
ಮೈಸೂರು: ಸಾಹಿತಿ ಹಾಗೂ ವಿಚಾರವಾದಿ ಪ್ರೊ.. ಕೆ.ಎಸ್. ಭಗವಾನ್ ಅವರಿಗೆ ಅಪರಿಚಿತ ವ್ಯಕ್ತಿಯೊಬ್ಬರು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿರುವ ಪತ್ರವೊಂದು ಬುಧವಾರ ಬಂದಿದೆ.
ಮೈಸೂರಿನ ಕುವೆಂಪುನಗರದ ಉದಯರವಿ ರಸ್ತೆಯ ನಿವಾಸಿಯಾದ ಪ್ರೊ.. ಭಗವಾನ್ ಅವರ ವಿಳಾಸಕ್ಕೆ ಮುಚ್ಚಿದ ಲಕೋಟೆಯಲ್ಲಿ ಟೈಪ್ ಮಾಡಿರುವ ಪತ್ರ ಬಂದಿದೆ. ಆ ಪತ್ರದಲ್ಲಿ ನೆಕ್ಸ್ಟ್ ಟಾರ್ಗೆಟ್ ನೀವೆ.. ಅಲರ್ಟ್ ಆಗಿರಿ ಎಂದಿದೆ. ಬರೆದವರಾರೆಂದು ಪತ್ತೆಯಾಗಿಲ್ಲ.
ಲಕೋಟೆ ಮೇಲೆ ಬೆಂಗಳೂರು 560009 ಅಂಚೆ ಕಚೇರಿಯ ಮುದ್ರೆ ಇದೆ. ಹೀಗಾಗಿ, ಈ ಪತ್ರವು ಬೆಂಗಳೂರಿನಿಂದ ಬಂದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಕುವೆಂಪುನಗರ ಠಾಣೆ ಇನ್ಸ್‍ಪೆಕ್ಟರ್ ಜಿ. ಶೇಖರ್ ತನಿಖೆ ಆರಂಭಿಸಿದ್ದಾರೆ. ಬೆದರಿಕೆ ಹಿನ್ನೆಲೆಯಲ್ಲಿ ಭಗವಾನ್ ಅವರಿಗೆ ನೀಡಲಾಗಿದ್ದ ಭದ್ರತೆ ಹೆಚ್ಚಿಸಲಾಗಿದೆ.
Advertisement