ನೆಹರು ಮ್ಯೂಸಿಯಂ ಹೆಸರು ಬದಲಿಸಲು ಯತ್ನ

ದೆಹಲಿಯಲ್ಲಿರುವ ಜವಾಹರ್‍ಲಾಲ್ ನೆಹರು ಹೆಸರಿನಲ್ಲಿ ರುವ ಗ್ರಂಥಾಲಯ ಮತ್ತು ವಸ್ತು ಸಂಗ್ರಹಾಲಯವನ್ನು ಆಧುನೀಕ ರಣಗೊಳಿಸುವ ಪ್ರಸ್ತಾಪವನ್ನು ಚಿಂತಕರಾದ...
ಜವಾಹರ್‍ಲಾಲ್ ನೆಹರು ಗ್ರಂಥಾಲಯ ಮತ್ತು ವಸ್ತು ಸಂಗ್ರಹಾಲಯ
ಜವಾಹರ್‍ಲಾಲ್ ನೆಹರು ಗ್ರಂಥಾಲಯ ಮತ್ತು ವಸ್ತು ಸಂಗ್ರಹಾಲಯ

ಬೆಂಗಳೂರು: ದೆಹಲಿಯಲ್ಲಿರುವ ಜವಾಹರ್‍ಲಾಲ್ ನೆಹರು ಹೆಸರಿನಲ್ಲಿ ರುವ ಗ್ರಂಥಾಲಯ ಮತ್ತು ವಸ್ತು ಸಂಗ್ರಹಾಲಯವನ್ನು ಆಧುನೀಕ ರಣಗೊಳಿಸುವ ಪ್ರಸ್ತಾಪವನ್ನು ಚಿಂತಕರಾದ ಗೋಪಾಲಕೃಷ್ಣ ಗಾಂಧಿ ಗಿರೀಶ್ ಕಾರ್ನಾಡ್, ರೊಮಿಲಾ ಥಾಪರ್ ಮತ್ತು ಅನನ್ಯಾ ವಾಜಪೇಯಿ ಸ್ವಾಗತಿಸಿದ್ದಾರೆ. ನೆಹರೂ ಮ್ಯೂಸಿಯಂ ಅನ್ನು ``ಮ್ಯೂಸಿಯಂ ಆಫ್  ಗವರ್ನೆನ್ಸ್'' ಎಂದು ಮರು ನಾಮ ಕರಣಗೊಳಿಸಲು ಕೇಂದ್ರ ಸರ್ಕಾರ ಮುಂದಾಗಿದೆ ಎಂಬ ಆತಂಕ ವನ್ನು ಅವರು ವ್ಯಕ್ತಪಡಿಸಿದ್ದಾರೆ. ಈ ಮೂಲಕ ಹಾಲಿ ಸರ್ಕಾರ ನವೀಕರಣದ ಹೆಸರಿನಲ್ಲಿ ಅದನ್ನು ತನ್ನ ಸಾಧನೆಗಳ ಪಟ್ಟಿಗೆ ಸೇರಿಸಿ ಕೊಳ್ಳಲಿದೆ ಎಂಬ ವರದಿಯ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.

ದೇಶದ ಪ್ರಥಮ ಪ್ರಧಾನಿಗೆ ಅರ್ಪಿತವಾಗಿರುವ ನೆಹರೂ ಮ್ಯೂಸಿಯಂ ಅನ್ನು ಪುನರುಜ್ಜೀವನಗೊಳಿ ಸುವುದು ಸರ್ಕಾರ ತನ್ನ ಪ್ರತಿಷ್ಠೆಯನ್ನು ಹೆಚ್ಚಿಸಿಕೊಳ್ಳುವ ವಿಷಯವಾಗಕೂಡದು ಎಂಬುದು ಅವರ ಒಮ್ಮತದ ಅಭಿಪ್ರಾಯವಾಗಿದೆ. ಸರ್ಕಾರಗಳು ಬದಲಾದರೂ ವಸ್ತುಸಂಗ್ರಹಾಲ ಯದ ಐತಿಹ್ಯಕ್ಕೆ ಧಕ್ಕೆಯಾಗ ಬಾರದು. ಜಗತ್ತಿನಾ ದ್ಯಂತ ದೇಶಗಳಲ್ಲಿ ರಾಜಕೀಯ ನಾಯಕರ ಮನೆಗಳನ್ನು ಮ್ಯೂಸಿಯಂ ಮತ್ತು ಸ್ಮಾರಕಗಳಾಗಿ ಬದಲಿಸಿ ಸಾರ್ವಜನಿಕರಿಗೆ ಮುಕ್ತಪ್ರವೇಶ ಒದಗಿಸಲಾಗಿದೆ. ಅದೇ ಮಾದರಿಯಲ್ಲಿ ಜನತೆಗೆ ಮ್ಯೂಸಿಯಂ ಅನ್ನು ಮುಕ್ತವಾಗಿಟ್ಟು ಇತಿಹಾಸ ತಲುಪುವಂತೆ ಮಾಡಬೇಕೆಂದು ಅವರು ಪ್ರತಿಪಾದಿಸಿದ್ದಾರೆ. ಗ್ರಂಥಾಲಯದ ಮರುವಿನ್ಯಾಸದ ಬಗ್ಗೆಯೂ ಅಸಮಾಧಾನ ವ್ಯಕ್ತವಾಗಿದ್ದು, ನೆಹರು ಲೈಬ್ರರಿಯಲ್ಲಿ ಎಲ್ಲರಿಗೂ ಉಪಯುಕ್ತವಾದ ಆಧುನಿಕ ಭಾರತದ ಇತಿಹಾಸ, ಎಡಪಂಥೀಯ ಇತಿಹಾಸ, 2 ಪ್ರಪಂಚ ಮಹಾಯುದ್ಧ ಗಳು ಸೇರಿದಂತೆ ಪ್ರಮುಖ ವಿಚಾರಗಳ ಪ್ರಸ್ತಾಪವಿದೆ ಎಂದು ವಾದಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com