ಮೈತ್ರಿ ಸುಗಮಕ್ಕೆ ಸಮನ್ವಯ ಸಮಿತಿ

ಬಿಬಿಎಂಪಿಯಲ್ಲಿ ಆಡಳಿತ ಚುಕ್ಕಾಣಿ ಹಿಡಿದುರುವ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದೊಳಗೆ ಯಾವುದೇ ಭಿನ್ನಾಭಿಪ್ರಾಯ ಬಾರದಂತೆ ನೋಡಿಕೊಳ್ಳಲು ಶಾಸಕರಿರುವ ಸಮನ್ವಯ ಸಮಿತಿ ರಚಿಸಲು ತೀರ್ಮಾಸಲಾಗಿದೆ ಎಂದು ಮೂಲಗಳು ತಿಳಿಸಿವೆ...
(ಸಾಂದರ್ಭಿಕ  ಚಿತ್ರ)
(ಸಾಂದರ್ಭಿಕ ಚಿತ್ರ)
Updated on

ಬೆಂಗಳೂರು: ಬಿಬಿಎಂಪಿಯಲ್ಲಿ ಆಡಳಿತ ಚುಕ್ಕಾಣಿ ಹಿಡಿದುರುವ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದೊಳಗೆ ಯಾವುದೇ ಭಿನ್ನಾಭಿಪ್ರಾಯ ಬಾರದಂತೆ ನೋಡಿಕೊಳ್ಳಲು ಶಾಸಕರಿರುವ ಸಮನ್ವಯ ಸಮಿತಿ ರಚಿಸಲು ತೀರ್ಮಾಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ರಾಜ್ಯದಲ್ಲಿ ಈ ಹಿಂದೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಕೂಟದ ಸರ್ಕಾರವಿದ್ದಾಗ ಆಗಿರುವ ಕಹಿ ಅನುಭವಗಳನ್ನು ಗಮನದಲ್ಲಿರಿಸಿಕೊಂಡು ಬಿಬಿಎಂಪಿಯಲ್ಲಿ ಅಂತಹ ಯಾವುದೇ ಸಮಸ್ಯೆ ತಲೆದೋರದಂತೆ ಕ್ರಮಕೈಗೊಳ್ಳಲು ಎರಡೂ ಪಕ್ಷಗಳು ಚಿಂತಿಸಿವೆ. ಅದರಲ್ಲೂ ವಿಶೇಷವಾಗಿ ಆಪರೇಷನ್ ಹಸ್ತ ನಡೆಸಿ ಯಶಸ್ವಿಯಾಗಿರುವ ಎರಡೂ ಪಕ್ಷಗಳ ನಾಯಕರೇ ಈ ಸಮಿತಿಯಲ್ಲಿ ಸದಸ್ಯರಾಗಿರುತ್ತಾರೆ. ಇದಕ್ಕೆ ಜಿಲ್ಲಾಉಸ್ತುವಾರಿ ಸಚಿವ ರಾಮಲಿಂಗಾ ರೆಡ್ಡಿ ಅಗತ್ಯಸಲಹೆ, ಸೂಚನೆ ನೀಡುತ್ತಾರೆ ಎಂದು ಮೂಲಗಳು ಹೇಳಿವೆ.

ಸದ್ಯದ ಮಾಹಿತಿ ಪ್ರಕಾರ ಸಮನ್ವಯ ಸಮಿತಿಯಲ್ಲಿ ಕಾಂಗ್ರೆಸ್‍ನ ಶಾಸಕರಾದ ಮುನಿರತ್ನ, ಭೈರತಿ ಬಸವರಾಜು, ಎಸ್ .ಟಿ.ಸೋಮಶೇಖರ್ ಇರುತ್ತಾರೆ. ಹಾಗೆಯೇ ಜೆಡಿಎಸ್‍ನಿಂದ ಕೆ.ಗೋಪಾಲ ಯ್ಯ, ಜಮೀರ್ ಅಹಮ್ಮದ್ ಖಾನ್, ಅಖಂಡ ಶ್ರೀನಿವಾಸಮೂರ್ತಿ ಇರುತ್ತಾರೆ. ಈ ಬಗ್ಗೆ ಇನ್ನೆರಡು ದಿನಗಳಲ್ಲಿ ಚರ್ಚೆ ನಡೆಸಿ ಸಮಿತಿ ರಚಿಸಲಾಗುತ್ತದೆ. ಇದಕ್ಕೆ
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಅವರ ಸಲಹೆಯನ್ನೂ ಪಡೆಯಲಾಗುತ್ತದೆ ಎಂದು ಎರಡೂ ಪಕ್ಷಗಳ ಮೂಲಗಳು ದೃಢಪಡಿಸಿವೆ.

