ಪೆನ್ನು ಕಸಿದ ಪ್ರತಿಭಟನಾಕಾರರು

ಮಹದಾಯಿ ಯೋಜನೆ ಅನುಷ್ಠಾನಕ್ಕಾಗಿ ರೈತರ ಕೂಗು ದಿನೇ ದಿನೇ ಹೆಚ್ಚುತ್ತಿದ್ದು, ನರಗುಂದ ಹಾಗೂ ನವಲಗುಂದದಲ್ಲಿ ಪ್ರತಿಭಟನೆ ತೀವ್ರಗೊಳ್ಳುತ್ತಲೇ...
ಮಹದಾಯಿ ಯೋಜನೆ ಅನುಷ್ಠಾನಕ್ಕಾಗಿ ರೈತರ ಪ್ರತಿಭಟನೆ (ಸಂಗ್ರಹ ಚಿತ್ರ)
ಮಹದಾಯಿ ಯೋಜನೆ ಅನುಷ್ಠಾನಕ್ಕಾಗಿ ರೈತರ ಪ್ರತಿಭಟನೆ (ಸಂಗ್ರಹ ಚಿತ್ರ)

ಹಾಸನ/ಹುಬ್ಬಳ್ಳಿ/ಪಣಜಿ: ಮಹದಾಯಿ ಯೋಜನೆ ಅನುಷ್ಠಾನಕ್ಕಾಗಿ ರೈತರ ಕೂಗು ದಿನೇ ದಿನೇ ಹೆಚ್ಚುತ್ತಿದ್ದು, ನರಗುಂದ ಹಾಗೂ ನವಲಗುಂದದಲ್ಲಿ ಪ್ರತಿಭಟನೆ ತೀವ್ರಗೊಳ್ಳುತ್ತಲೇ ಇದೆ. ನರಗುಂದದಲ್ಲಿ 61 ದಿನಗಳಿಂದ ಧರಣಿ ನಡೆಯುತ್ತಿದ್ದು, ರಾಜ್ಯ ಸರ್ಕಾರ ಸ್ಪಂದಿಸದಿದ್ದರೆ, ಮುಂದಿನ ದಿನಗಳಲ್ಲಿ ಹೋರಾಟ ಮತ್ತಷ್ಟು ತೀವ್ರವಾಗಲಿದೆ ಎಂದು ರೈತರು ಎಚ್ಚರಿಸಿದ್ದಾರೆ. ಮತ್ತೊಂದೆಡೆ ಸರ್ಕಾರಿ ಸಿಬ್ಬಂದಿ ಪೆನ್ನು ಕಸಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸೋಮವಾರ ನವಲಗುಂದದ ಉಪನೊಂದಣಾಧಿಕಾರಿ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಿಬ್ಬಂದಿಯ ಪೆನ್ನು ಕಸಿದ ರೈತ ಹೋರಾಟಗಾರರು, ಕರ್ತವ್ಯಕ್ಕೆ ಅಡ್ಡಿಯಾಗುವ ಮೂಲಕ ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದರು. ನರಗುಂದ ಪಟ್ಟಣದ ಯುವಕ ಮಲ್ಲೇಶ ಅಳಗವಾಡಿ ಅವರು ಮಾರುತೇಶ್ವರ ದೇವಸ್ಥಾನದಿಂದ ವೀರಗಲ್ಲಿನ ವರೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ದೀಡ್ ನಮಸ್ಕಾರ ಹಾಕಿ,ಯೋಜನೆ ಅನುಷ್ಠಾನಕ್ಕಾಗಿ ಪ್ರಾರ್ಥಿಸಿದರು. ಗದಗದಲ್ಲಿ ಮಾಜಿ ಶಾಸಕ ಜಿ.ವಿ. ಶ್ರೀರಾಮ ರೆಡ್ಡಿ ನೇತೃತ್ವದಲ್ಲಿ ಸಿಪಿಐ (ಎಂ) ಪ್ರತಿಭಟನೆ ನಡೆಸಿದೆ. ಕಟ್ಟಡ ನಿರ್ಮಾಣ ಮತ್ತು ಕಾಮಗಾರಿ ಮಜ್ದೂರ ಸಂಘ ಹುಬ್ಬಳ್ಳಿಯಲ್ಲಿ ಪ್ರತಿಭಟನೆ ಮಾಡಿತು.

