
ಬೆಂಗಳೂರು: ಖಾಸಗಿ ಕ್ಲಬ್ ಮತ್ತಿತರ ಸಂಘ ಸಂಸ್ಥೆಗಳ ಮೇಲೆ ನಿಯಂತ್ರಣ ಹೇರಲು ಮತ್ತು ಈ ಸಂಸ್ಥೆಗಳಲ್ಲಿ ಶಾಸಕರು, ಸಂಸದರಿಗೆ ಸದಸ್ಯತ್ವ ನೀಡುವುದನ್ನು ಕಡ್ಡಾಯಗೊಳಿಸಲು ಸರ್ಕಾರ ಮುಂದಾಗಿದ್ದು, ಈ ಸಂಬಂಧ ತಮಿಳುನಾಡು ಮಾದರಿಯಲ್ಲಿ ಕಾನೂನು ರೂಪಿಸುತ್ತಿದೆ.
ರಾಜ್ಯದ ಮುದ್ರಾಂಕ ಮತ್ತು ನೋಂದಣಿ ಇಲಾಖೆಯು ಕರ್ನಾಟಕ ಸಾರ್ವಜನಿಕ ಸ್ಥಳಗಳಿಗೆ ಪ್ರವೇಶ (ವಸ್ತ್ರ ಸಂಹಿತೆ ನಿರ್ಬಂಧ ತೆರವು, ಸದಸ್ಯತ್ವ ನಿಯಂತ್ರಣ ಹಾಗೂ ಶುಲ್ಕ) ಕರಡು ಮಸೂದೆ ಅಧಿಸೂಚನೆ ಹೊರಡಿಸಿದ್ದು, ಆಕ್ಷೇಪಣೆ, ಸಲಹೆಗೆ 15 ದಿನ ಕಾಲಾವಕಾಶ ನೀಡಿದೆ. ಇಂತಹದ್ದೊಂದು ಅಚ್ಚರಿಯ ವಿಧೇಯಕ ತರಲು ಕಾರಣವೂ ಇದೆ. ಬೆಂಗಳೂರಿನ ಪ್ರತಿಷ್ಠಿತ ಬೆಂಗಳೂರು ಕ್ಲಬ್ ಪ್ರವೇಶಕ್ಕೆ ಧಿರಿಸು ನಿಯಮ ಕಡ್ಡಾಯವಾಗಿತ್ತು. ಇದರಿಂದ ಅನೇಕ ಗಣ್ಯರು ಇರುಸು ಮುರಿಸು ಹೊಂದಿದ್ದರು.
ಪಾಶ್ಚಿಮಾತ್ಯ ಧಿರಿಸಿನಲ್ಲಿದ್ದರೆ ಮಾತ್ರ ಕ್ಲಬ್‍ಗೆ ಪ್ರವೇಶ ಎಂಬ ನಿಯಮ ಜಾರಿಯಲ್ಲಿತ್ತು. ಜೊತೆಗೆ ಸದಸ್ಯತ್ವ ವಿಚಾರದಲ್ಲೂ ಸಾಕಷ್ಟು ಎಡರು ತೊಡರುಗಳಿದ್ದವು. 2002ರಲ್ಲಿ ಅಂದಿನ
ರಾಷ್ಟ್ರೀಯ ಕಾನೂನು ಮಹಾವಿದ್ಯಾಲಯದ ನಿರ್ದೇಶಕ ಮೋಹನ್ ಗೋಪಾಲ್ಅವರಿಗೆ ಕ್ಲಬ್ ಪ್ರವೇಶ ನಿರಾಕರಿಸಿತ್ತು. ಏಕೆಂದರೆ ಅವರು ಧೋತಿ ಧರಿಸಿ ಅಲ್ಲಿಗೆ ತೆರಳಿದ್ದರು. ಅಲ್ಲಿಂದಲೇ ಬೆಂಗಳೂರು ಕ್ಲಬ್‍ನ ಧಿರಿಸು ನಿಯಮಕ್ಕೆ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು.
Advertisement