ವಿಧಾನಸಭಾ ಚುನಾವಣೆ ದೃಷ್ಟಿಯಲ್ಲಿರಿಸಿ ಕೆಲಸ ಮಾಡಿ

ಮುಂದಿನ ವಿಧಾಸನಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಕಾರ್ಪೊರೇಟರ್ ಗಳು ಕೆಲಸ ಮಾಡಬೇಕು ಎಂದು ರಾಜ್ಯಸಭಾ ಸದಸ್ಯ ರೆಹಮಾನ್ ಖಾನ್ ಕಿವಿಮಾತು ಹೇಳಿದ್ದಾರೆ...
ರಾಜ್ಯಸಭಾ ಸದಸ್ಯ ರೆಹಮಾನ್ ಖಾನ್  (ಸಂಗ್ರಹ ಚಿತ್ರ)
ರಾಜ್ಯಸಭಾ ಸದಸ್ಯ ರೆಹಮಾನ್ ಖಾನ್ (ಸಂಗ್ರಹ ಚಿತ್ರ)
Updated on

ಬೆಂಗಳೂರು: ಮುಂದಿನ ವಿಧಾಸನಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಕಾರ್ಪೊರೇಟರ್ ಗಳು ಕೆಲಸ ಮಾಡಬೇಕು ಎಂದು ರಾಜ್ಯಸಭಾ ಸದಸ್ಯ ರೆಹಮಾನ್ ಖಾನ್ ಕಿವಿಮಾತು ಹೇಳಿದ್ದಾರೆ.

ಕೆಪಿಸಿಸಿಯ ಅಲ್ಪಸಂಖ್ಯಾತ ಘಟಕ ಭಾನುವಾರ ಆಯೋಜಿಸಿದ್ದ ಪಾಲಿಕೆಯ ನೂತನ ಕಾಂಗ್ರೆಸ್ ಸದಸ್ಯರ ಸನ್ಮಾನ ಸಮಾರಂಭದಲ್ಲಿ ಮಾತನಾಡಿ, ಬಿಜೆಪಿ ಅವಧಿಯಲ್ಲಿ ಭ್ರಷ್ಟಾಚಾರ ನಡೆದಿದ್ದು, ಮತ್ತೆ ಲೂಟಿ ಮಾಡದಂತೆ ಮೈತ್ರಿ ಆಡಳಿತ ರಚಿಸಲಾಗಿದೆ. ಪಾಲಿಕೆ ಸದಸ್ಯರು ಮುಂದಿನ ವಿಧಾನಸಭಾ ಚುನಾವಣೆ ಗಮನದಲ್ಲಿರಿಸಿಕೊಂಡು ಕೆಲಸ ಮಾಡಬೇಕು.

ಆಡಳಿತಾಧಿಕಾರಿಗಳ ಅವಧಿಯಲ್ಲಿ ಬಿಬಿಎಂಪಿ ಅಭಿವೃದ್ಧಿಯಾಗಿದೆ. ಇದನ್ನೇ ಮುಂದುವರಿಸುವಂತೆ ಕೆಲಸ ಮಾಡಿ ಪಕ್ಷಕ್ಕೆ ಹೆಸರು ತರಬೇಕು. ಶಾಸಕರು ಹಾಗೂ ಸಚಿವರಿಗಿಂತ ಪಾಲಿಕೆ ಸದಸ್ಯರಿಗೆ ಜನರ ನೇರ ಸಂಪರ್ಕವಿರುತ್ತದೆ. ಇದನ್ನು ಬಳಸಿಕೊಂಡು ಜನರ ಬಳಿಗೆ ನಿತ್ಯ ತೆರಳಿ ಸಮಸ್ಯೆ ಆಲಿಸಬೇಕು ಎಂದರು.

ಕಾಯ್ದೆ ಪ್ರಕಾರವೇ ಮೈತ್ರಿ: ಚುನಾವಣೆಯ ಜನಾದೇಶಕ್ಕೆ ವಿರುದ್ಧವಾಗಿ ಕಾಂಗ್ರೆಸ್ ಅಧಿಕಾರ ಹಿಡಿದಿದೆ ಎನ್ನುವುದು ಸರಿಯಲ್ಲ. ಕೆಎಂಸಿ ಕಾಯ್ದೆ ಪ್ರಕಾರವೇ ನಡೆದುಕೊಂಡಿದ್ದು, ಹೆಚ್ಚಿನ ಮತ ಪಡೆದವರು ಮೇಯರ್ ಆಗಬೇಕೆಂದು ನಿಯಮದಲ್ಲಿ ಹೇಳಲಾಗಿದೆ.

ದೇಶದಲ್ಲಿ ಸಾಕಷ್ಟು ಸ್ಥಳೀಯ ಸಂಸ್ಥೆಗಳಲ್ಲಿ ಬಿಜೆಪಿ ಇದೇ ರೀತಿ ಮೈತ್ರಿ ಮಾಡಿಕೊಂಡು ಅಧಿಕಾರ ಪಡೆದಿದೆ. ಪಾಲಿಕೆ ಸದಸ್ಯರು ಇದನ್ನು ಕಡೆಗಣಿಸಿ ಜನರ ಕೆಲಸ ಮಾಡಬೇಕು. ಸದಸ್ಯರ ಜೊತೆಗೂ ಸರ್ಕಾರವೂ ತನ್ನ ಜವಾಬ್ದಾರಿ ನಿರ್ವಹಿಸಲಿದೆ ಎಂದರು.

ಅಶೋಕ್ ಹುಂಬತನ: ವಿಧಾನಪರಿಷತ್ ಸದಸ್ಯಎಚ್.ಎಂ.ರೇವಣ್ಣ ಮಾತನಾಡಿ, ಜಾತ್ಯತೀತ ನಿಲುವಿನ ಜೆಡಿಎಸ್ ಈ ಬಾರಿ ಉತ್ತಮ ಕೆಲಸ ಮಾಡಿದೆ. ಬಿಜೆಪಿಯಿಂದ ಹಲವು ಸದಸ್ಯರಿಗೆ ಹಣದ ಆಮಿಷ ಬಂದಿದ್ದರೂ ಒಪ್ಪಿಕೊಳ್ಳದ ಸದಸ್ಯರು, ಮೈತ್ರಿ ಆಡಳಿತ ರಚಿಸಲು ಕಾರಣರಾಗಿದ್ದಾರೆ. ಆರ್.ಅಶೋಕ್ ಹುಂಬತನ ತೋರಿ ತಮ್ಮಿಂದಲೇ ಪವಾಡವಾಗಿದೆ ಎಂದು ಹೇಳಿಕೊಂಡರು. ಕಳೆದ ಬಾರಿ ಬಿಬಿಎಂಪಿ ಬಿಜೆಪಿ ಆಡಳಿತದಲ್ಲಿ ನಲುಗಿದ್ದು, ಈಗ ಸುಧಾರಿಸಲಿದೆ ಎಂದರು. ಸಮಾರಂಭದಲ್ಲಿ ಕಾಂಗ್ರೆಸ್ ಸದಸ್ಯರನ್ನು ಸನ್ಮಾನಿಸಲಾಯಿತು. ಸಚಿವ ರೋಷನ್ ಬೇಗ್, ಘಟಕದ ಅಧ್ಯಕ್ಷ ಸಯೀದ್ ಆಹ್ಮದ್, ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಗುರಪ್ಪನಾಯ್ಡು, ಮುಖಂಡ ಸಿ.ನಾರಾಯಣಸ್ವಾಮಿ ಹಾಜರಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com