ಹರಕೆಯ ಕುರಿ: ಬಿಜೆಪಿಯ ಮೇಯರ್ ಚುನಾವಣೆಯಲ್ಲಿ ಅಭ್ಯರ್ಥಿ ಕಾಡುಮಲ್ಲೇಶ್ವರ ವಾರ್ಡ್‍ನ ಮಂಜುನಾಥ ರಾಜು ನಿಜಕ್ಕೂ ಹರಕೆಯ ಕುರಿಯಂತಾ ದರು. ರೆಸಾರ್ಟ್ ರಾಜಕಾರಣದ ಪರಿಣಾಮ ಬಿಜೆಪಿ ಸೋಲನುಭವಿಸುವುದು ಖಚಿತವಾಗುತ್ತಿದ್ದಂತೆ ಮೇಯರ್ ಆಕಾಂಕ್ಷಿಗಳು ಹಿಂದೆ ಸರಿದರು. ಆಗ ಮೇಯರ್ ಅಭ್ಯರ್ಥಿಯಾಗಿ ಮಂಜು ನಾಥ ರಾಜು ಅವರನ್ನು ಆಯ್ಕೆ ಮಾಡಲಾಯಿತು. ಒಂದು ವೇಳೆ ಅನಿರೀಕ್ಷಿತವಾಗಿ ಮತಗಳು ಲಭ್ಯವಾದರೆ ಮೇಯರ್ ಆಗುತ್ತಿರಿ ಎಂದು ಹೇಳಿ ರಾಜು ಅವರನ್ನು ಕಣಕ್ಕಿಳಿಸುವ ಮೂಲಕ ಬಿಜೆಪಿ ನಾಯಕರು ಮಂಜುನಾಥ ರಾಜು ಅವರನ್ನು ಹರಕೆಯ ಕುರಿಯನ್ನಾಗಿ ಮಾಡಲಾಯಿತು.

ನಾಯಕರ ಹುದ್ದೆಗಳಿಗೆ ಲಾಬಿ:

ಮೇಯರ್ ಚುನಾವಣೆ ಮುಗಿಯುತ್ತಿದ್ದಂತೆ ಆಡಳಿತ ಪಕ್ಷದ ನಾಯಕ ಸ್ಥಾನಕ್ಕೆ ಲಾಬಿ ಶುರುವಾಗಿದೆ. ಶುಕ್ರವಾರ ರಾತ್ರಿ ನಡೆದಿರುವ ಚರ್ಚೆ ಪ್ರಕಾರ ಕಾಯ್ದೆ ಮತ್ತು ಕಾನೂನಿನ ಹೆಚ್ಚಿನ ಅನುಭವ ಇರುವ ಹಿರಿಯ ಸದಸ್ಯ ಎಂ.ಕೆ. ಗುಣಶೇಖರ್ ಅವರನ್ನು ಆಯ್ಕೆ ಮಾಡುವ ಸಾಧ್ಯತೆ ಇದೆ. ಆದರೆ ಇವರೊಂದಿಗೆ ಹಿರಿಯ ಸದಸ್ಯರಾದ ಮಹಮ್ಮದ್ ರಿಜ್ವಾನ್ ಹಾಗೂ ಮೇಯರ್ ಆಕಾಂಕ್ಷಿಯಾಗಿದ್ದ ಸತ್ಯನಾರಾಯಣ ಪೈಪೋಟಿಗೆ ಬಿದ್ದಿದ್ದಾರೆ.

ಅಂತಿಮ ಆಯ್ಕೆ ವಿವರ ಎರಡು ದಿನಗಳಲ್ಲಿ ಗೊತ್ತಾಗಿಲಿದೆ ಎನ್ನುತ್ತಾರೆ ನಗರದ ಶಾಸಕರೊಬ್ಬರು. ಬಿಜೆಪಿಯಲ್ಲಿ ಪ್ರತಿಪಕ್ಷ ನಾಯಕನ ಸ್ಥಾನಕ್ಕೂ ಲಾಬಿ ಆರಂಭವಾಗಿದೆ. ಕೆಲವುರು ನಾಯಕರೊಂದಿಗೆ ದೂರವಾಣಿ ಮೂಲಕ ತಮ್ಮ ಅಹವಾಲು ಸಲ್ಲಿಸಿದ್ದಾರೆ. ಸದ್ಯದ ಮಾಹಿತಿ ಪ್ರಕಾರ ಆಡಳಿತ ಪಕ್ಷ ಮಾಜಿ ನಾಯಕ ಎನ್. ನಾಗರಾಜ್, ಪದ್ಮನಾಭ ರೆಡ್ಡಿ, ಮೇಯರ್ ಅಭ್ಯರ್ಥಿಯಾಗಿದ್ದ ಮಂಜುನಾಥ ರೆಡ್ಡಿ, ಮುನೀಂದ್ರಕುಮರ್ ಹಾಗೂ ಎಲ್.ಶ್ರೀನಿವಾಸ್ ರೇಸ್‍ನಲ್ಲಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com