
ಬೆಂಗಳೂರು: ಎಚ್‍ಎಸ್‍ಆರ್ ಬಡಾವಣೆಯ ಅಪಾರ್ಟ್‍ಮೆಂಟ್‍ನ 13ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಇಷಾ ಹಂಡಾ (26) ಸಾವಿಗೂ ಮುನ್ನಾ ಆತ್ಮಹತ್ಯೆ ಮಾಡಿಕೊಳ್ಳಲು ಗೂಗಲ್‍ನಲ್ಲಿ `ಆತ್ಮಹತ್ಯೆ ಮಾಡಿಕೊಳ್ಳುವುದು ಹೇಗೆ' ಎಂಬುದನ್ನು ಸರ್ಚ್ ಮಾಡಿದ್ದರು.
ಮಹಾರಾಷ್ಟ್ರದ ಥಾಣೆ ಮೂಲದ ಇಷಾ, 13ನೇ ಮಹಡಿಯಿಂದ ಜಿಗಿಯುವ ಮುನ್ನ `ಆತ್ಮಹತ್ಯೆ ಮಾಡಿಕೊಳ್ಳುವುದು ಹೇಗೆ' ಹಾಗೂ `ಆತ್ಮಹತ್ಯೆ ಮಾಡಿಕೊಳ್ಳುವ ದಾರಿಗಳು' ಎಂದು ತಮ್ಮ ಮೊಬೈಲ್ ಫೋನ್‍ನಲ್ಲಿ ಗೂಗಲ್ ಸರ್ಚ್ ಎಂಜಿನ್‍ನಲ್ಲಿ ಹುಡುಕಿದ್ದರು. ಘಟನಾ ಸ್ಥಳದಲ್ಲಿ ದೊರೆತ ಮೊಬೈಲ್ ಫೋನ್‍ನ್ನು ಜಪ್ತಿ ಮಾಡಿ ಪರಿಶೀಲನೆ ನಡೆಸಿದಾಗ ಈ ಮಾಹಿತಿ ಸಿಕ್ಕಿದೆ. ಆದರೆ, ಮೊಬೈಲ್ ಫೋನ್‍ನಲ್ಲಿ ಡಯಲ್ ಮಾಡಿರುವ ಹಾಗೂ ಒಳ ಬಂದಿರುವ ಕಾಲ್ ರೆಜಿಸ್ಟರ್‍ನ್ನು ಡಿಲೀಟ್ ಮಾಡಲಾಗಿದೆ ಎಂದು ತನಿಖಾಧಿಕಾರಿ ಹೇಳಿದರು.
ಮೊಬೈಲ್ ಫೋನ್ ಪರಿಶೀಲನೆ ವೇಳೆ ಹಲವು ಮಹತ್ವದ ಮಾಹಿತಿ ಲಭ್ಯವಾಗಿವೆ. ಆದರೆ, ಅವುಗಳನ್ನು ಬಹಿರಂಗಪಡಿಸಲಾಗದು. ನಿಜಕ್ಕೂ ಅವರು ಆತ್ಮಹತ್ಯೆ ಮಾಡಿಕೊಳ್ಳಲು ಕಾರಣ ಏನು ಎನ್ನುವ ಅಂತಿಮ ನಿರ್ಧಾರಕ್ಕೆ ಬರಲು ಸಾಧ್ಯವಾಗಿಲ್ಲ ಎಂದಿದ್ದಾರೆ ತನಿಖಾಧಿಕಾರಿ. ಶವದ ಮರಣೋತ್ತರ ಪರೀಕ್ಷೆ ನಡೆಸಿ ಪಾಲಕರಿಗೆ ಹಸ್ತಾಂತರಿಸಲಾಗಿದೆ. ಅವರು ಶವವನ್ನು ತಮ್ಮ ಸ್ವಂತಊರಿಗೆ ತೆಗೆದುಕೊಂಡು ಹೋಗಿದ್ದಾರೆ. ಈಗಲೇ ಅವರನ್ನು ಪ್ರಶ್ನಿಸಲು ಸಾಧ್ಯವಾಗಿಲ್ಲ. ಏಕೆಂದರೆ ಅವರು ಮಗಳ ಸಾವಿನ್ ಆಘಾತದಲ್ಲಿದ್ದಾರೆ.
