ಗೋಡೆಗೆ ಬಿಗಿದಿದ್ದ ಬ್ಯಾಗ್‍ನಲ್ಲಿತ್ತು ಹಣ!

ಎಟಿಎಂ ಘಟಕಕ್ಕೆ ತುಂಬಲು ತಂದಿದ್ದ ಹಣದ ಪೈಕಿ ರು.50 ಲಕ್ಷ ದೋಚಿ ಪರಾರಿಯಾಗಿದ್ದ ಆರೋಪಿಯನ್ನು ಹಲಸೂರು ಠಾಣೆ ಪೊಲೀಸರು ಬಂಧಿಸಿ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು:  ಎಟಿಎಂ ಘಟಕಕ್ಕೆ ತುಂಬಲು ತಂದಿದ್ದ ಹಣದ ಪೈಕಿ  ರು.50 ಲಕ್ಷ ದೋಚಿ ಪರಾರಿಯಾಗಿದ್ದ ಆರೋಪಿಯನ್ನು ಹಲಸೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. ಅಲ್ಲದೆ, ತಾನು ದೋಚಿದ್ದ  ಹಣದಲ್ಲಿ ಪಲ್ಸರ್ ಬೈಕ್ ಖರೀದಿಸಿದ್ದಲ್ಲದೆ, ಉಳಿದ  ರು.49  ಲಕ್ಷವನ್ನು ಲ್ಯಾಪ್‍ಟಾಪ್ ಬ್ಯಾಗಿನಲ್ಲಿ ಇಟ್ಟು ಗೋಡೆಗೆ ನೇತಾಕಿದ್ದ! ದೊಡ್ಡಬಳ್ಳಾಪುರ ತಾಲೂಕು ಊದನಹಳ್ಳಿ ಗ್ರಾಮದ ಜಗದೀಶ್ ಅಲಿಯಾಸ್ ಮಹೇಶ್ (21) ಬಂಧಿತ. ಈತನಿಂದ ರು.49 ಲಕ್ಷ ನಗದು ಹಾಗೂ ದೋಚಿದ ಹಣದಿಂದ ಖರೀದಿಸಿದ್ದ ಪಲ್ಸರ್ ಬೈಕ್ ಅನ್ನು ವಶಪಡಿಸಿಕೊಳ್ಳಲಾಗಿದೆ
ಎಂದು ಪತ್ರಿಕಾಗೋಷ್ಠಿಯಲ್ಲಿ ನಗರ ಹೆಚ್ಚುವರಿ ಪೊಲೀಸ್  ಆಯುಕ್ತ ಪ್ರತಾಪ್ ರೆಡ್ಡಿ ತಿಳಿಸಿದರು. ಡಿಪ್ಲೋಮಾ ವ್ಯಾಸಂಗವನ್ನು ಅರ್ಧಕ್ಕೆ ನಿಲ್ಲಿಸಿದ್ದ ಜಗದೀಶ್, ಬೆಂಗಳೂರಿನಲ್ಲಿ ಕ್ಯಾಷ್ ಮ್ಯಾನೇಜ್‍ಮೆಂಟ್ ಸಂಸ್ಥೆಗಳಲ್ಲಿ ಕೆಲಸ ಹುಡುಕುತ್ತಿದ್ದ. ಎರಡು ಕಡೆ ಕೆಲಸ ಸಿಗದೆ ಇದ್ದ ಕಾರಣ ನಕಲಿ ರೆಸ್ಯೂಮ್ ನೀಡಿ ಬ್ರಿಂಕ್ಸ್ ಇಂಡಿಯಾ  ಸಂಸ್ಥೆಗೆ ಕೆಲಸಕ್ಕೆ ಸೇರಿ ಪರಾರಿಯಾಗಿದ್ದ. ಬ್ಯಾಂಕಿನ ಸಿಸಿ ಕ್ಯಾಮರಾದಲ್ಲಿ ಆರೋಪಿಯ ಚಹರೆ ಹಾಗೂ ಮೊಬೈಲ್ ಫೋನ್ ಲೊಕೇಶನ್  ಆಧಾರಿಸಿ ತನಿಖೆ ನಡೆಸಿ ಆರೋಪಿ ಬಂಧಿಸಲಾಗಿದೆ. ಜಗದೀಶ್‍ನನ್ನು ಕೆಲಸಕ್ಕೆ ಸೇರಿಸಿಕೊಳ್ಳುವ ವೇಳೆ ಆತನ ಹಿನ್ನೆಲೆ ಹಾಗೂ ರೆಸ್ಯೂಮ್  ಅನ್ನು ಸರಿಯಾಗಿ ಪರಿಶೀಲನೆ ಮಾಡದ ಬ್ರಿಂಕ್ಸ್ ಇಂಡಿಯಾ ಸಂಸ್ಥೆಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪ್ರತಾಪ ರೆಡ್ಡಿ ತಿಳಿಸಿದರು. ಬ್ರಿಂಕ್ಸ್ ಇಂಡಿಯಾ ವಿವಿಧ ಬ್ಯಾಂಕ್‍ಗಳಿಂದ ಹಣ ಸಂಗ್ರಹಿಸಿ ಬಳಿಕ ಅದೇ ಬ್ಯಾಂಕ್‍ಗಳಿಗೆ ಸೇರಿದ ಎಟಿಎಂಗಳಿಗೆ ಹಣ ತುಂಬುವ ಗುತ್ತಿಗೆ ಪಡೆದಿದೆ. ಹಣ ಸಾಗಣೆ ವೇಳೆ ವಾಹನದೊಂದಿಗೆ ಓರ್ವ ಗನ್ ಮಾನ್ ಚಾಲಕ ಹಾಗೂ ಇಬ್ಬರು ಸಿಬ್ಬಂದಿ ಕಳುಹಿಸಲಾಗುತ್ತದೆ. ಈ ಸಂಸ್ಥೆಗೆ ಆರೋಪಿ ಜಗದೀಶ್, ಅ.20ರಂದು ಕೆಲಸಕ್ಕೆ ಸೇರಿದ್ದ. ಆದರೆ, ಕೆಲಸಕ್ಕೆ ಸೇರುವಾಗ ಮಹೇಶ್ ಎಂದಿದ್ದ. ಆರೋಪಿ ಜಗದೀಶ್ ಸಿಎಂಎಸ್, ಎಸ್‍ಐಪಿಎಲ್ ಸಂಸ್ಥೆಯಲ್ಲಿ ಕೆಲಸ ಕೇಳಿದ್ದ. ಆದರೆ, ಡಿಪ್ಲೋಮಾ ಅಪೂರ್ಣವಾಗಿದ್ದರಿಂದ ಕೆಲಸ ಸಿಕ್ಕಿರಲಿಲ್ಲ. ಸಿಎಂಎಸ್‍ನಲ್ಲಿ ಕೆಲಸ ಕೇಳುವ ವೇಳೆ, ಜಗದೀಶನಿಗೆ ರೆಸ್ಯೂಮ್  ನೀಡುವಂತೆ ಅಲ್ಲಿನ ಎಚ್‍ಆರ್ ಹೇಳಿದ್ದರು. ರೆಸ್ಯೂಮ್ ಹೇಗಿರಬೇಕು ಎಂದಾಗ, ಅಲ್ಲಿನ ಎಚ್‍ಆರ್ ಈ ಮಾದರಿಯಲ್ಲಿ ರೆಸ್ಯೂಮ್  ಇರಲಿ ಎಂದು ಮಹೇಶ್ ಎಂಬ ಹೆಸರಿನ ರೆಸ್ಯೂಮ್ ಅನ್ನು ಕೊಟ್ಟಿದ್ದರು. ಅದರಲ್ಲಿ ಎಸ್‍ಎಸ್‍ಎಲ್‍ಸಿಅಂಕಪಟ್ಟಿ ಸೇರಿದಂತೆ ವಿದ್ಯಾರ್ಹತೆಯ ಸೆಟ್, ಫೋಟೊ 
ಕೂಡ ಇತ್ತು.
ನೋಡಲು ಕೊಟ್ಟಿದ್ದ ರೆಸ್ಯೂಮ್   ಅನ್ನು ಎತ್ತಿಕೊಂಡ ಜಗದೀಶ್ ಹೊರಟು ಹೋಗಿದ್ದ. ಅದನ್ನೇ ಬ್ರಿಂಕ್ಸ್ಇಂಡಿಯಾಗೆ ನೀಡಿದ್ದ. ಮೊಬೈಲ್ ನಂಬರ್ ಮಾತ್ರ ಬದಲಿಸಿದ್ದ. 
