ಇನ್ನಷ್ಟು ಕಗ್ಗತ್ತಲು ಕಾಯಂ

ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಜಾರಿಯಲ್ಲಿರುವ ಲೋಡ್ ಶೆಡ್ಡಿಂಗ್ ಪ್ರಮಾಣವನ್ನು ಸೆಪ್ಟೆಂಬರ್ 22ರ ವೇಳೆಗೆ ತಹಬದಿಗೆ ತರಲು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಜಾರಿಯಲ್ಲಿರುವ ಲೋಡ್ ಶೆಡ್ಡಿಂಗ್ ಪ್ರಮಾಣವನ್ನು ಸೆಪ್ಟೆಂಬರ್ 22ರ ವೇಳೆಗೆ ತಹಬದಿಗೆ ತರಲು ರಾಜ್ಯ ಸರ್ಕಾರ ಇನ್ನಿಲ್ಲದ ಪ್ರಯತ್ನ ನಡೆಸಿದೆ. ಕಗ್ಗತ್ತಲೆಯತ್ತ ಕರ್ನಾಟಕ ಜಾರುತ್ತಿದೆ ಎಂದು ರಾಜ್ಯಾದ್ಯಂತವ್ಯಕ್ತವಾಗುತ್ತಿರುವ ಟೀಕೆ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಇಂಧನ ಇಲಾಖೆ ಈಗ ವಿದ್ಯುತ್ ಖರೀದಿ ಹಾಗೂ ಪೂರೈಕೆಗೆ ಹೆಚ್ಚಿನ ಆದ್ಯತೆ ನೀಡಲಾರಂಭಿಸಿದೆ. ಸುದ್ದಿಗಾರರ ಜತೆ ಮಾತನಾಡಿದ ಇಂಧನ ಸಚಿವ ಡಿ.ಕೆ. ಶಿವಕುಮಾ್ರ್ ಈ ವಿಷಯ ತಿಳಿಸಿದ್ದು, ಹಂಚಿಕೆಯಾಗದೇ ಉಳಿದಿರುವ 1600 ಮೆಗಾ ವ್ಯಾಟ್ ವಿದ್ಯುತ್ ಅನ್ನು ರಾಜ್ಯಕ್ಕೆ ನೀಡುವಂತೆ ಮನವಿ ಮಾಡಲಾಗಿತ್ತು. ಆ ಪೈಕಿ 200 ಮೆಗಾ ವ್ಯಾಟ್ ಅನ್ನು ರಾಜ್ಯಕ್ಕೆ ನೀಡಲು ಕೇಂದ್ರ ಸರ್ಕಾರ ಸಮ್ಮತಿಸಿದೆ. ಪ್ರತಿ ದಿನ ರಾತ್ರಿ 10ರಿಂದ ಬೆಳಗಿನ ಜಾವ 4 ಗಂಟೆಯವರೆಗೆ ಈ ವಿದ್ಯುತ್ ನಮಗೆ ಲಭ್ಯವಾಗುತ್ತದೆ ಎಂದು ಹೇಳಿದರು. ಬುಧವಾರ ರಾತ್ರಿಯಿಂದಲೇ ನಮಗೆ ಹೆಚ್ಚುವರಿ 200 ಮೆಗಾ ವ್ಯಾಟ್ ವಿದ್ಯುತ್ ಲಭ್ಯವಾಗುತ್ತಿದ್ದು, ಬಳ್ಳಾರಿ ಉಷ್ಣ ವಿದ್ಯುತ್ ಸ್ಥಾವರದ ಮೊದಲ ಘಟಕದಿಂದ ಸೆಪ್ಟೆಂಬರ್ 12ರ ವೇಳೆಗೆ 500 ಮೆಗಾವ್ಯಾಟ್ ಹಾಗೂ 17ರ ನಂತರ 2ನೇ ಘಟಕದಿಂದ ಇನ್ನೂ 500 ಮೆಗಾವ್ಯಾಟ್ ವಿದ್ಯುತ್ ಲಭಿಸಲಿದೆ. ದಿನೇ ದಿನೇ ರಾಜ್ಯದ ವಿದ್ಯುತ್ ಪರಿಸ್ಥಿತಿ ಸುಧಾರಿಸುತ್ತಿದ್ದು, ಸೆಪ್ಟೆಂಬರ್ 22ರ ವೇಳೆಗೆ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಜಾರಿಯಲ್ಲಿರುವ ಲೋಡ್ ಶೆಡ್ಡಿಂಗ್ ಪ್ರಮಾಣ ಕಡಿಮೆ ಮಾಡಲಾಗುವುದು ಎಂದು ಭರವಸೆ ನೀಡಿದರು. ರಾಜ್ಯದಲ್ಲಿ ಒಟ್ಟು 9021 ಮೆಗಾವ್ಯಾಟ್ ವಿದ್ಯುತ್ ಉತ್ಪಾದನಾ ಸಾಮಥ್ರ್ಯವಿದ್ದರೂ ಉತ್ಪಾದನೆಯಾಗುತ್ತಿರುವ ಪ್ರಮಾಣ 3500 ಮೆಗಾವ್ಯಾಟ್ ಮಾತ್ರ. ಉಳಿದಂತೆ ಕೇಂದ್ರವಿದ್ಯುತ್ ಸ್ಥಾವರದಿಂದ 1500 ಮೆಗಾವ್ಯಾಟ್, ಪವನ ವಿದ್ಯುತ್ ಸೇರಿದಂತೆ ಹಲವು ಮೂಲಗಳಿಂದ ಒಟ್ಟಾರೆ 6500 ಮೆಗಾವ್ಯಾಟ್ ಲಭ್ಯವಾಗುತ್ತಿದೆ. ಆದರೆ ಬೇಡಿಕೆ 8700 ಮೆಗಾವ್ಯಾಟ್ ಗಳಷ್ಟಿದ್ದು ಪೂರೈಕೆಯ ಪ್ರಮಾ್ಣ 5300 ಮೆಗಾವ್ಯಾಟ್. ಆದಾಗಿಯೂ ಸೆಪ್ಟೆಂಬರ್ 22 ರ ವೇಳೆಗೆ ಪರಿಸ್ಥಿತಿ ಉತ್ತಮ ಗೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.


