53ನೇ ದಿನಕ್ಕೆ ಕಾಲಿಟ್ಟ ಮಹದಾಯಿ ಹೋರಾಟ

ಕಳಸಾಬಂಡೂರಿ ಯೋಜನೆ ಅನುಷ್ಠಾನ ಮತ್ತು ಮಹದಾಯಿ ನೀರಿನ ಹಕ್ಕಿಗಾಗಿ ರೈತರು ಪಟ್ಟು ಹಿಡಿದು ರೈತರು ನಡೆಸುತ್ತಿದ್ದ ಹೋರಾಟ 53ನೇ ದಿನಕ್ಕೆ ಮುಂದುವರೆಗಿದೆ...
ಮಹದಾಯಿ ಹೋರಾಟ (ಸಂಗ್ರಹ ಚಿತ್ರ)
ಮಹದಾಯಿ ಹೋರಾಟ (ಸಂಗ್ರಹ ಚಿತ್ರ)

ಹುಬ್ಬಳ್ಳಿ: ಕಳಸಾಬಂಡೂರಿ ಯೋಜನೆ ಅನುಷ್ಠಾನ ಮತ್ತು ಮಹದಾಯಿ ನೀರಿನ ಹಕ್ಕಿಗಾಗಿ ರೈತರು ಪಟ್ಟು ಹಿಡಿದು ರೈತರು ನಡೆಸುತ್ತಿದ್ದ ಹೋರಾಟ 53ನೇ ದಿನಕ್ಕೆ ಮುಂದುವರೆಗಿದೆ.

ಮಲಪ್ರಭಾ ಅಚ್ಚುಕಟ್ಟು ಪ್ರದೇಶದಲ್ಲಿ ಬರುವ ನರಗುಂದ, ಬಾದಾಮಿ, ನವಲಗುಂದ ಮತ್ತು ಗದಗ ನಗರಗಳಲ್ಲಿ ಬಿರುಸಾಗಿಯೋ ನಡೆದಿರುವ ಈ ಹೋರಾಟ ನೆರೆಯ ಜಿಲ್ಲೆ, ನಗರ ಮತ್ತು  ಗ್ರಾಮಗಳೆನ್ನುವ ಬೇಧವೆನಿಸದೇ ಜನಾಂದೋಲನವಾಗಿ ರೂಪುಗೊಂಡಿದ್ದು, ದಿನದಿಂದ ದಿನಕ್ಕೆ ತಾರಕಕ್ಕೇರುತ್ತಿದೆ. ನರಗುಂದ, ನವಲಗುಂದ ಎಂದಿನಂತೆ ಬಂದ್ ಆಗಿದ್ದವು. ಗದಗ, ಹುಬ್ಬಳ್ಳಿ, ಧಾರವಾಡದಲ್ಲಿ ಇಂದೂ ಕೆಲವು ಸಂಘಟನೆಗಳು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದವು.

ಅದರಂತೆ ಹುಬ್ಬಳ್ಳಿ-ಸೊಲ್ಲಾಪುರ ಹೆದ್ದಾರಿಯೂ ಬಂದ್ ಆಗಿದ್ದರಿಂದ ಸಾರಿಗೆ ಸಂಚಾರಕ್ಕೆ  ವ್ಯತ್ಯಯವಾಗಿತ್ತು. ಮಹದಾಯಿಗಾಗಿ ಹುಬ್ಬಳ್ಳಿಯಲ್ಲಿ ಪ್ರತ್ಯೋಕ ಹೋರಾಟ ಶುರು ಮಾಡಿರುವ ಬಿಜೆಪಿ ಪ್ರತಿಭಟನೆಗೆ ಭಾನುವಾರ ಮಹಿಳಾ ಮೋರ್ಚಾದ ಸದಸ್ಯೆಯರು ಸಾತ್ ನೀಡಿ ಮಹದಾಯಿ ನೀರಿಗಾಗಿ ಕೇಂದ್ರ ಸರ್ಕಾರವನ್ನು ಆಗ್ರಹಿಸಿದರು.

ಆಲ್ ಇಂಡಿಯಾ ಮಜೀತ್ ಎಇತೇಹಾದುಲ್ ಮುಸ್ಲೀಮ್ ಸಂಘಟನೆಯ ನೂರಾರು ಕಾರ್ಯಕರ್ತರು ಹುಬ್ಬಳ್ಳಿ ಕಿತ್ತೂರು ಚೆನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಮಹದಾಯಿ ನೀರಿಗಾಗಿ ಆಗ್ರಹಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com