ಕೆಲಸಕ್ಕೆ ಹಾಜರಾದ ಜಗದೀಶ್, ಮಹೇಶ ಹೆಸರಿನಲ್ಲಿ ಚಾಲಕ ಪ್ರಭು, ಗನ್ ಮ್ಯಾನ್ ಮುತ್ತಣ್ಣ, ಎಟಿಎಂ ಜೂನಿಯರ್ ಆಫೀಸರ್ ಮಂಜುನಾಥನ ಬಳಿ ಪರಿಚಯ ಮಾಡಿಕೊಂಡಿದ್ದ. ಇಂಡಸ್ ಬ್ಯಾಂಕ್ ಗೆ ತೆರಳಿದಾಗ  ಮಂಜುನಾಥ ಹಾಗೂ ಆರೋಪಿ ಜಗದೀಶ್ ಟ್ರಕಂಕ್ ಹಿಡಿದುಕೊಂಡು ಹಣ ತರಲು ಒಳಗೆ ಹೋಗಿದ್ದರು. ಒಳಗೆ ಹೋದ ಜಗದೀಶ್ 
ಮೂತ್ರವಿಸರ್ಜನೆ ಮಾಡುವುದಾಗಿ ಮಂಜುನಾಥನಿಗೆ ಹೇಳಿ ಹೊರ ಬಂದಿದ್ದು.ವಾಹನದ ಹಿಂಭಾಗ ಬಂದು ಬಾಗಿಲು ತೆಗೆದು ಕು. 1.81  ಕೋಟಿ ಹಣ ಇದ್ದ ಟ್ರಂಕ್ ತೆರೆದಿ ದ್ದಾನೆ. ಈ ವೇಳೆ ಸಪ್ಪಳವಾದಗಾ , ಗಾರ್ಡ್   ಹಾಗೂ ಚಾಲಲ ಏನು ಮಾಡುತ್ತಿದ್ದೀಯ? ಎಂದು ಜಗದೀಶನಿಗೆ ಕೇಳಿದ್ದಾರೆ. ಬ್ಯಾಂಕ್ ನಿಂದ ರು. 1 ಕೋಟಿ  ಹಮ ತರಬೇಕಿತ್ತು , ಜಾಗ ಮಾಡುತ್ತಿದ್ದೇನೆ ಎಂದು ಹೇಳಿದ್ದಾನೆ. ಆದರೆ ಮತ್ತೊಂದು ಟ್ರಂಕ್  ನಲ್ಲಿ ರು. 1000 ಮುಖಬೆಲೆ ನೋಟುಗಳ ರು.10 ಲಕ್ಷದ ಐದು ಬಂಡಲ್ ಗಳನ್ನು ತುಂಬಿಕೊಂಡು ಪರಾರಿಯಾಗಿದ್ದಾನೆ. ಕೂಡಲೇ ಸಂಸ್ಥೆಯ ಅಧಿಕಾರಿಗಳು  ಪೊಲೀಸರಿಗೆ ಮಂಜುನಾಥ ಮಾಹಿತಿ ನೀಡಿದ್ದ.  ಬ್ರಿಂಕ್ಸ್ ಸಿಬ್ಬಂದಿ ಹಣ ಇಡುವ ಟ್ರಂಕ್ ಗಳಿಗೆ  ಚೈನ್ ಹಾಕಿರಲಿಲ್ಲ. ಅಲ್ಲದೇ ಜಗದೀಶ್ ಹಣ ಸಾಗಿಸುವಾಗ ಗನ್ ಮ್ಯಾನ್ ಹಾಗೂ ಚಾಲಕ ಗಮನ ಹರಿಸಲೇ ಇಲ್ಲ.
ಗೋಡೆಗೆ ನೇತು ಹಾಕಿದ್ದ
ಕೃಷಿ ಕೆಲಸ ಮಾಡುವ ಜಗದೀಶ್ ಪಾಲಕರು ಅಮಾಯಕರಾಗಿದ್ದರು. ಜಗದೀಶ್ ದೋಚಿತಂದ ಹಣವನ್ನು  ಲ್ಯಾಪ್ ಟಾಪ್ ಬ್ಯಾಗ್ ನಲ್ಲಿ ಹಾಕಿ  ಗೋಡೆಗೆ ನೇತು ಹಾಕಿದ್ದ. ಈ ಬಗ್ಗೆ ಪಾಲಕರು ಪರಿಶೀಲನೆ ಮಾಜುವ  ಗೋಜಿಗೂ ಹೋಗಿರಲಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com