ಮಗು ತಲೆ ಮೇಲೆ ಕಲ್ಲು ಹಾಕಿ ಕೊಲೆ

ಮನೆ ಮುಂದೆ ಆಟವಾಡುತ್ತಿದ್ದ ಒಂದುವರೆ ವರ್ಷದ ಮಗುವನ್ನು ಅಪಹರಿಸಿದ ಮದ್ಯವ್ಯಸನಿಯೊಬ್ಬ ಖಾಲಿ ನಿವೇಶನಕ್ಕೆ ಕರೆದೊಯ್ದು ತಲೆ ಮೇಲೆ ಕಲ್ಲು ಎತ್ತಿಹಾಕಿ ಅಮಾನವೀಯವಾಗಿ ಹತ್ಯೆಗೈದಿರುವ ಘಟನೆ ರಾಜಗೋಪಾಲನಗರದಲ್ಲಿ ನಡೆದಿದೆ...
ಕೊಲೆಯಾದ ಮಗುವಿನೊಂದಿಗೆ ತಾಯಿ (ಸಂಗ್ರಹ ಚಿತ್ರ)
ಕೊಲೆಯಾದ ಮಗುವಿನೊಂದಿಗೆ ತಾಯಿ (ಸಂಗ್ರಹ ಚಿತ್ರ)

ಬೆಂಗಳೂರು: ಮನೆ ಮುಂದೆ ಆಟವಾಡುತ್ತಿದ್ದ ಒಂದುವರೆ ವರ್ಷದ ಮಗುವನ್ನು ಅಪಹರಿಸಿದ ಮದ್ಯವ್ಯಸನಿಯೊಬ್ಬ ಖಾಲಿ ನಿವೇಶನಕ್ಕೆ ಕರೆದೊಯ್ದು ತಲೆ ಮೇಲೆ ಕಲ್ಲು ಎತ್ತಿಹಾಕಿ ಅಮಾನವೀಯವಾಗಿ ಹತ್ಯೆಗೈದಿರುವ ಘಟನೆ ರಾಜಗೋಪಾಲನಗರದಲ್ಲಿ ನಡೆದಿದೆ.

ರಾಜಗೋಪಾಲನಗರದ ರಜಿಯಾ ಮತ್ತು ರಪಿsಕ್ ದಂಪತಿ ಪುತ್ರ ಫೈರೋಜ್ ಕೊಲೆಯಾದ ಮಗು. ಈ ಸಂಬಂಧ ತಮಿಳುನಾಡಿನ ಕೃಷ್ಣಗಿರಿ ಮೂಲದ ಆರೋಪಿ ಮೂರ್ತಿ ಅಲಿಯಾಸ್ ವಡಿವೇಲು (19) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಮದ್ಯ ಹಾಗೂ ಮಾದಕ ವ್ಯಸನಿಯಾಗಿರುವ ಮೂರ್ತಿ ಆರ್‍ಎಂಸಿ ಯಾರ್ಡ್‍ನಲ್ಲಿ ಬಿದ್ದಿರುವ ತರಕಾರಿಗಳನ್ನು ಆಯ್ದುಕೊಂಡು ಹೋಗಿಅಂಗಡಿಗಳಿಗೆ ಮಾರಾಟ ಮಾಡುತ್ತಿದ್ದ. ವೈಟ್ನಲ್ ಸಲ್ಯೂಷನ್‍ಗೆ ಮೂಸುವ ವ್ಯಸನ ಹಚ್ಚಿಕೊಂಡಿದ್ದ ಮೂರ್ತಿ, ಆರ್‍ಎಂಸಿ ಯಾರ್ಡ್‍ನಲ್ಲೇ ಮಲಗುತ್ತಿದ್ದ. ಕೊಲೆಯಾದ ಮಗುವಿನ ತಂದೆ ರಪಿsಕ್ ಗುಜರಿ ವಸ್ತುಗಳ ವ್ಯಾಪಾರಿಯಾಗಿದ್ದಾರೆ.

ಮದ್ಯವ್ಯಸನಿಯ ಕೃತ್ಯ: ರಪಿsಕ್ ಕೂಡಾ ಮದ್ಯವ್ಯಸನಿಯಾಗಿದ್ದು, ಕೆಲ ತಿಂಗಳ ಹಿಂದೆ ಮದ್ಯಪಾನ ಮಾಡುವಾಗ ಬಾರ್‍ನಲ್ಲಿ ಮೂರ್ತಿ ಪರಿಚಯವಾಗಿತ್ತು. ಆಗಾಗ ರಪಿsಕ್ ಮನೆಗೆ ಮೂರ್ತಿ ಬಂದು ಹೋಗುವುದನ್ನು ಮಾಡುತ್ತಿದ್ದ. ಶನಿವಾರ ಮಧ್ಯಾಹ್ನ ಬಾರ್‍ವೊಂದರಲ್ಲಿ ಇಬ್ಬರು ಮದ್ಯಪಾನ ಮಾಡಿದ್ದರು. ರಫಿಕ್ ಜತೆ ಮೂರ್ತಿ ಕೂಡಾ ಆತನ ಮನೆಗೆ ಹೋಗಿದ್ದ. ರಪಿsಕ್ ಮನೆಯೊಳಗೆಹೋಗುತ್ತಿದ್ದಂತೆ, ಹೊರಗೆ ಆಟವಾಡುತ್ತಿದ್ದ ಮಗುವನ್ನು ಮೂರ್ತಿ ಎತ್ತಿಕೊಂಡು ಅಲ್ಲಿಂದ  ಗೊರಗುಂಟೆಪಾಳ್ಯ ಹತ್ತಿರದ ಖಾಲಿ ನಿವೇಶನಕ್ಕೆ ಕರೆದೊಯ್ದಿದ್ದಾನೆ. ಮಗು ಅಳುತ್ತಿದ್ದರಿಂದ ಬಾಯಿಮುಚ್ಚಿಸಲು ಯತ್ನಿಸಿದ್ದಾನೆ. ಅಳು ನಿಲ್ಲಿಸದಿದ್ದಾಗ ಮಗುವನ್ನು ನೆಲದ ಮೇಲೆ ಮಲಗಿಸಿ ತಲೆ ಮೇಲೆ ಕಲ್ಲು ಹಾಕಿ ಹತ್ಯೆ ಮಾಡಿದ್ದ ಎಂದು ಪೊಲೀಸರು ತಿಳಿಸಿದರು.

