ಅಕ್ರಮ ವಿದ್ಯುತ್ ಬಳಸಿದರೆ ಕ್ರಮ: ಬೆಸ್ಕಾಂ

ಗಣೇಶ ಚತುರ್ಥಿಗೆ ಒಂದು ದಿನಬಾಕಿ ಇದ್ದು, ಈ ತಿಂಗಳ ಪೂರ್ತಿ ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ವಿಗ್ರಹ ಪ್ರತಿಷ್ಠಾಪಿಸಿ ಪೂಜಿಸುವುದರಿಂದ ಅಕ್ರಮವಾಗಿ ವಿದ್ಯುತ್ ಸಂಪರ್ಕ ಬಳಸಿ ಕಾರ್ಯಕ್ರಮ ಮಾಡದಂತೆ ಸಂಘಟನೆಗಳಲ್ಲಿ ಬೆಸ್ಕಾಂ ಮನವಿ ಮಾಡಿದೆ...
(ಸಾಂದರ್ಭಿಕ  ಚಿತ್ರ)
(ಸಾಂದರ್ಭಿಕ ಚಿತ್ರ)

ಬೆಂಗಳೂರು: ಗಣೇಶ ಚತುರ್ಥಿಗೆ ಒಂದು ದಿನಬಾಕಿ ಇದ್ದು, ಈ ತಿಂಗಳ ಪೂರ್ತಿ ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ವಿಗ್ರಹ ಪ್ರತಿಷ್ಠಾಪಿಸಿ ಪೂಜಿಸುವುದರಿಂದ ಅಕ್ರಮವಾಗಿ ವಿದ್ಯುತ್ ಸಂಪರ್ಕ ಬಳಸಿ ಕಾರ್ಯಕ್ರಮ ಮಾಡದಂತೆ ಸಂಘಟನೆಗಳಲ್ಲಿ ಬೆಸ್ಕಾಂ ಮನವಿ ಮಾಡಿದೆ.

ವಿದ್ಯುತ್ ಸಮಸ್ಯೆ ಎದುರಿಸುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ಬೀದಿ ವಿದ್ಯುತ್ ಕಂಬಗಳಿಂದ ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆದರೆ ಇನ್ನಷ್ಟು ಸಮಸ್ಯೆಯಾಗಲಿದೆ. ನಿಗಮದ ಆದೇಶ ಉಲ್ಲಂಘಿಸಿ ನಗರದ ಯಾವುದೇ ಪ್ರದೇಶದಲ್ಲಿ ಅಕ್ರಮ ಸಂಪರ್ಕ ಪಡೆದಲ್ಲಿ ಕೂಡಲೇ ಬೆಸ್ಕಾಂ ಜಾಗೃತ ದಳ ಧಾವಿಸಿ ಸಂಬಂಧಪಟ್ಟವರ ವಿರುದ್ಧ ಕ್ರಮ ತೆಗೆದುಕೊಳ್ಳಲಿದೆ.

ಒಂದು ವೇಳೆ ಅಕ್ರಮ ಸಂಪರ್ಕ ಪಡೆದಿರುವುದು ಕಂಡುಬಂದಲ್ಲಿ ಸಾರ್ವಜನಿಕರು ತಕ್ಷಣ ಮೊ. ವಾಟ್ಸ್ ಆ್ಯಪ್ ನಂ.9449844640 ಅಥವಾ ಸಹಾಯವಾಣಿ 1912 ಸಂಖ್ಯೆಗೆ ತಿಳಿಸುವಂತೆ ಕೋರಲಾಗಿದೆ. ಮಾಹಿತಿ ನೀಡಿದವರ ಹೆಸರನ್ನು ಗೌಪ್ಯವಾಗಿಡಲಾಗುವುದು. ಒಂದು ವೇಳೆ ಅಕ್ರಮ ವಿದ್ಯುತ್ ಸಂಪರ್ಕ ಪಡೆದಿರುವುದು ಪತ್ತೆಯಾದಲ್ಲಿ ಭಾರತೀಯ ವಿದ್ಯುತ್ ಕಾಯಿದೆ 2003ರ ಅನ್ವಯ 3 ವರ್ಷ ಜೈಲು ಶಿಕ್ಷೆ, ದಂಡ ವಿಧಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com