ದೇವೇಗೌಡರ ಆಗ್ರಹ: ಕಳಸ-ಬಂಡೂರಿ ನಾಲೆಗಳಿಗೆ ಮಹದಾಯಿ ನದಿಯಿಂದ 7.56 ಟಿಎಂಸಿ ನೀರನ್ನು ಕುಡಿಯುವ ಉದ್ದೇಶಕ್ಕೆ ನೀಡುವುದರಿಂದ ಯಾವುದೇ ನ್ಯಾಯಧಿಕರಣ
ಗಳಾಗಲಿ, ಕಾನೂನುಗಳಾಗಲಿ ಅಡ್ಡ ಬರುವುದಿಲ್ಲ. ಪ್ರಧಾನ ಮಂತ್ರಿ ನ್ಯಾಯಾಕರಣದ ತೀರ್ಪಿಗಾಗಿ ಕಾಯದೇ ಕೂಡಲೇ ಈ ಬಗ್ಗೆ ಆದೇಶ ನೀಡಬೇಕು ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹಾಸನದಲ್ಲಿ ಆಗ್ರಹಿಸಿದ್ದಾರೆ.  ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಕೂಡಲೇ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ, ಈ ಬಗ್ಗೆ ಆಗಿರುವ ಹಿಂದಿನ ನಿರ್ಧಾರಗಳು ಮತ್ತು ಸದ್ಯದ ವಾಸ್ತವಾಂಶವ ನ್ನು ಮನವರಿಕೆ ಮಾಡಿಕೊಡುವೆ. ಅದು ಮಾತ್ರವೇ  ಅಲ್ಲ ಮುಖ್ಯಮಂತ್ರಿ ಸಿದ್ದರಾಮಯ್ಯವರು ವಿಧಾನಸಭೆ ಬಿಟ್ಟು ಬೇರೆಲ್ಲೇ ಸಭೆ ಕರೆದರೂ ಕಳಸಾ-ಬಂಡೂರಿ ಯೋಜನೆ ಬಗ್ಗೆ ಮಾತನಾಡುವೆ. ನನ್ನ ಇತಿಮಿತಿಯೊಳಗೆತೆಗೆದುಕೊಳ್ಳಬಹುದಾದ ಕ್ರಮಗಳ ಬಗ್ಗೆ
ಸಲಹೆ ನೀಡುವೆ. ಪ್ರಧಾನಮಂತ್ರಿಯ ಶಿಷ್ಟಾಚಾರ ಇರುವುದರಿಂದ ವಿಧಾನಸಭೆಯಲ್ಲಿ ನಡೆಯುವ ಸಭೆಗಳಿಗೆ ಮತ್ತು ನಿಯೋಗದೊಂದಿಗೆ ಪ್ರಧಾನಿ ಭೇಟಿ ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ವಿವಾದ ಇತ್ಯರ್ಥಕ್ಕೆ ಬದ್ಧ: ಗುಂಡೂರಾವ್ ``ಕಳಸಾ- ಬಂಡೂರಿ ಹಾಗೂ ಮಹದಾಯಿ ವಿವಾದ ಇತ್ಯರ್ಥಗೊಳಿಸಿ, ಯೋಜನೆ ಅನುಷ್ಠಾನಗೊಳಿಸಲು ಸರ್ಕಾರ ಬದಟಛಿವಾಗಿದೆ'' ಎಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹುಬ್ಬಳ್ಳಿಯಲ್ಲಿ ಹೇಳಿದ್ದಾರೆ. ಧಾರವಾಡದಲ್ಲಿ ಮಾತನಾಡಿದ ಅವರು, ``ಕಳಸಾ-ಬಂಡೂರಿ ಮತ್ತು ಮಹದಾಯಿ ಯೋಜನೆ ಜಾರಿಗೆ ಸರ್ಕಾರ ಬದ್ಧ. ಈ ವಿಷಯ ನ್ಯಾಯಾಧಿಕರಣ ದ ಮುಂದೆ ಇರುವುದರಿಂದ ಸ್ವಲ್ಪ ಹಿನ್ನಡೆಯಾಗಿ ದೆ. ಪ್ರಧಾನಮಂತ್ರಿಗಳು ಇಚ್ಛಾಶಕ್ತಿ ತೋರಿದರೆ ಯೋಜನೆ ಸರಾಗವಾಗಿ ಅನುಷ್ಠಾನವಾಗಲಿದೆ. ವಕೀಲರು ಹಾಗೂ ತಜ್ಞರಿಂದ ಸೂಕ್ತ ಸಲಹೆ ಪಡೆದು ಮಧ್ಯಂತರ ಅರ್ಜಿ ಸಲ್ಲಿಸುವ ಬಗ್ಗೆ ಚಿಂತನೆ ನಡೆದಿದೆ.
