
ಬೆಂಗಳೂರು: ಟ್ರ್ಯಾಕ್ಟರ್ ಹಿಂದಕ್ಕೆ ತೆಗೆದುಕೊಳ್ಳುತ್ತಿದ್ದ ವೇಳೆ ಅದರ ಹಿಂದಿನ ಚಕ್ರ ಹರಿದು ಐದು ವರ್ಷದ ಬಾಲಕ ಶರಣು ಎಂಬಾತ ಮೃತಪಟ್ಟಿರುವ ಘಟನೆ ಕೆ.ಆರ್.ಪುರ ಸಮೀಪದ ಕೊಡಿಗೆಹಳ್ಳಿಯಲ್ಲಿ ಬುಧವಾರ ಸಂಜೆ ನಡೆದಿದೆ.
ಕಟ್ಟಡ ನಿರ್ಮಾಣ ಕಾರ್ಮಿಕ ದಂಪತಿಯ ಮಗನಾದ ಶರಣು ಕೊಡಿಗೆಹಳ್ಳಿಯಲ್ಲಿ ವಾಸವಾಗಿದ್ದ. ಸಂಜೆ 5ರ ಸುಮಾರಿಗೆ ಮನೆ ಮುಂದೆ ಆಟವಾಡುತ್ತಿದ್ದ. ಇದೇ ವೇಳೆ ಚಾಲಕ ಬಾಲಾಜಿ, ಟ್ರ್ಯಾಕ್ಟರ್‍ನ್ನು ಪಾರ್ಕ್ ಮಾಡಿದ ಜಾಗದಿಂದ ಹಿಂದಕ್ಕೆ ತೆಗೆದುಕೊಳ್ಳುತ್ತಿದ್ದಾಗ ದುರ್ಘಟನೆ ನಡೆದಿದೆ.
ಅಂಬುಲೆನ್ಸ್ ಮೂಲಕ ಬಾಲಕನನ್ನು ಬೌರಿಂಗ್ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಮಾರ್ಗ ಮಧ್ಯಯೇ ಮೃತಪಟ್ಟಿದ್ದ. ಕೆ.ಆರ್ ಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement