ಬಿಬಿಎಂಪಿ: ಮೇಯರ್ ಆಯ್ಕೆ ಹೇಗಾಗುತ್ತದೆ?

ಪ್ರಾದೇಶಿಕ ಆಯುಕ್ತೆ ಎಂ.ವಿ.ಜಯಂತಿ ಮೇಯರ್ ಚುನಾವಣಾ ಪ್ರಕ್ರಿಯೆ ಸಭೆಯ ಅಧ್ಯಕ್ಷತೆ ವಹಿಸಲಿದ್ದು,...
ಬಿಬಿಎಂಪಿ ಕಚೇರಿ (ಸಂಗ್ರಹ ಚಿತ್ರ)
ಬಿಬಿಎಂಪಿ ಕಚೇರಿ (ಸಂಗ್ರಹ ಚಿತ್ರ)

ಬೆಂಗಳೂರು: ಮೇಯರ್ ಚುನಾವಣಾ ಪ್ರಕ್ರಿಯೆ ಬೆಳಗ್ಗೆ 8 ಗಂಟೆಯಿಂದಲೇ ಆರಂಭವಾಗಲಿದ್ದು, ಆಕಾಂಕ್ಷಿಗಳು ಬೆಳಗ್ಗೆ 9.30ರವರೆಗೂ ನಾಮಪತ್ರ ಸಲ್ಲಿಸಬಹುದಾಗಿದೆ. ನಂತರ 11.30ರ ವೇಳೆಗೆ ಮೇಯರ್, ಉಪ ಮೇಯರ್ ಚುನಾವಣೆಗೆ ಸಭೆ ಆರಂಭಿಸಲಾಗುತ್ತದೆ.

ಪ್ರಾದೇಶಿಕ ಆಯುಕ್ತೆ ಎಂ.ವಿ.ಜಯಂತಿ ಸಭೆಯ ಅಧ್ಯಕ್ಷತೆ ವಹಿಸಲಿದ್ದು, ಆರಂಭದಲ್ಲೇ ಜಯಂತಿ ಅವರು ನೂತನ ಸದಸ್ಯರಿಗೆ ಪ್ರಮಾಣ ವಚನ ಬೋಧಿಸಲಿದ್ದಾರೆ. ನಂತರ ಪ್ರಾದೇಶಿಕ ಆಯುಕ್ತರು ಮೇಯರ್ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿರುವವರ ಹೆಸರು ಪ್ರಸ್ತಾಪಿಸುತ್ತಾರೆ.  ಆ ಸಂದರ್ಭದಲ್ಲಿ ಮೇಯರ್ ಸ್ಥಾನಕ್ಕೆ ಒಬ್ಬರೇ ಅಭ್ಯರ್ಥಿ ನಾಮಪತ್ರ ಸಲ್ಲಿಸಿದ್ದರೆ, ಅವರನ್ನು ಅವಿರೋಧವಾಗಿ ಆಯ್ಕೆಯಾಗಿದೆ ಎಂದು ಪ್ರಕಟಿಸಲಾಗುತ್ತದೆ.

ಒಂದು ವೇಳೆ, ಒಂದಕ್ಕಿಂತ ಹೆಚ್ಚು ಅಭ್ಯರ್ಥಿಗಳು ನಾಪಪತ್ರ ಸಲ್ಲಿಸಿದ್ದರೆ, ಆ ಅಭ್ಯರ್ಥಿಗಳ ಆಯ್ಕೆಯನ್ನು ಮತಕ್ಕೆ ಹಾಕಲಾಗುತ್ತದೆ. ಬಿಬಿಎಂಪಿ ಮೇಯರ್, ಉಪ ಮೇಯರ್ ಚುನಾವಣೆಯಲ್ಲಿ ಗೌಪ್ಯ ಮತದಾನ ಪದ್ಧತಿ ಇಲ್ಲದ ಕಾರಣ ಕೈ ಎತ್ತಿ ಬೆಂಬಲಿಸಿ ಮತ ಹಾಕುವ ಪ್ರಕ್ರಿಯೆ ನಡೆಸಲಾಗುತ್ತದೆ. ಅದರಂತೆ ಯಾವ ಅಭ್ಯರ್ಥಿಪರವಾಗಿ ಹೆಚ್ಚು ಮಂದಿ ಕೈ ಎತ್ತುತ್ತಾರೆಯೋ ಆ ಅಭ್ಯರ್ಥಿಯನ್ನು ಮೇಯರ್ ಎಂದು ಘೋಷಿಸಲಾಗುತ್ತದೆ. ಉಪ ಮೇಯರ್ ಆಯ್ಕೆಯೂ ಅದೇ ರೀತಿ ನಡೆಯುತ್ತದೆ.

260 ಅರ್ಹ ಮತದಾರರು
ಜಿಲ್ಲಾ ಚುನಾವಣಾಧಿಕಾರಿಗಳೂ ಆದ ಬಿಬಿಎಂಪಿ ಆಯುಕ್ತ ಕುಮಾರನಾಯಕ್ ಈಗಾಗಲೇ ಪ್ರಕಟಿಸಿರುವಂತೆ ಒಟ್ಟು 260 ಜನಪ್ರತಿನಿಧಿಗಳು ಮೇಯರ್ ಚುನಾವಣೆಯಲ್ಲಿ ಮತದಾನಡಲು ಅರ್ಹರಿದ್ದಾರೆ. ಇದರಲ್ಲಿ ಬಿಜೆಪಿ-126, ಕಾಂಗ್ರೆಸ್-101, ಜೆಡಿಎಸ್-21 ಹಾಗೂ ಪಕ್ಷೇತರ 12 ಸದಸ್ಯರು ಮತ ಚಲಾಯಿಸಬಹುದು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com