ಅಮಿತ್ ಮಿಶ್ರಾ ವಿರುದ್ಧ ಕೇಸ್ ವಾಪಸ್ ಪಡೆದಿಲ್ಲ: ವಂದನಾ ಜೈನ್

ಕ್ರಿಕೆಟಿಗ ಅಮಿತ್‌ ಮಿಶ್ರಾ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದ ಪ್ರಕರಣದ ಸಂತ್ರಸ್ತ ಮಹಿಳೆ ಇದೀಗ 'ಯೂ ಟರ್ನ್' ಹೊಡೆದಿದ್ದು ಆತ ತನ್ನ ಸಮ್ಮುಖದಲ್ಲಿ ಬೆಂಗಳೂರು...
ಅಮಿತ್ ಮಿಶ್ರಾ
ಅಮಿತ್ ಮಿಶ್ರಾ

ಬೆಂಗಳೂರು: ಕ್ರಿಕೆಟಿಗ ಅಮಿತ್‌ ಮಿಶ್ರಾ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದ ಪ್ರಕರಣದ ಸಂತ್ರಸ್ತ ಮಹಿಳೆ ಇದೀಗ 'ಯೂ ಟರ್ನ್' ಹೊಡೆದಿದ್ದು ಆತ ತನ್ನ ಸಮ್ಮುಖದಲ್ಲಿ ಬೆಂಗಳೂರು ಪೊಲೀಸರ ಮುಂದೆ ಹಾಜರಾಗಲೇಬೇಕು ಎಂದು ಪಟ್ಟು ಹಿಡಿದಿದ್ದಾರೆ.

ಮೊನ್ನೆ ಗುರುವಾರವಷ್ಟೇ ಮಾಧ್ಯಮದ ಕೆಲವು ವರ್ಗಗಳಲ್ಲಿ 34ರ ಹರೆಯದ ಚಿತ್ರ ನಿರ್ಮಾಪಕಿಯು ಅಮಿತ್‌ ಮಿಶ್ರಾ ವಿರುದ್ಧದ ಕೇಸನ್ನು ಹಿಂಪಡೆದಿರುವುದಾಗಿ ವರದಿಯಾಗಿತ್ತು.

ಮಹಿಳೆಯು ತಾನು ಅಮಿತ್‌ ಮಿಶ್ರಾ ವಿರುದ್ಧ ದೂರು ಹಿಂಪಡೆದುಕೊಂಡೇ ಇಲ್ಲ; ಆತ ಅಶೋಕ್‌ ನಗರ ಪೊಲೀಸ್‌ ಠಾಣೆಯಲ್ಲಿ ತನ್ನ ಸಮ್ಮುಖ ಪೊಲೀಸರೆಂದು ಹಾಜರಾಗಬೇಕು ಎಂದು ಪಟ್ಟು ಹಿಡಿದಿದ್ದಾರೆ.

"ನಾನು ಕ್ರಿಕೆಟಿಗ ಅಮಿತ್‌ ಮಿಶ್ರಾ ವಿರುದ್ಧ ಪೊಲೀಸರಿಗೆ ನೀಡಿರುವ ನನ್ನ ದೂರನ್ನು ಹಿಂಪಡೆಯಲು ಬಯಸುವುದಿಲ್ಲ. ಏಕೆಂದರೆ ನನಗೆ ಆತನಿಂದ ದೈಹಿಕವಾಗಿ, ಮಾನಸಿಕವಾಗಿ ಮತ್ತು ಭಾವನಾತ್ಮಕವಾಗಿ ನೋವಾಗಿದೆ'ಎಂದು ಮಹಿಳೆಯು ಹಿಂದೂ ದೈನಿಕಕ್ಕೆ ಹೇಳಿದ್ದಾರೆ.

ಮಿಶ್ರಾ ಅವರು ಬುಧವಾರದ ವರೆಗೂ ಮಹಿಳೆಯ ಸಂಪರ್ಕದಲ್ಲಿದ್ದರು. ಆದರೆ ಅನಂತರ ಆತನನ್ನು ಸಂಪರ್ಕಿಸಲು ಆಕೆಗೆ ಸಾಧ್ಯವಾಗಿಲ್ಲ.

"ನಾನು ಪೊಲೀಸರನ್ನು ಕಂಡು ದೂರು ನೀಡವವಳಿದ್ದೇನೆ ಎಂಬುದು ಅಮಿತ್‌ ಮಿಶ್ರಾಗೆ ಗೊತ್ತಿತ್ತು. ಅದಕ್ಕಾಗಿಯೇ ಆತ ತಾನು ಬೆಂಗಳೂರಿಗೆ ಖುದ್ದು ಬಂದು ವಿಷಯವನ್ನು ಬಗೆಹರಿಸುತ್ತೇನೆ ಎಂದಿದ್ದರು. ಆ ಪ್ರಕಾರ ಅಮಿತ್‌ ಮಿಶ್ರಾ ಬೆಂಗಳೂರಿಗೆ ಬಂದು ಪೊಲೀಸರ ಮುಂದೆ ಹಾಜರಾಗಬೇಕು ಮತ್ತು ಆತನನ್ನು ನಾನು ಮಾತನಾಡಿಸಬೇಕು' ಎಂದು ಮಹಿಳೆ ಮಾಧ್ಯಮಕ್ಕೆ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com