
ಬೆಂಗಳೂರು: ಭೂ ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಮಾಜಿ ಮೇಯರ್ ಡಿ. ವೆಂಕಟೇಶಮೂರ್ತಿ ವಿರುದ್ಧ ಹೈಕೋಟ್ರ್ ನಲ್ಲಿ ಬಿಎಂಟಿಎಫ್ ದಾಖಲಿಸಿದ್ದ ಮೊಕದ್ದಮೆ ಅರ್ಜಿ ವಜಾಗೊಂಡಿದೆ.
ಈ ಪ್ರಕರಣದಲ್ಲಿ ಬಿಎಂಟಿಎಫ್ ತನ್ನ ವ್ಯಾಪ್ತಿ ಮೀರಿ ಮೊಕದ್ದಮೆ ದಾಖಲಿಸಿರುವುದರಿಂದ ಅರ್ಜಿ ವಜಾಗೊಂಡಿದೆ. ಕರ್ನಾಟಕ ಸರ್ಕಾರದ ಈ ಹಿಂದಿನ ನೋಟಿಫಿಕೇಶನ್ ಪ್ರಕಾರ ಇಂತಹ ಪ್ರಕರಣಗಳಲ್ಲಿ ಬಿಎಂಟಿಎಫ್ ಮೊಕದ್ದಮೆ ದಾಖಲಿಸಲು ಅಧಿಕಾರ ಹೊಂದಿಲ್ಲ ಎಂದು ತಿಳಿಸಲಾಗಿದೆ.
ಪ್ರಕರಣದ ಹಿನ್ನೆಲೆ: ಪದ್ಮನಾಭ ನಗರದಲ್ಲಿ ಬಿಡಿಎಗೆ ಸೇರಿದ ಜಾಗದಲ್ಲಿ ಎ.ಸಿ. ಶೆಡ್ ನಿರ್ಮಿಸಿ ಒತ್ತುವರಿ ಮಾಡಿಕೊಂಡ ಆರೋಪದ ಮೇಲೆ ಮಾಜಿ ಮೇಯರ್ ಡಿ. ವೆಂಕಟೇಶಮೂತಿರ್ ಅವರ ವಿರುದ್ಧ ಬಿಎಂಟಿಎಫ್ ಕ್ರಿಮಿನಲ್ ಮೊಕದ್ದಮೆ ದಾಖಲಿಸಿತ್ತು.
ಪದ್ಮನಾಭನಗರ ಬಡಾವಣೆಯ 2ನೇ ಮುಖ್ಯರಸ್ತೆ, 7ನೇ ಅಡ್ಡರಸ್ತೆ ಬಳಿ ಬಿಡಿಎಗೆ ಸೇರಿದ 12 ಸಾವಿರ ಚದರಡಿಯ ಸಿ.ಎ. ನಿವೇಶನದ ಜಾಗವನ್ನು ಮಾಜಿ ಮೇಯರ್ ವೆಂಕಟೇಶಮೂರ್ತಿ ನಕಲಿ ದಾಖಲೆ ಸೃಷ್ಟಿಸಿ ಕಬಳಿಸಿದ್ದಾರೆ. ನಿವೇಶನವನ್ನು 5 ಭಾಗಗಳಾಗಿ ವಿಂಗಡಿಸಲಾಗಿದೆ ಎಂದು ಬಿಎಂಟಿಎಫ್ ಗೆ 2013ರ ಸೆ. 20ರಂದು ಮಾಧವರಾಜು ಎಂಬುವರು ದೂರು ನೀಡಿದ್ದರು.
Advertisement