ಘಟನೆ ಬಗ್ಗೆ ತನಿಖೆ ಹಾಗೂ ವಿಚಾರಣೆಗಾಗಿ ವಾಪಸ್ ನಗರಕ್ಕೆ ಬರುವಂತೆ ಪಾಲಕರಿಗೆ ಹೇಳಿದ್ದೇವೆ ಎಂದರು. ಇಷಾ ಆತ್ಮಹತ್ಯೆಯ ಹಿಂದೆ ಕೆಲವರ ಕೈವಾಡ ಇರುವ ಸಾಧ್ಯತೆ ಇದೆ. ಅಥವಾ ವೈಯಕ್ತಿಕ ಖಾಸಗಿ ಸಂಬಂಧ ಕಾರಣವೂ ಇಷಾ ಅವರು ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವಾಗಿರಬಹುದು. ಆದರೆ, ಈಗಲೇ ಯಾವುದನ್ನು ಹೇಳಲಾಗದು. ತನಿಖೆ ನಂತರವೇ ಹೆಚ್ಚಿನ ಮಾಹಿತಿ ಸಿಗಲಿದೆ ಎಂದು ಪೊಲೀಸರು ಹೇಳಿದ್ದಾರೆ. ಸ್ಟೇ ಗ್ಲ್ಯಾಡ್ ಹೆಸರಿನ ವೆಲ್‍ನೆಸ್ ಸೆಂಟರ್‍ನನಲ್ಲಿ ಇಷಾ ಮಾರ್ಕೇಟಿಂಗ್ ಮಾ್ಯನೇಜರ್ ಆಗಿದ್ದರು. ಹಳೇ ಏರ್ ಪೋರ್ಟ್ ರಸ್ತೆಯಲ್ಲಿರುವ ಅಪಾರ್ಟ್ ಮೆಂಟ್‍ನಲ್ಲಿ ಉತ್ತರ ಪ್ರದೇಶ ಮೂಲದ ಸ್ನೇಹಿತೆಯರಾ ದ ಪೂನಮï ಮತ್ತು ಸ್ಮೃತಿ ಎಂಬುವರೊಂದಿಗೆ ನೆಲೆಸಿದ್ದರು.
ಭಾನುವಾರ ಸಂಜೆ ಹರಳೂರು ರಸ್ತೆಯಲ್ಲಿ ಶೋಭಾ ಕ್ಲಾಸಿಕ್ ಅಪಾರ್ಟ್‍ಮೆಂಟ್‍ಗೆ ತೆರಳಿದ್ದ ಇಷಾ 13ನೇ ಮಹಡಿಗೆತೆರಳಿಜಿಗಿದುಆತ್ಮಹತ್ಯೆಮಾಡಿಕೊಂಡಿದ್ದರು. ತಾನು ವಾಸವಿರುವ ಅಪಾರ್ಟ್‍ಮೆಂಟ್‍ನಿಂದ ಸುಮಾರು 13 ಕಿ ಮೀ ದೂರದಲ್ಲಿರುವ ಬೇರೊಂದು ಅಪಾರ್ಟ್‍ಮೆಂಟ್‍ಗೆ ಬಂದು ಆತ್ಮಹತ್ಯೆ ಮಾಡಿಕೊಳ್ಳಲು ಕಾರಣ ಏನು ಎನ್ನುವುದು ಅಸ್ಪಷ್ಟವಾಗಿದೆ. ಸುಮಾರು 250 ಫ್ಲ್ಯಾಟ್‍ಗಳಿರುವ ಅಪಾಟ್ರ್ ಮೆಂಟ್‍ನಲ್ಲಿ ವಾಸವಿರುವ ಯಾರೊಬ್ಬರೂ ಕೂಡಾ ತಮಗೆ ಇಷಾ ಪರಿಚಯ ಇದ್ದಾಳೆ ಎಂದು ಹೇಳಿಲ್ಲ. ಅಲ್ಲದೇ ಫ್ಲ್ಯಾಟ್‍ನ ಸೆಕ್ಯುರಿಟಿ ಗಾರ್ಡ್‍ಗೂ ಕೂಡಾ ಇಷಾ ಒಳಗೆ ಬಂದಿರುವ ಬಗ್ಗೆ ಮಾಹಿತಿ ಇಲ್ಲ. ಪ್ರವೇಶ ಗೇಟ್ ಬಳಿರುವ ಲೆಡ್ಜರ್ ಬುಕ್‍ನಲ್ಲಿಯೂ ಇಷಾ ಹೆಸರು ನಮೂದಾಗಿಲ್ಲ. ಹೀಗಾಗಿ, ಇಷಾ ಕಟ್ಟಡಕ್ಕೆ ಬಂದಿದ್ದೂ ಹಾಗೂ ಆತ್ಮಹತ್ಯೆಗೆ ಶರಣಾಗಿದ್ದು ಅತ್ಯಂತ ನಿಗೂಢವಾಗಿದೆ.
Advertisement