
ಬೆಂಗಳೂರು: ಮಳೆ ನೀರು ಜನವಸತಿ ಪ್ರದೇಶಗಳಿಗೆ ನುಗ್ಗಲು ರಾಜಕಾಲುವೆ ಒತ್ತುವರಿ ಕಾರಣವಾಗಿದ್ದು, ನಿರ್ದಾಕ್ಷಿಣ್ಯವಾಗಿ ತೆರವು ಕಾರ್ಯಾಚರಣೆ ನಡೆಸಬೇಕು ಎಂದು ಮೇಯರ್ ಮಂಜುನಾಥರೆಡ್ಡಿ ಸೂಚಿಸಿದ್ದಾರೆ.
ಸೋಮವಾರ ಬಿಬಿಎಂಪಿ ಕಚೇರಿಯಲ್ಲಿ ಪ್ರಥಮ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ಮಳೆ ಬಂದಾಗಲೆಲ್ಲಾ ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿ ಜನರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಾರೆ. ಪಾಲಿಕೆ ಸದಸ್ಯನಾಗಿದ್ದಾಗಿನಿಂದಲೂ ಕೌನ್ಸಿಲ್ ಸಭೆಯಲ್ಲಿ ಈ ವಿಚಾರವನ್ನು ಪ್ರತಿ ಬಾರಿ ಪ್ರಸ್ತಾಪಿಸುತ್ತಿದ್ದೆ. ಮಳೆ ನೀರು ನುಗ್ಗಲು ರಾಜಕಾಲುವೆ ಒತ್ತುವರಿಯಾಗಿರುವುದೇ ಕಾರಣ ಎಂದು ಅಧಿಕಾರಿಗಳಿಗೆ ತಿಳಿದಿದೆ. ಆದರೆ ಅದನ್ನು ತೆರವುಗೊಳಿಸಲು ಮಾತ್ರ ಅಧಿಕಾರಿಗಳು ಮುಂದಾಗುತ್ತಿಲ್ಲ. ರಾಜಕಾಲುವೆ ಅಬಿsವೃದಿಟಛಿ ಆಗದೆ ಮಳೆಗಾಲದಲ್ಲಿ ಪ್ರವಾಹ ಉಂಟಾಗುವು ದನ್ನು ತಪ್ಪಿಸಲು ಸಾಧ್ಯವಿಲ್ಲ.
ಈಗಾಗಲೇ ನ್ಯಾಯಾಲಯ ಕೂಡ ತೆರವು ಬಗ್ಗೆ ಕಠಿಣ ನಿರ್ಧಾರ ಕೈಗೊಳ್ಳಲು ಸೂಚನೆ ನೀಡಿದೆ. ಸರ್ವೆ ಕಾರ್ಯ ಮುಗಿದಿದ್ದು ಶೀಘ್ರದಲ್ಲೇ ತೆರವು ಕಾರ್ಯಾಚರಣೆ ಆರಂಭಿಸಿ ಎಂದು
ಸೂಚಿಸಿದರು. ಆಯುಕ್ತ ಜಿ.ಕುಮಾರ್ ನಾಯಕ್, ಕಳೆದ 4 ತಿಂಗಳಲ್ಲಿ ಎಷ್ಟು ಕಂದಾಯ ವಸೂಲಿ ಮಾಡಲಾಗಿದೆ ಮತ್ತು ಅದನ್ನು ಹೇಗೆ ಬಳಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು. ಲೆಕ್ಕಪತ್ರ ವಿಭಾಗದಲ್ಲಿ ಯಾವುದೇ ಲೋಪವಾಗದಂತೆ ಕ್ರಮ ವಹಿಸಲಾಗಿದೆ ಎಂದು ವಿವರಿಸಿದರು.
ಹಿಂದೆ ಲೆಕ್ಕಪತ್ರ ವಿಭಾಗದ ಕಾರ್ಯವೈಖರಿಯಿಂದ ಪಾಲಿಕೆಗೆ ಕೆಟ್ಟ ಹೆಸರು ಬಂದಿತ್ತು. ಗುತ್ತಿಗೆದಾರರಿಗೆ ಬಿಲ್ ಪಾವತಿ ಮಾಡುವಾಗ ಚೆಕ್ ವ್ಯವಹಾರ ಮಾಡದೆ ನೇರವಾಗಿ ಆರ್
ಟಿಜಿಎಸ್ ಮೂಲಕ ಹಣ ಪಾವತಿ ಮಾಡುವುದು ಉತ್ತಮ ಬೆಳವಣಿಗೆ- ಯಾಗಿದೆ. ಲೆಕ್ಕಪತ್ರ ವಿಭಾಗದಲ್ಲಿ ಇನ್ನಷ್ಟು ಸುಧಾರಣೆಯಾಗಬೇಕಿದ್ದು, ಇದಕ್ಕಾಗಿ ಪ್ರತ್ಯೇಕ ಸಭೆ ಕರೆದು ಚರ್ಚಿಸಲಾಗುವುದು ಎಂದು ಮೇಯರ್ ಮಂಜುನಾಥ ರೆಡ್ಡಿ ತಿಳಿಸಿದರು. ರಸ್ತೆ ಸುಸ್ಥಿತಿಗೆ ಸಭೆ: ನಗರದ ರಸ್ತೆಗಳನ್ನು ನಗರೋತ್ಥಾನ ಯೋಜನೆ ಅಡಿಯಲ್ಲಿ ಅಬಿsವೃದಿಟಛಿಪಡಿಸಲಾಗಿದೆ.
