ಹಜ್‍ಯಾತ್ರೆ ವಿಮಾನಕ್ಕೆ ಹುಸಿ ಬಾಂಬ್

ಸೌದಿ ಅರೇಬಿಯಾದ ಹಜ್ ಯಾತ್ರೆಗೆ ಪ್ರಯಾಣಿಕರನ್ನು ಕರೆದೊಯುತ್ತಿದ್ದ ಮೂರು ವಿಮಾನಗಳಲ್ಲಿ ಬಾಂಬ್ ಇಡಲಾಗಿದೆ ಎನ್ನುವ ಅನಾಮಧೇಯ ವ್ಯಕ್ತಿಯ ವಾಟ್ಸ್ ಆ್ಯಪ್ ಸಂದೇಶದಿಂದ ಶುಕ್ರವಾರ ತಡರಾತ್ರಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು...
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (ಸಾಂದರ್ಭಿಕ  ಚಿತ್ರ)
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (ಸಾಂದರ್ಭಿಕ ಚಿತ್ರ)

ಬೆಂಗಳೂರು: ಸೌದಿ ಅರೇಬಿಯಾದ ಹಜ್ ಯಾತ್ರೆಗೆ ಪ್ರಯಾಣಿಕರನ್ನು ಕರೆದೊಯುತ್ತಿದ್ದ ಮೂರು ವಿಮಾನಗಳಲ್ಲಿ ಬಾಂಬ್ ಇಡಲಾಗಿದೆ ಎನ್ನುವ ಅನಾಮಧೇಯ ವ್ಯಕ್ತಿಯ ವಾಟ್ಸ್ ಆ್ಯಪ್ ಸಂದೇಶದಿಂದ ಶುಕ್ರವಾರ ತಡರಾತ್ರಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ಆದರೆ, ಮೂರು ವಿಮಾನಗಳಲ್ಲಿ ತಪಾಸಣೆ ನಡೆಸಿದ ಕೈಗಾರಿಕಾ ಭದ್ರತಾ ಪಡೆ ಹಾಗೂ ವಿಮಾನ ನಿಲ್ದಾಣ ಅಧಿಕಾರಿಗಳು ಯಾವುದೇ ಬಾಂಬ್ ಸಿಗದಿದ್ದಾಗ ಇದೊಂದು ಹುಸಿ ಬಾಂಬ್ ಕರೆ ಎಂದು ಖಚಿತಪಡಿಸಿದ ಬಳಿಕ ವಿಮಾನಗಳು ಟೇಕ್ ಆಫ್ ಆದವು.

ವಾಟ್ಸ್ ಆ್ಯಪ್ ಸಂದೇಶ: ಗ್ರಾಹಕರ ಅಭಿಪ್ರಾಯ ಪ್ರತಿಕ್ರಿಯೆಗಳಿಗಾಗಿ ವಿಮಾನ ನಿಲ್ದಾಣದ ವೆಬ್ ಸೈಟ್‍ನಲ್ಲಿ ಮೊಬೈಲ್ ನಂಬರ್ ನೀಡಲಾಗಿದ್ದು ಗ್ರಾಹಕರು ಅದಕ್ಕೆ ತಮ್ಮ ಅಭಿಪ್ರಾಯವನ್ನು ವಾಟ್ಸ್ ಆ್ಯಪ್ ಮೂಲಕ ಕಳುಹಿಸಬಹುದು.

ಈ ನಂಬರ್ ತೆಗೆದುಕೊಂಡ ಆರೋಪಿ, ತಡರಾತ್ರಿ 1.40ರ ಸುಮಾರಿಗೆ `ದೇರ್ ವೇರ್ ಬಾಂಬ್ಸ್ ಆನ್ 3 ಏರ್ ಕ್ರಾಫ್ಟ್ಸ್ಅಪರೇಟೆಡ್ ಬೈ ಲೂಫ್ತಾನ್ಸಾ, ಸೌದಿ ಏರ್‍ಲೈನ್ಸ್ ಹಾಗೂ ಏರ್ ಫ್ರಾನ್ಸ್' ಎಂದು ಸಂದೇಶ ಕಳುಹಿಸಿದ. ಕೂಡಲೇ ವಾಟ್ಸ್ ಆ್ಯಪ್ ಸಂದೇಶಗಳ ಗಮನಿಸುತ್ತಿದ್ದ ಸಿಬ್ಬಂದಿ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‍ಎಫ್) ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಅದರೊಂದಿಗೆ ಜತೆಗೆ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿ ಸಂದೇಶ ಬಂದಿದ್ದ ಮೊಬೈಲ್ ಸಂಖ್ಯೆಯನ್ನು ನೀಡಲಾಯಿತು.

