಮತ್ತು ಕ್ಲೀನರ್ ಸೇರಿಕೊಂಡು ಅನ್ನಭಾಗ್ಯದ ಅಕ್ಕಿ ಚೀಲದಲ್ಲಿ ಸೈಜುಗಲ್ಲುಗಳನ್ನು ತುಂಬಿಸುತ್ತಿದ್ದರು. ಹೀಗೆ ಒಂದು ದಿವಸ ಅಕ್ಕಿಚೀಲ ತೂಕ ಮಾಡುವಾಗ ಸಾರ್ವಜನಿಕರು ಗಮನಿಸಿದ್ದಾರೆ. ತಮ್ಮ ಅಕ್ರಮ ಬಯಲಿಗೆ ಬಂದಾಗ ಚಾಲಕರು, ಕ್ಲೀನರ್ ಗಳು ಲಾರಿಗಳನ್ನು ಬಿಟ್ಟು ಪರಾರಿಯಾಗಿದ್ದಾರೆ. ಲಾರಿಗಳನ್ನು ಚಿಕ್ಕಬಳ್ಳಾಪುರ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com