ರಾಜ್ಯದಲ್ಲಿ ಎರಡು ದಿನ ಭಾರೀ ಮಳೆ

ನಿರೀಕ್ಷೆಯಂತೆ ಮುಂಗಾರು ಅಂತ್ಯ ಕಾಲದ ಮಳೆ ರಾಜ್ಯದಲ್ಲಿ ಇನ್ನೂ ಅಬ್ಬರಿಸಲಿದ್ದು, ಮುಂದಿನ ಎರಡು ದಿನಗಳಲ್ಲಿ ಭಾರೀ ಮಳೆ ಸಂಭವಿಸಲಿದೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ನಿರೀಕ್ಷೆಯಂತೆ ಮುಂಗಾರು ಅಂತ್ಯ ಕಾಲದ ಮಳೆ ರಾಜ್ಯದಲ್ಲಿ ಇನ್ನೂ ಅಬ್ಬರಿಸಲಿದ್ದು, ಮುಂದಿನ ಎರಡು ದಿನಗಳಲ್ಲಿ ಭಾರೀ ಮಳೆ ಸಂಭವಿಸಲಿದೆ. ಮಹಾರಾಷ್ಟ್ರದ ಮರಾಠವಾಡದಿಂದ ಲಕ್ಷ ದ್ವೀಪ ಭಾಗದಲ್ಲಿ ಟ್ರಯ್(ವಾಯು ಒತ್ತಡ) ಹೆಚ್ಚಾಗುತ್ತಿದ್ದು, ಇದರಿಂದ ಶೀತ ಮಾರುತಗಳು ರಾಜ್ಯದ ಕಡೆ ಬೀಸುವ ಸಾಧ್ಯತೆ.

ಇದು ಮುಂದಿನ ಎರಡು ದಿನಗಳ ವರೆಗೂ ರಾಜ್ಯಾದ್ಯಂತ ವ್ಯಾಪಕ ಮಳೆ ಸುರಿಸುವ ಸಂಭವವಿದೆ. ದಕ್ಷಿಣ ಮತ್ತು ಕರಾವಳಿ ಭಾಗದಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ಇದೆ. ಆನಂತರ ಕೂಡ ಇದೇ ಪರಿಸ್ಥಿತಿ ಮುಂದುವರಿಯುವ ಸಾಧ್ಯತೆ ಕಾಣುತ್ತಿದ್ದು, ಬಳಿಕ ಕೊಂಚ ಕಡಿಮೆಯಾಗುತ್ತಾ ಹೋಗಬಹುದು. ಒಂದೊಮ್ಮೆ ಹವಾಮಾನದಲ್ಲಿ ಶೀತ ಮಾರುತಗಳು ಪ್ರಭಾವ ಹೆಚ್ಚಾದರೆ ಮತ್ತೆ ಮಳೆ ಹೆಚ್ಚಾಗಬಹುದು ಎಂದು ಹವಾಮಾನ ಇಲಾಖೆ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com