ವಕ್ಫ್ ಸಭೆಯಲ್ಲಿ ಗದ್ದಲ, ಹಲ್ಲೆಗೆ ಯತ್ನ

ನಗರದಲ್ಲಿ ಮಂಗಳವಾರ ನಡೆದ ವಕ್ಫ್ ಮಂಡಳಿ ಸಭೆಯಲ್ಲಿ ಭಾರೀ ಗದ್ದಲ ಉಂಟಾಗಿ ರಾಜ್ಯಸಭೆ ಸದಸ್ಯ ರೆಹಮಾನ್ ಖಾನ್ ಮೇಲೆ ಹಲ್ಲೆ ಯತ್ನವೂ ನಡೆದಿದೆ...
ಕೇಂದ್ರದ ಮಾಜಿ ಸಚಿವ ಸಿ.ಕೆ. ಜಾಫರ್ ಶರೀಫ್ (ಸಂಗ್ರಹ ಚಿತ್ರ)
ಕೇಂದ್ರದ ಮಾಜಿ ಸಚಿವ ಸಿ.ಕೆ. ಜಾಫರ್ ಶರೀಫ್ (ಸಂಗ್ರಹ ಚಿತ್ರ)

ಬೆಂಗಳೂರು: ನಗರದಲ್ಲಿ ಮಂಗಳವಾರ ನಡೆದ ವಕ್ಫ್ ಮಂಡಳಿ ಸಭೆಯಲ್ಲಿ ಭಾರೀ ಗದ್ದಲ ಉಂಟಾಗಿ ರಾಜ್ಯಸಭೆ ಸದಸ್ಯ ರೆಹಮಾನ್ ಖಾನ್ ಮೇಲೆ ಹಲ್ಲೆ ಯತ್ನವೂ ನಡೆದಿದೆ.

ರಾಜ್ಯ ವಕ್ಫ್ ಮಂಡಳಿ ಸದಸ್ಯರೂ ಆದ ರೆಹಮಾನ್ ಖಾನ್ ಭಾಗವಹಿಸಿದ್ದ ಸಭೆಯಲ್ಲಿ ದರ್ಗಾ ಆಡಳಿತ ಮಂಡಳಿ ನೇಮಕ ಪ್ರತಿಧ್ವನಿಸಿ ಭಾರೀ ಗಲಾಟೆ ನಡೆಯಿತು. ನೇಮಕ ವಿರೋಧಿಸಿದ ಕೆಲವರು ರೆಹಮಾನ್ ಖಾನ್ ಅವರನ್ನು ಲಿಫ್ಟ್ ನಲ್ಲೇ ಕೂಡಿ ಹಾಕಿ ದಿಗ್ಭಂದಕ್ಕೆ ಅಡ್ಡಿ ಪಡಿಸಿದರು. ಅಷ್ಟೇ ಅಲ್ಲ, ಘೇರಾವ್ ಹಾಕಿ ಟೀಕಿಸಿದರು.

ಮಂಗಳವಾರ ವಕ್ಫ್ ಮಂಡಳಿಯಲ್ಲಿ ನಿಗದಿಯಾಗಿದ್ದ ವಿಶೇಷ ಸಭೆಗೆ ಅವರು ಆಗಮಿಸುತ್ತಿದ್ದಂತೆ ಟಿಪ್ಪು ಸುಲ್ತಾನ್ ಸಂಯುಕ್ತ ರಂಗದ ಅಧ್ಯಕ್ಷ ಸರ್ದಾರ್ ಅಹ್ಮದ್ ಖರೇಷಿ ಹಾಗೂ ಬೆಂಬಲಿಗರು ರೆಹಮಾನ್ ಖಾನ್ ವಿರುದ್ಧ ಮಾತಿಗಿಳಿದು ಹಲ್ಲೆಗೆ ಯತ್ನಿಸಿದರು.

ಸೌತೆಷಾ-ಮಾಣಿಕ್‍ಷಾ ದರ್ಗಾ ಆಡಳಿತ ಮಂಡಳಿಗೆ ತಮ್ಮ ಆಪ್ತ ಉಬೇದುಲ್ಲಾ ಶರೀಫ್ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವುದು ಸರಿಯಲ್ಲ ಎಂದು ವಾದಿಸಿದರು. ಆಗ ಕೆಲವರು ವಕ್ಫ್ ಆಸ್ತಿ ಕಬಳಿಕೆ ಮತ್ತು ಅಮಾನತ್ ಬ್ಯಾಂಕ್ ದಿವಾಳಿ ವಿಚಾರ ಪ್ರಸ್ತಾಪಿಸಿ ರಹಮಾನ್ ಖಾನ್ ವಿರುದಟಛಿ ಘೋಷಣೆ ಕೂಗಿದರು. ನಂತರ ಪರಿಸ್ಥಿತಿ ಬಿಗಡಾಯಿಸಿ ಉಬೇದುಲ್ಲಾ ಶರೀಫ್ ಮತ್ತು ಬೆಂಬಲಿಗರು ರಹಮಾನ್ ಖಾನ್ ಮೇಲೆ ಹಲ್ಲೆಗೆ ಯತ್ನಿಸಿದರು ಎನ್ನಲಾಗಿದೆ.