ರೇವಣ್ಣ ಹಾಗೂ ಶೋಭಾ ಕರಂದ್ಲಾಜೆ ಇಂಧನ ಸಚಿವರಾಗಿದ್ದ ಸಂದರ್ಭದಲ್ಲಿ ಪರಿಸ್ಥಿತಿಯನ್ನು ಚೆನ್ನಾಗಿ ನಿಭಾಯಿಸಿದ್ದರು. ಆದರೆ ನೀವು ಈ ವಿಷಯದಲ್ಲಿ ವೈಫಲ್ಯ ಕಂಡಿದ್ದೀರಿ ಎಂಬ ಆರೋಪವನ್ನು ಅವರು ಸ್ಪಷ್ಟವಾಗಿ ನಿರಾಕರಿಸಿದರು. ರೈತರಿಗೆ ಉಚಿತ ವಿದ್ಯುತ್ ನೀಡಿ ರು. 13000 ಕೋಟಿ ನಷ್ಟವುಂಟುಮಾಡಿದರು. ರೈತರಿಗೆ ಉಚಿತ ವಿದ್ಯುತ್ ನೀಡಲು ನಮ್ಮ ತಕರಾರೇನಿಲ್ಲ. ಆದರೆ ಹಣದ ಮೂಲವನ್ನು ನೋಡಿ ತೀರ್ಮಾನ ಕೈಗೊಳ್ಳಬೇಕಾಗುತ್ತದೆ. ನಗರ ಸ್ಥಳೀಯ ಸಂಸ್ಥೆಗಳು, ಪಂಚಾಯ್ತಿಗಳಿಂದ ರು.3000 ಕೋಟಿ ಸೇರಿ ಒಟ್ಟು ರು.16000 ಕೋಟಿ ಬಾಕಿ ಇದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಿಎಂ ಜತೆ ಭಿನ್ನಾಭಿಪ್ರಾಯವಿಲ್ಲ: ವಿದ್ಯುತ್ ಪರಿಸ್ಥಿತಿ ಸರಿಪಡಿಸುವ ವಿಚಾರದಲ್ಲಿ ಸಿಎಂ ನಿಮಗೆ ಸಹಕಾರ ನೀಡುತ್ತಿಲ್ಲ ಎಂಬ ಆರೋಪವಿದೆ ಎಂಬ ಪ್ರಶ್ನೆಗೆ, ಈ ವಿಷಯದಲ್ಲಿ ಸಿಎಂ ಸಂಪೂರ್ಣ ಸಹಕಾರ ನೀಡುತ್ತಿದ್ದಾರೆ. ಅವರ, ನನ್ನ ನಡುವೆ ಭಿನ್ನಾಭಿಪ್ರಾಯವವಿದೆ ಎಂಬುದು ಸುಳ್ಳು. ಅಗತ್ಯ ಪ್ರಮಾಣದ ವಿದ್ಯುತ್ ಖರೀದಿಸುವಂತೆ ಸೂಚಿಸಿದ್ದಾರೆ. ಬೆಳಗ್ಗೆ ನಾನೇ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಪರಿಸ್ಥಿತಿ ವಿವರಿಸಿ ಬಂದಿದ್ದೇನೆ. ಏನೇ ಸಹಕಾರ ಬೇಕಿದ್ದರೂ ಕೇಳಿ ಎಂದು ಹೇಳಿದ್ದಾರೆ ಎಂದರು.

ಸೆಕ್ಷನ್ 11(ಎ)
ಜಾರಿಗೆ ಚಿಂತನೆ ರಾಜ್ಯದಲ್ಲಿ ಖಾಸಗಿಯವರು ಉತ್ಪಾದಿಸುವ ವಿದ್ಯುತ್ ಅನ್ನು ಹೊರರಾಜ್ಯಗಳಿಗೆ ನೀಡುವಂತಿಲ್ಲ. ಬದಲಿಗೆ ಕಡ್ಡಾಯವಾಗಿ ರಾಜ್ಯದವಿದ್ಯುತ್ ಸ್ಥಾವರಗಳಿಗೇ ಪೂರೈಸಬೇಕುಎಂಬ ನಿಯಮ 11(ಎ) ಜಾರಿಗೊಳಿಸಲು ಸರ್ಕಾರ ಚಿಂತನೆ ನಡೆಸಿದೆ. ಇದರಿಂದ ರಾಜ್ಯದ ಬಳಕೆಗೆ 280 ಮೆಗಾ ವ್ಯಾಟ್ ವಿದ್ಯುತ್ ಹೆಚ್ಚುವರಿಯಾಗಿ ಲಭ್ಯವಾಗಲಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com