ಶೀಘ್ರ ಹಂತಕರ ಪತ್ತೆ: ಬಿದರಿ ವಿಶ್ವಾಸ

ಡಾ. ಎಂ.ಎಂ. ಕಲಬುರ್ಗಿ ಪ್ರಕರಣವನ್ನು ಆದಷ್ಟು ಶೀಘ್ರ ಭೇದಿಸಿ ಹಂತಕರನ್ನು ಪೊಲೀಸ್ ಇಲಾಖೆ ಪತ್ತೆ ಹಚ್ಚಲಿದೆ ಎಂಬ ವಿಶ್ವಾಸವನ್ನು ನಿವೃತ್ತ ಹಿರಿಯ ಪೊಲೀಸ್ ಅಧಿಕಾರಿ ಶಂಕರ ಬಿದರಿ ವ್ಯಕ್ತಪಡಿಸಿದ್ದಾರೆ...
ನಿವೃತ್ತ ಹಿರಿಯ ಪೊಲೀಸ್ ಅಧಿಕಾರಿ ಶಂಕರ ಬಿದರಿ (ಸಂಗ್ರಹ ಚಿತ್ರ)
ನಿವೃತ್ತ ಹಿರಿಯ ಪೊಲೀಸ್ ಅಧಿಕಾರಿ ಶಂಕರ ಬಿದರಿ (ಸಂಗ್ರಹ ಚಿತ್ರ)

ಧಾರವಾಡ: ಡಾ. ಎಂ.ಎಂ. ಕಲಬುರ್ಗಿ ಪ್ರಕರಣವನ್ನು ಆದಷ್ಟು ಶೀಘ್ರ ಭೇದಿಸಿ ಹಂತಕರನ್ನು ಪೊಲೀಸ್ ಇಲಾಖೆ ಪತ್ತೆ ಹಚ್ಚಲಿದೆ ಎಂಬ ವಿಶ್ವಾಸವನ್ನು ನಿವೃತ್ತ ಹಿರಿಯ ಪೊಲೀಸ್ ಅಧಿಕಾರಿ  ಶಂಕರ ಬಿದರಿ ವ್ಯಕ್ತಪಡಿಸಿದ್ದಾರೆ.

ಇಲ್ಲಿಯ ಕಲ್ಯಾಣನಗರದ ಡಾ.ಕಲಬುರ್ಗಿ ನಿವಾಸಕ್ಕೆ ಸೋಮವಾರ ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದ ಬಳಿಕ ಮಾತನಾಡಿದ ಅವರು, ಪೊಲೀಸ್ ಇಲಾಖೆ, ಸಿಐಡಿ ಅಥವಾ  ಸಿಬಿಐ ನಿಂದಲೇ ತನಿಖೆ ಆಗಲಿ. ಆದರೆ, ಆದಷ್ಟು ಬೇಗ ಆರೋಪಿಗಳನ್ನು ಪತ್ತೆ ಹಚ್ಚುವ ಕಾರ್ಯ ತನಿಖಾ ತಂಡಗಳು ಮಾಡಬೇಕು. ಈ ನಿಟ್ಟಿನಲ್ಲಿ ಸರ್ಕಾರ ತನಿಖಾ ತಂಡದ ಮೇಲೆ ಒತ್ತಡ  ಹಾಕಬೇಕು ಎಂದರು. ಡಾ. ಕಲಬುರ್ಗಿ ಅವರೊಂದಿಗೆ ತುಂಬ ಹಳೆಯ ಸಂಬಂಧ. ಕಳೆದ 23 ವರ್ಷಗಳಿಂದ ಅಷ್ಟೇ ಅವರ ಸಂಪರ್ಕ ಇರಲಿಲ್ಲ.

ಈ ಘಟನೆಯಿಂದ ದೊಡ್ಡ ಆಘಾತ ಉಂಟಾಗಿದ್ದು, ಸತ್ಯ ಪ್ರತಿಪಾದಕ, ಸಂಶೋಧಕ, ಸಾಹಿತಿಯೊಬ್ಬರ ಅಂತ್ಯ ಈ ರೀತಿ ಕಾಣಬಾರದಿತ್ತು. ಇಡೀ ಸಾಹಿತ್ಯ ವಲಯದಲ್ಲಿ ಅಷ್ಟೇ ಅಲ್ಲ ಇಡೀ  ಕರ್ನಾಟಕ ಇತಿಹಾಸದಲ್ಲಿ ಇದೊಂದು ಕಪ್ಪು ಚುಕ್ಕೆ ಎಂದು ವಿಷಾದಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com