
ಮೈಸೂರು: ಮೈಸೂರು ಫ್ಯಾಷನ್ ವೀಕ್ ನ ಎರಡನೇ ಆವೃತ್ತಿ ಸೆಪ್ಟೆಂಬರ್ 4 ರಿಂದ ಪ್ರಾರಂಭವಾಗಲಿದೆ. ಮೂರು ದಿನ(ಸೆ.6 ವರೆಗೆ) ನಡೆಯುವ ಕಾರ್ಯಕ್ರಮದಲ್ಲಿ ಅತ್ಯುನ್ನತ ಡಿಸೈನರ್ ಗಳು ಭಾಗವಹಿಸಲಿದ್ದಾರೆ ಎಂದು ಕಾರ್ಯಕ್ರಮದ ಆಯೋಜಕರು ತಿಳಿಸಿದ್ದಾರೆ.
ಕಳೆದ ವರ್ಷ ಪ್ರಾರಂಭವಾದ ಕಾರ್ಯಕ್ರಮವನ್ನು ಪ್ರತಿ ಸೆಪ್ಟೆಂಬರ್ ತಿಂಗಳ ಮೊದಲನೇ ವಾರದಂದು ನಡೆಸಲಾಗುತ್ತದೆ ಎಂದು ಮೈಸೂರು ಫ್ಯಾಷನ್ ವೀಕ್ ನ ಸಂಸ್ಥಾಪಕಿ ಜಯಂತಿ ಬಲ್ಲಾಳ್ ಹೇಳಿದ್ದಾರೆ. ಈ ವರ್ಷ ನಡೆಯಲಿರುವ ಮೈಸೂರು ಫ್ಯಾಷನ್ ವೀಕ್ ನಲ್ಲಿ ಬಾಲಿವುಡ್ ತಾರೆಯರಾದ ವಿದ್ಯುಕ್ತ್ ಜಮ್ವಾಲ್, ಅಲಿ ಖಾನ್ ಹಾಗೂ ದಕ್ಷಿಣ ಭಾರತದ ಚಿತ್ರರಂಗದ ಅಮಲ ಪಾಲ್, ಸಂಜನಾ ಗಲ್ರಾಣಿ, ಪರುಲ್ ಯಾದವ್, ಭಾಗವಹಿಸಲಿದ್ದಾರೆ.
ಮೈಸೂರು ಫ್ಯಾಷನ್ ವೀಕ್ ನಲ್ಲಿ ಸಮಕಾಲೀನ ವಿನ್ಯಾಸಗಳ ಪ್ರದರ್ಶನ ನಡೆಯಲಿದ್ದು ದೇಶ ವಿದೇಶದಿಂದ 18 ಮಂದಿ ವಿನ್ಯಾಸಗಾರರು ಪಾಲ್ಗೊಳ್ಳ ಲಿದ್ದಾರೆ. ಈ ಮೂಲಕ ಸ್ಥಳೀಯ ಮತ್ತು ರಾಷ್ಟ್ರೀಯ ಡಿಸೈನರ್ ಗಳ ಉಡುಪುಗಳ ಪ್ರದರ್ಶನ ವನ್ನು ಪ್ರಖ್ಯಾತ ಮಾಡೆಲ್‌ಗಳ ಮೂಲಕ ರ‌್ಯಾಂಪ್‌ವಾಕ್ ರೀತಿಯಲ್ಲಿ ಮಾಡಲಾಗುವುದು ಎಂದು ಜಯಂತಿ ಬಲ್ಲಾಳ್ ತಿಳಿಸಿದ್ದಾರೆ. ಕಳೆದ ಬಾರಿ ಆಯೋಜಿಸಲಾಗಿದ್ದ ಎಂಎಫ್ ವಿ ನಿರೀಕ್ಷೆಗೂ ಮೀರಿದ ಯಶಸ್ಸು ಗಳಿಸಿತ್ತು. ಆದ್ದರಿಂದ ಎರಡನೇ ಆವೃತ್ತಿ ಆರಂಭವಾಗುವುದನ್ನು ಎಲ್ಲರೂ ಕಾತುರದಿಂದ ಎದುರುನೋಡುತ್ತಿದ್ದಾರೆ ಎಂದು ಜಯಂತಿ ಬಲ್ಲಾಳ್ ಹೇಳಿದ್ದಾರೆ.
Advertisement