 


ಅರ್ಜಿ ಸಲ್ಲಿಕೆಗೆ ವಾರದಲ್ಲಿ ತೀರ್ಮಾನ
ನವದೆಹಲಿ: ಹೋರಾಟ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಮಹದಾಯಿ ನ್ಯಾಯಾಧಿಕರಣ ದಲ್ಲಿ ಮಧ್ಯಾಂತರ ಆದೇಶ ಕೋರಲು ಅರ್ಜಿ ಸಲ್ಲಿಸುವ ಕುರಿತಂತೆ ಇನ್ನೊಂದು ವಾರದಲ್ಲಿ ರಾಜ್ಯ ಸರ್ಕಾರ ಅಂತಿಮ ತೀರ್ಮಾನ ಕೈಗೊಳ್ಳಲಿದೆ. ಸಚಿವ ಎಂ.ಬಿ.ಪಾಟೀಲ್ ಸೋಮವಾರ ಕಾನೂನು ತಜ್ಞ  ಫಾಲಿ ನಾರಿಮನ್‍ರನ್ನು ಭೇಟಿ ಮಾಡಿ, ರಾಜ್ಯದಲ್ಲಿ ಕಳಸ ಬಂಡೂರಿ ಯೋಜನೆ ಜಾರಿಗೆ ಆಗ್ರಹಿಸಿ ನಡೆಯುತ್ತಿರುವ ಹೋರಾಟ
ಮತ್ತು ತುರ್ತು ಮಾರ್ಗೋಪಾಯಗಳ ಕುರಿತಂತೆ ಚರ್ಚಿಸಿ ದರು. ಈ ವೇಳೆ ಸ್ಥಳೀಯವಾಗಿ ಮಧ್ಯಾಂತರ ಆದೇಶಕ್ಕೆ ಮನವಿ ಸಲ್ಲಿಸುವಂತೆಒತ್ತಡ ಹೆಚ್ಚುತ್ತಿರುವ ಬಗ್ಗೆಯೂ ಮಾಹಿತಿ ನೀಡಿದರು. ಜನರು ನಡೆಸುತ್ತಿರುವ ಹೋರಾಟ ದ ಸ್ವರೂಪ ಮತ್ತಿತರ ಮಾಹಿತಿ ಪಡೆದ ಫಾಲಿ ನಾರಿಮನ್ ಕೆಲವು ಮಹತ್ವದ ದಾಖಲೆಗಳನ್ನು ಒದಗಿಸುವಂತೆ ಸಚಿವರಿಗೆ
ತಿಳಿಸಿದ್ದಾರೆ. ಹೀಗಾಗಿ, ಇನ್ನೆರಡು ದಿನಗಳಲ್ಲಿ ಅಗತ್ಯ ದಾಖಲೆಗಳನ್ನು ಜಲಸಂಪನ್ಮೂಲ ಇಲಾಖೆ ಒದಗಿಸಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com