ಮನೆ ಮುಂದೆ ಆಟವಾಡುತ್ತಿದ್ದ ಮಗು ಕಾಣಿಸದ ಕಾರಣ ತಾಯಿ ರಜಿಯಾ ಅಕ್ಕಪಕ್ಕದವರ ಬಳಿ ವಿಚಾರಿಸಿದಾಗ ಪರಿಯದ ವ್ಯಕ್ತಿಯೊಬ್ಬ ಕರೆದುಕೊಂಡು ಹೋಗಿದ್ದನ್ನು ನೋಡಿದ್ದಾಗಿ
ಹೇಳಿದ್ದಾರೆ. ಹೀಗಾಗಿ, ದಂಪತಿ ರಾಜಗೋಪಾನಗರ ಪೊಲೀಸ್ ಠಾಣೆಗೆ ತೆರಳಿ ಅಪಹರಣ ದೂರು ದಾಖಲಿಸಿದ್ದರು. ಸ್ಥಳೀಯರು ಕೊಟ್ಟ ಮಾಹಿತಿ ಮೇರೆಗೆ ಭಾನುವಾರ ಮೂರ್ತಿಯನ್ನು ಪೊಲೀಸರು ವಶಕ್ಕೆ ಪಡೆದರು. ವಿಚಾರಣೆ ನಡೆಸಿದಾಗ ಮಗುವನ್ನು ಯಾವಾಗ, ಯಾಕೆ ಕರೆದೊಯ್ದು, ಏನು ಮಾಡಿದೆ ಎಂಬುದು ಗೊತ್ತಿಲ್ಲ ಎಂದು ಆರೋಪಿ ಹೇಳಿಕೆ ನೀಡುತ್ತಿದ್ದಾನೆ.

ಯಾವ ಕಾರಣಕ್ಕೆ ಮಗುವನ್ನು ಕೊಲೆ ಮಾಡಿದ್ದಾನೆ ಎಂಬುದನ್ನು ಸ್ಪಷ್ಟವಾಗಿ ಹೇಳುತ್ತಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರ ದಾರಿ ತಪ್ಪಿಸುವ ಯತ್ನ ವಿಚಾರಣೆ ವೇಳೆ ಆರೋಪಿ ಮೂರ್ತಿ ಮಗುವನ್ನು ಅಪಹರಿಸಿಲ್ಲ ಎಂದು ವಾದಿಸಿದ್ದ. ಆದರೆ, ಪೊಲೀಸ್ ಭಾಷೆಯಲ್ಲಿ ವಿಚಾರಿಸಿದಾಗ ಮಗುವನ್ನು ಕರೆದುಕೊಂಡು ಹೋಗಿದ್ದು ನಿಜ.

ಆದರೆ ಎಲ್ಲಿಗೆ ಕರೆದೊಯ್ದೆ ಎನ್ನುವುದು ಗೊತ್ತಿಲ್ಲ ಎಂದು ಹೇಳತೊಡಗಿದೆ. ಕೆಲ ಹೊತ್ತಿನ ಬಳಿಕ ಎಂ.ಎಸ್.ಪಾಳ್ಯದಲ್ಲಿನ ಗೆಳೆಯನ ಮನೆಯಲ್ಲಿ ಬಿಟ್ಟು ಬಂದಿದ್ದೇನೆ ಎಂದು ಹೇಳಿದ್ದ. ಹೀಗಾಗಿ, ಎಂ.ಎಸ್. ಪಾಳ್ಯಕ್ಕೆ ಕರೆದೊಯ್ದು ಹುಡುಕಲಾಯಿತು. ಆಗ, ಮಗು ಆರ್‍ಎಂಸಿ ಯಾರ್ಡ್‍ನಲ್ಲೇ ಇದೆ ಎಂದು ವರಸೆ ಬದಲಿಸಿದ್ದ. ಅಲ್ಲಿಂದ ಆರ್‍ಎಂಸಿ ಯಾರ್ಡ್‍ಗೆ ಬಂದು ಹುಡುಕಾಡಿದಾಗ ಮಗು ಪತ್ತೆಯಾಗಲಿಲ್ಲ. ಕೊನೆಗೆ ಗೊರಗುಂಟೆಪಾಳ್ಯಕ್ಕೆ ಕರೆದೊಯ್ದು ಹತ್ಯೆ ಮಾಡಿದ್ದ ಸ್ಥಳ ತೋರಿಸಿದಾಗ ಮಗುವಿನ ಮೃತದೇಹ ಪತ್ತೆಯಾಯಿತು ಎಂದು ತನಿಖಾಧಿಕಾರಿಗಳು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com