ರಸ್ತೆಗಳಲ್ಲಿ ಗುಂಡಿಯಾಗದಂತೆ ನಿರ್ವಹಿಸುವುದು ಹಾಗೂ ರಸ್ತೆ ಬದಿ ಮೋರಿಗಳನ್ನು ಸ್ವಚ್ಛಗೊಳಿಸುವುದು ಗುತ್ತಿಗೆದಾರರ ಜವಾಬ್ದಾರಿಯಾಗಿದೆ. ರಸ್ತೆ ನಿರ್ವಹಣೆ ಅವಧಿ 3 ವರ್ಷ ಇರುವುದರಿಂದ ಗುತ್ತಿಗೆದಾರರಿಂದ ಮಾಡಿಸಬೇಕು. ಅಧಿಕಾರಿಗಳು ಕೂಡಲೇ ಸಭೆ ಕರೆದು ಗುತ್ತಿಗೆದಾರರ ಮೇಲೆ ಒತ್ತಡ ಹೇರಿ ರಸ್ತೆ ಉತ್ತಮ ನಿರ್ವಹಣೆ ಮಾಡುವಂತೆ ತಿಳಿಸಬೇಕು
ಎಂದರು. ತೆರವಿಗೆ ಸಹಕಾರ: ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮೇಯರ್ ಮಂಜುನಾಥ ರೆಡ್ಡಿ, ರಾಜಕಾಲುವೆಗಳ ಸ್ಥಿತಿಗತಿ ಹಾಗೂ ಸಂರಕ್ಷಿಸುವ ಉದ್ದೇಶದಿಂದ ಸಭೆಯಲ್ಲಿ ಚರ್ಚಿಸಲಾಗಿದೆ. ಸುಮಾರು 80 ಕಡೆಗಳಲ್ಲಿ ರಾಜಕಾಲುವೆಗೆ ಬೇಲಿ ಹಾಕುತ್ತಿದ್ದು, ಯೋಜನೆಯ ಪೂರ್ಣ ಮಾಹಿತಿ ನೀಡಲು ಸೂಚಿಸಿದ್ದೇನೆ. ನಗರದಲ್ಲಿ ರಾಜಕಾಲುವೆ ಒತ್ತುವರಿ ಹೆಚ್ಚಿದ್ದು, ಮುಂದಿನ ಪೀಳಿಗೆಗಾಗಿ ರಕ್ಷಿಸಲು ಕ್ರಮ ಕೈಗೊಳ್ಳಬೇಕಿದೆ. ನಗರಸಭೆ ಹಾಗೂ ಪುರಸಭೆಗಳ ವ್ಯಾಪ್ತಿಯ ಪ್ರದೇಶಗಳಲ್ಲಿ ಒತ್ತುವರಿ ಹೆಚ್ಚಿದೆ. ಇದು ಸರ್ಕಾರಕ್ಕೆ ಸೇರಿರುವ ಜಾಗವಾಗಿದ್ದು, ಜಿಲ್ಲಾಡಳಿತ ತೆರವು ಕಾರ್ಯಾಚರಣೆ ನಡೆಸಬೇಕಾಗುತ್ತದೆ. ಜಿಲ್ಲಾಧಿಕಾರಿ ವಿ.ಶಂಕರ್ ನೇತೃತ್ವದಲ್ಲಿ ರಾಜಕಾಲುವೆ ಒತ್ತುವರಿಯಾಗಿರುವ ಪ್ರದೇಶಗಳ ಪಟ್ಟಿ ತಯಾರಿಸಲಾಗಿದೆ. ಈ ಮಾಹಿತಿಯನ್ನೂ ಬಿಬಿಎಂಪಿಗೆ ನೀಡಲು ಕೋರಲಾಗಿದೆ ಎಂದರು.
ಕಟ್ಟಡಗಳನ್ನು ನಗರದಲ್ಲಿ ಸಾಕಷ್ಟು ನಿರ್ಮಿಸಬಹುದು. ಆದರೆ ಒಂದು ಬಾರಿ ರಾಜಕಾಲುವೆ ಮುಚ್ಚಿ ಕಟ್ಟಡ ನಿರ್ಮಿಸಿದರೆ ಭವಿಷ್ಯದಲ್ಲಿ ತೊಂದರೆ ಅನುಭವಿಸಬೇಕಾಗುತ್ತದೆ. ತೆರವು ಕಾರ್ಯಾಚರಣೆ ಬಗ್ಗೆ ಬಿಬಿಎಂಪಿ ಆಯುಕ್ತರ ಬಳಿಯೂ ಚರ್ಚಿಸಲಾಗಿ ದೆ. ಎಲ್ಲೆಲ್ಲಿ ಒತ್ತುವರಿಯಾಗಿದೆ ಎಂದು ಮೊದಲು ಗುರುತಿಸಬೇಕಿದೆ. ಮುಂದಿನ ದಿನಗಳಲ್ಲಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ತೆರವು ಕಾರ್ಯಾಚರಣೆ ನಡೆಯುವುದಾದರೆ, ಬಿಬಿಎಂಪಿಯಿಂದ ಸಿಬ್ಬಂದಿ ಸೇರಿದಂತೆ ಅಗತ್ಯ ಸಹಕಾರ ನೀಡಲಾಗುವುದು ಎಂದರು. ಬಿಂಗಿಪುರ ಕಸ ಸಮಸ್ಯೆ ಮಂಗಳವಾರ ಬಗೆಹರಿಯುವ ಸಾಧ್ಯತೆಯಿದೆ. ಹಿಂದಿನ ದಿನದ ರಾತ್ರಿ ಸಣ್ಣ ಪ್ರಮಾಣದ ಕಸವನ್ನು ಬಿಂಗಿಪುರದಲ್ಲಿ ವಿಲೇವಾರಿ ಮಾಡಲಾಗಿದೆ ಎಂದರು.
Advertisement