
ಗೋಕಾಕ: ಗ್ರಾಪಂ ಪರವಾನಿಗೆ ಪಡೆಯದೇ ಪೂರ್ಣಗೊಳಿಸಿದ ಮನೆ ಕಟ್ಟಡಕ್ಕೆ ಪರವಾನಿಗೆ ನೀಡುವಂತೆ ಕರ್ತವ್ಯ ನಿರತ ಕಾರ್ಯದರ್ಶಿಗೆ ಮುತ್ತಿಗೆ ಹಾಕಿ ಜೀವ ಬೆದರಿಕೆ ಒಡ್ಡಿ ಪರವಾನಿಗೆ ಪತ್ರದ ಮೇಲೆ ಸಹಿ ಮಾಡಿಸಿಕೊಂಡ ಮಾಜಿ ಸೈನಿಕ ಹಾಗೂ ಅವರ ಮಕ್ಕಳನ್ನು ಪೊಲೀಸರು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ತಾಲೂಕಿನ ಸುಲದಾಳ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಎಂ.ಡಿ. ಸರಕಾವಸ್, ಆ. 31 ರಂದು ಪಂಚಾಯಿತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ವೇಳೆ ಸುಲದಾಳ ಗ್ರಾಮದ ಮಾಜಿ ಸೈನಿಕ ನಿಂಗಯ್ಯ ಒಳಗಿನಮಠ ಮಕ್ಕಳೊಂದಿಗೆ ಹೋಗಿ ಬೆದರಿಕೆ ಹಾಕಿದ್ದಾರೆ.
ಜತೆಗೆ ಮಕ್ಕಳಾದ ನಾಗರಾಜ ಹಾಗೂ ರಾಜು ಸಹ ಇದ್ದರು. ಈಗ ಪೊಲೀಸರ ಅತಿಥಿಯಾಗಿದ್ದಾರೆ.
Advertisement