ಟೇಕಾಫ್ ರದ್ದು: ಕೂಡಲೇ ಸಿಐಎಸ್‍ಎಫ್ ಹಾಗೂ ವಿಮಾನ ನಿಲ್ದಾಣ ಭದ್ರತಾ ಅಧಿಕಾರಿಗಳು ಸೌದಿಗೆ ತೆರಳಲು ಸಿದ್ದವಾಗುತ್ತಿದ್ದ ಮೂರು ವಿಮಾನಗಳ ಟೇಕ್ ಆಫ್ ನ್ನು ರದ್ದುಗೊಳಿಸಿ ಎಲ್ಲಾ
ಪ್ರಯಾಣಿಕರನ್ನು ಕೆಳಗಿಳಿಸಿದ್ದಾರೆ. ಬಳಿಕ ಶ್ವಾನ ದಳ, ಬಾಂಬ್ ಪತ್ತೆ ಹಾಗೂ ನಿಷ್ಕ್ರಿಯ ದಳವನ್ನು ಕರೆಸಿಕೊಂಡ ಸಂಪೂರ್ಣ ತಪಾಸಣೆ ನಡೆಸಿದರು. ಆದರೆ, ಎಲ್ಲಿಯೂ ಸ್ಪೋಟಕ ವಸ್ತುಗಳು ಕಂಡುಬಾರದಿದ್ದಾಗ ಇದೊಂದು ಹುಸಿ ಬಾಂಬ್ ಕರೆ ಎನ್ನುವುದ ಖಚಿತವಾಗಿತ್ತು. ಅದಾದ ಬಳಿಕ ಮತ್ತೆ ಪ್ರಯಾಣಿಕರನ್ನು ಹತ್ತಿಸಿಕೊಂಡ ವಿಮಾನಗಳು 5 ಗಂಟೆ ಬಳಿಕ ತಮ್ಮ ಪ್ರಯಾಣ ಆರಂಭಿಸಿದವು.

ದೆಹಲಿಗೂ ಹುಸಿ ಬೆದರಿಕೆ: ಕೆಐಎಎಲ್‍ಗೆ ಬೆದರಿಕೆ ಬಂದ ಕೆಲ ಗಂಟೆಗಳಲ್ಲಿ ಬಳಿಕ ದೆಹಲಿ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೂ ಬೆದರಿಕೆ ಕರೆ ಬಂದಿತ್ತು. ದೆಹಲಿಯಿಂದ ಹೊರಡಲಿರುವ 3 ವಿಮಾನಗಳಲ್ಲಿ ಬಾಂಬ್ ಇಡಲಾಗಿದೆ ಎಂದು ಹೇಳಲಾಗಿತ್ತು. ೀ ಹಿನ್ನಲೆಯಲ್ಲಿ ಪ್ರಯಾಣ ಬೆಳಸಿದ್ದ ವಿಮಾನಗಳನ್ನು ವಾಪಸ್ ಕರೆಸಿಕೊಂಡು ತಪಾಸಣೆ ಮಾಡಲಾಯಿತು. ಪರಿಶೀಲನೆ ನಡೆಸಿದ ಬಳಿಕವಷ್ಟೇ ಬೆದರಿಕೆ ಕರೆ ಹುಸಿ ಎಂಬುದು ಗೊತ್ತಾಗಿತ್ತು. ದೆಹಲಿಗೆ ಕರೆ ಮಾಡಿದ ವ್ಯಕ್ತಿಗೂ, ಕೆಐಎಲ್ ಗೆ ಸಂದೇಶ ಕಳುಹಿಸಿದ ವ್ಯಕ್ತಿಗೂ ಏನಾದರೂ ನಂಟು ಇದೆಯಾ ಎನ್ನುವುದರ ಬಗ್ಗೆ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.

ಶಂಕಿತನ ಬಂಧನವಿಚಾರಣೆ ಸಂದೇಶ ಬಂದಿದ್ದ ಮೊಬೈಲ್ ಸಂಖ್ಯೆ ಆಧಾರದ ಮೇಲೆ ವಿಳಾಸ ಹಿಡಿದು ಹೊರಟ ಅಧಿಕಾರಿಗಳು ಶಂಕಿತ ಆರೋಪಿಯನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಆರೋಪಿ ಆ ಸಿಮï ಕಾರ್ಡ್ ಅನ್ನು ತಾನು ಬಳಕೆ ಮಾಡುತ್ತಿರಲಿಲ್ಲ. ತನ್ನ ಹೆಸರಿನಲ್ಲಿ ಬೇರೆಯವರಿಗೂ ಸಿಮ್ ಕೊಡಿಸಿಲ್ಲ ಎಂದು ಹೇಳುತ್ತಿದ್ದಾನೆ. ಹೀಗಾಗಿ, ಪೊಲೀಸರು  ಸಿಮ್ ಕಾರ್ಡ್ ಮಾರಾಟ ಮಾಡಿದ್ದ ಮಳಿಗೆಯ ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಆಸೆ ತಂದ ಬಂಧನ
ಗೆಳೆಯನ ಪತ್ನಿಯನ್ನು ಒಲಿಸಿಕೊಳ್ಳಲಾಗದ ಸಿಟ್ಟಿನಲ್ಲಿ ಆತನ ಫೋನ್‍ನಿಂದ ವಾಟ್ಸಾಪ್ ಸಂದೇಶ ಕಳಿಸಿದ್ದ ಎಚ್‍ಎಸ್‍ಆರ್ ಲೇಔಟ್‍ನ ಗೋಕುಲ ಎಂಬ ಕೇರಳ ಮೂಲದ ವ್ಯಕ್ತಿಯನ್ನು
ತಡರಾತ್ರಿ ಬಂಧಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com