ಸಂಕಷ್ಟದ ನೀರು ಬಿಟ್ಟಿದ್ದೇವೆ, ಈಗಾಗಲ್ಲ: ಜಯಚಂದ್ರ

ತಮಿಳುನಾಡಿಗೆ ಕಾವೇರಿ ನೀರು ಬಿಡಲು ಸಾಧ್ಯವಿಲ್ಲ. ಸಂಕಷ್ಟದ ಸಮಯದ ನೀರು ಎಂದು ತೀರ್ಮಾನಿಸಿ ಕಳೆದ ಆಗಸ್ಟ್‍ವರಗೆ ಬಿಡಲಾಗಿದೆ. ಮಳೆ ಅಭಾವದಿಂದ ನಮಗೇ ಕುಡಿಯುವ ನೀರಿಗೆ ತೊಂದರೆಯಾಗಿದೆ ಎಂದು ಪಶು ಸಂಗೋಪನಾ ಸಚಿವ ಟಿ.ಬಿ. ಜಯಚಂದ್ರ ಹೇಳಿದ್ದಾರೆ...
ಪಶು ಸಂಗೋಪನಾ ಸಚಿವ ಟಿ.ಬಿ. ಜಯಚಂದ್ರ (ಸಂಗ್ರಹ ಚಿತ್ರ)
ಪಶು ಸಂಗೋಪನಾ ಸಚಿವ ಟಿ.ಬಿ. ಜಯಚಂದ್ರ (ಸಂಗ್ರಹ ಚಿತ್ರ)

ತುಮಕೂರು: ತಮಿಳುನಾಡಿಗೆ ಕಾವೇರಿ ನೀರು ಬಿಡಲು ಸಾಧ್ಯವಿಲ್ಲ. ಸಂಕಷ್ಟದ ಸಮಯದ ನೀರು ಎಂದು ತೀರ್ಮಾನಿಸಿ ಕಳೆದ ಆಗಸ್ಟ್‍ವರಗೆ ಬಿಡಲಾಗಿದೆ. ಮಳೆ ಅಭಾವದಿಂದ ನಮಗೇ ಕುಡಿಯುವ ನೀರಿಗೆ ತೊಂದರೆಯಾಗಿದೆ ಎಂದು ಪಶು ಸಂಗೋಪನಾ ಸಚಿವ ಟಿ.ಬಿ. ಜಯಚಂದ್ರ ಹೇಳಿದ್ದಾರೆ.

ಅವರು ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ತಮಿಳುನಾಡಿಗೆ ಈವರೆಗೆ ಬಿಜಿನೆಸ್ ಫಾರ್ಮುಲಾ ಪ್ರಕಾರ ನೀರು ಬಿಡಲಾಗಿದೆ. ಈಗ ರಾಜ್ಯಕ್ಕೇ ನೀರು ಇಲ್ಲದಿದ್ದರಿಂದ ಮಳೆ ಬಂದರಷ್ಟೇ ನೀರು ಬಿಡುತ್ತೇವೆ ಎಂದು ಹೇಳಿದರು. ಈ ಬಾರಿ ನೀರಾವರಿ ಕಷ್ಟ ಹೇಮಾವತಿ ಅಚ್ಚುಕಟ್ಟು ಪ್ರದೇಶಗಳಿಗೆ ಈ ಬಾರಿ ನೀರಾವರಿಗೆ ನೀರೊದಗಿಸುವುದು ಕಷ್ಟ. ಈವರೆಗೂ ಮಳೆ ಸರಿಯಾಗಿ ಬಾರದೇ ಇರುವುದರಿಂದ ಕಬ್ಬು, ಬತ್ತದಂತಹ ಬೆಳೆಗಳಿಗೆ ನೀರೊದಗಿಸಲು ಸಾಧ್ಯವಿಲ್ಲ ಎಂದು ಈಗಾಗಲೇ ರೈತರಿಗೆ ಮಾಹಿತಿ ನೀಡಲಾಗಿದೆ. ಹೀಗಾಗಿ ಒಣ ಬೇಸಾಯದ ರಾಗಿಯಂತಹ ಬೆಳೆಗಳಿಗಷ್ಟೇ ನೀರೊದಗಿಸಲು ಸಾಧ್ಯ. ಮಂಡ್ಯ, ಹಾಸನ, ತುಮಕೂರು ಭಾಗದ ಅ„ಕಾರಿಗಳ ಸಭೆ ನಡೆಸಿ ಈ ಬಗ್ಗೆ ಸೂಚಿಸಲಾಗಿದೆ ಎಂದರು.

ಕೃಷಿಗೆ ಪೂರಕವಾಗಿರುವ ಪಶುಸಂಗೋಪನೆಯನ್ನು ಕೃಷಿಯೆಂದು ತೀರ್ಮಾನಿಸಿ ಪಶುಭಾಗ್ಯಎಂದು ನಾಮಕರಣ ಮಾಡಲಾಗಿದೆ. ಮೀನುಗಾರಿಕೆ, ಕುರಿ, ಮೇಕೆ, ಹಸು, ಎಮ್ಮೆ, ಹಂದಿ, ಕೋಳಿ ಸಾಕಾಣಿಕೆ ಎಲ್ಲವೂ ಈ ಪಶುಭಾಗ್ಯದಡಿ ಬರುತ್ತದೆ. ಪಶುಭಾಗ್ಯ ಯೋಜನೆಯಡಿ 18,471 ಫಲಾನುಭವಿಗಳಿದ್ದಾರೆ. ಈ ಯೋಜನೆಯ ಫಲಾನುಭವಿಗಳಿಗೆ ಶೇ.12 ರ ಬಡ್ಡಿದರದಲ್ಲಿ ರು.1.20 ಲಕ್ಷ ಸಾಲ ನೀಡಲಾಗುವುದು. ಇದಕ್ಕಾಗಿ ರಾಜ್ಯದಲ್ಲಿ ರು.53 ಕೋಟಿ ಮೀಸಲಿಡಲಾಗಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ 297 ಕುರಿ ಉತ್ಪನ್ನ ಸಹಕಾರ ಸಂಘಗಳಿವೆ. ಉಣ್ಣೆ, ಕೃತಕ ಗರ್ಭಧಾರಣೆ ಸೇರಿದಂತೆ ಇತರೆ ಕೆಲಸಗಳಿಗೆ ರು.20 ಕೋಟಿ ಪ್ರೊತ್ಸಾಹ ಧನ ನೀಡಲು ನಿಧಿ ಸ್ಥಾಪಿಸಲಾಗಿದೆ. ಜಾನುವಾರು ವಿಮೆಯನ್ನು ಹಾಲು ಒಕ್ಕೂಟ, ಫಲಾನುಭವಿ ಹಾಗೂ ಸರ್ಕಾರದ ಆಶ್ರಯದಲ್ಲಿ ಜಾರಿಗೊಳಿಸಲಾಗಿದೆ. ವಿಮಾ ಮೊತ್ತ ರು.50 ಸಾವಿರವಾಗಿದ್ದು, ವಾರ್ಷಿಕ ರು.1500 ವಿಮಾ ಕಂತನ್ನು ಕಟ್ಟಬೇಕಾಗಿದೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com