ಖಾನ್ ಹೇಳಿದ್ದೇನು ?:
ಅಮಾನತ್ ಬ್ಯಾಂಕ್ ವಿಚಾರ ಮುಂದಿಟ್ಟುಕೊಂಡು ನನ್ನ ವಿರುದ್ಧ ಅಪಪ್ರಚಾರ ನಡೆಸುತ್ತಿದ್ದ ಕೇಂದ್ರದ ಮಾಜಿ ಸಚಿವ ಸಿ.ಕೆ. ಜಾಫರ್ ಶರೀಫ್ ಇದೀಗ ನನ್ನ ಮೇಲೆ ತಮ್ಮ ಬೆಂಬಲಿಗರ ಬಿಟ್ಟು ಹಲ್ಲೆ ಮಾಡಿಸಿದ್ದಾರೆ ಎಂದು ಖಾನ್ ಗಂಬಿsೀರ ಆರೋಪಿಸಿದರು. ಜಾಫರ್ ಶರೀಫ್ ಅವರು ತಮ್ಮ ಬೆಂಬಲಿಗ ಸರ್ದಾರ್ ಅಹ್ಮದ್ ಖುರೇಷಿ ಮತ್ತವರ ಬೆಂಬಲಿಗರ ಮೂಲಕ ನನ್ನ ಮೇಲೆ ಹಲ್ಲೆ ಮಾಡಿಸಿದ್ದಾರೆ ಎಂದು ಅವರು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು.

ವಕ್ಫ್ ಮಂಡಳಿ ಅಧ್ಯಕ್ಷ ಡಾ. ಮಹ್ಮದ್ ಯೂಸೂಫ್ ಆಹ್ವಾನಿಸಿದ್ದ ಸಭೆಯಲ್ಲಿ ಪಾಲ್ಗೊಳ್ಳಲು ಮಂಡಳಿ ಕಚೇರಿಗೆ ಬಂದಿದ್ದೆ. ಆಗ ಟಿಪ್ಪು ಸುಲ್ತಾನ್ ಸಂಯುಕ್ತ ರಂಗದ ಅಧ್ಯಕ್ಷ ಸರ್ದಾರ್ ಅಹ್ಮದ್ ಖುರೇಷಿ ಹಾಗೂ ಅವರ ಬೆಂಬಲಿಗರು ನನ್ನನ್ನು ತಡೆದರು. ಈ ವೇಳೆ ನನ್ನ ಭದ್ರತಾ ಸಿಬ್ಬಂದಿ ಮಧ್ಯಪ್ರವೇಶಿಸಿ ನನ್ನನ್ನು ಲಿಫ್ಟ್ ನೊಳಗೆ ಕರೆದುಕೊಂಡು ಹೋದರು.

ಆದರೆ ಲಿಫ್ಟ್ ಬಳಿ ಬಂದ ಸರ್ದಾರ್ ಅಹ್ಮದ ಖುರೇಶಿ ಹಾಗೂ ಇತರರು ನಾನು ಹೊರಗೆ ಬರದಂತೆ ತಡೆದರು. ಇದರಿಂದ ಐದು ನಿಮಿಷಕ್ಕೂ ಹೆಚ್ಚು ಕಾಲ ನಾನು ಲಿಫ್ಟ್ ನಲ್ಲೇ ಉಳಿದುಕೊಳ್ಳಬೇಕಾಯಿತು. ಈ ವೇಳೆ ನನ್ನ ಮೇಲೆ ಹಲ್ಲೆಗೆ ಯತ್ನಿಸಲಾಯಿತು. ಇದನ್ನು ತಡೆಯಲು ಬಂದ ನನ್ನ ಭದ್ರತಾ ಸಿಬ್ಬಂದಿ ಮೇಲೆ ಹಲ್ಲೆ ನಡೆಸಲಾಯಿತು ಎಂದು ರಹಮಾನ್ ಖಾನ್ ಆರೋಪಿಸಿದರು. ಆದರೆ, ಇದನ್ನು ವಿರೋಧಿಸಿರುವ ಟಿಪ್ಪುಸುಲ್ತಾನ್ ಸಂಯುಕ್ತ ರಂಗದ ಅಧ್ಯಕ್ಷ ಸರ್ದಾರ್ ಅಹ್ಮದ್ ಖುರೇಷಿ ವಕ್ಫ್ ಮಂಡಳಿ ಕಚೇರಿಯಲ್ಲಿ ನಡೆದ ಘಟನೆಗೂ ನನಗೂ ಸಂಬಂಧವಿಲ್ಲಎಂದು ಸ್ಪಷ್ಟಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com