ವಿಜ್ಞಾನ-ಶಿಕ್ಷಣ ಪ್ರಗತಿಗೆ ಉದ್ಯಮ ಕೊಡುಗೆ ಶೂನ್ಯ

`ದೇಶದಲ್ಲಿ ವಿಜ್ಞಾನ ಮತ್ತು ಶಿಕ್ಷಣಕ್ಕೆ ಉದ್ಯಮ ವಲಯದಿಂದ ಯಾವುದೇ ರೀತಿಯ ಕೊಡುಗೆ ಸಲ್ಲುತ್ತಿಲ್ಲ'' ಎಂದು ಕಾರ್ಪೋರೇಟ್ ಇಂಡಿಯಾವ ನ್ನು ತೀವ್ರ ತರಾಟೆಗೆ ...
ಪ್ರೊ.ಸಿ.ಎನ್.ಆರ್ ರಾವ್
ಪ್ರೊ.ಸಿ.ಎನ್.ಆರ್ ರಾವ್

ಬೆಂಗಳೂರು: ``ದೇಶದಲ್ಲಿ ವಿಜ್ಞಾನ ಮತ್ತು ಶಿಕ್ಷಣಕ್ಕೆ ಉದ್ಯಮ ವಲಯದಿಂದ ಯಾವುದೇ ರೀತಿಯ ಕೊಡುಗೆ ಸಲ್ಲುತ್ತಿಲ್ಲ'' ಎಂದು ಕಾರ್ಪೋರೇಟ್ ಇಂಡಿಯಾವ ನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ ಖ್ಯಾತ ವಿಜ್ಞಾನಿ, ಭಾರತರತ್ನ ಪ್ರೊ.ಸಿ.ಎನ್.ಆರ್ ರಾವ್. ಇಂಡಿಯನ್ ಅಕಾಡೆಮಿ ಆಫ್  ಸೈನ್ಸಸ್‍ನ ಜರ್ನಲ್  ನಲ್ಲಿ ಪ್ರಕಟವಾಗಿರುವ ಪ್ರತಿಕ್ರಿಯೆಯಲ್ಲಿ ಇನ್ಫೋಸಿಸ್ ಮುಖ್ಯಸ್ಥ ನಾರಾಯಣ ಮೂರ್ತಿಯ ವರಿಗೆ ರಾವ್ ನೇರ ಸವಾಲು ಹಾಕಿದ್ದು ``ಉದ್ಯಮ ವಲಯ ಉತ್ಪನ್ನ ತಯಾ ರಿಸಿ ಲಾಭ ಮಾಡಿದ್ದರ ಹೊರ ತಾಗಿ, ಸಮಾಜ-ಕ್ಕೇನು ಕೊಡುಗೆ ನೀಡಿವೆ ಎಂದು ನಾರಾಯಣ ಮೂರ್ತಿಯ ವರನ್ನು ಪ್ರಶ್ನಿಸುವುದು ನನಗಿಷ್ಟವಿಲ್ಲ.ಆದರೆ ಮೂರ್ತಿ ಮತ್ತಿ ತರರು ಕೆಲವುಬಿಲಿ-ಯನ್ ಡಾಲರ್‍ಹಣ ಹೂಡಿಸ್ಟಾನ್ ಫೋರ್ಡ್‍ನಂಥ ಒಂದು ವಿಶ್ವ ವಿದ್ಯಾಲಯ ಸ್ಥಾಪಿಸಲಿ. ಹಾಗೆ ಮಾಡಿ ದರೆ ಅದು ನಿಜಕ್ಕೂ ಶ್ಲಾಘನೀಯ'' ಎಂದಿದ್ದಾರೆ.
ಪ್ರಧಾನ ಮಂತ್ರಿಯ ವೈಜ್ಞಾನಿಕ ಸಲಹಾ ಸಮಿತಿಯ ಅಧ್ಯಕ್ಷರೂ ಆಗಿರುವ ರಾವ್, ``ಒಂದು ವೇಳೆ ಉದ್ಯಮ ವಲಯ ವಿಜ್ಞಾನ ಮತ್ತು ಶಿಕ್ಷಣಕ್ಕೆ ಪ್ರೋತ್ಸಾಹ ನೀಡಲು ಯಾವುದಾದರೂ ಯೂನಿವರ್ಸಿಟಿಗೆ ಧನಸಹಾಯ ಮಾಡಿದ್ದೇ ಆದಲ್ಲಿ ಅಂಥ ಶೈಕ್ಷಣಿಕ ಕೇಂದ್ರದ ಏಳಿಗೆಗೆ ನಾನು ಸಂಬಳವಿಲ್ಲದೆ ದುಡಿಯಲು ಸಿದ್ಧ'' ಎಂದು ಘೋಷಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com