
ಬೆಂಗಳೂರು: ಕ್ಷುಲ್ಲಕ ಕಾರಣಕ್ಕೆ ಕಿರಿಯ ವಿದ್ಯಾರ್ಥಿ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ಮಾಗಡಿ ರಸ್ತೆ ಅಂಧ್ರಹಳ್ಳಿಯಲ್ಲಿರುವ ಆಚಾರ್ಯ ಬಿ ಸ್ಕೂಲ್ ನ ಇಬ್ಬರು ವಿದ್ಯಾರ್ಥಿಗಳನ್ನು ತಾವರೆಕೆರೆ ಪೊಲೀಸರು ಬಂಧಿಸಿದ್ದಾರೆ.
ಕಾಲೇಜಿನ ಹಾಸ್ಟೇಲ್ ನಲ್ಲಿ ವಾಸವಿದ್ದ ಕೇರಳ ಮೂಲದ ಎಂಬಿಎ ವಿದ್ಯಾರ್ಥಿ ನಿಖಿಲ್ (22) ಹಾಗೂ ಬಿಬಿಎಂ ವಿದ್ಯಾರ್ಥಿ ಸಾಜೀದ್ (21) ಬಂಧಿತರು. ಹಿರಿಯ ವಿದ್ಯಾರ್ಥಿಗಳು ಜಾಲಿ ರೈಡ್‍ಗೆ ಹೋಗಲು ನನ್ನ ಬೈಕ್ ನೀಡುವಂತೆ ಒತ್ತಾಯಿಸಿ ಹೊಟೇಲ್‍ವೊಂದರ ಮುಂದೆ ಹಲ್ಲೆ ನಡೆಸಿದ್ದರು. ಸಿಗರೇಟ್ ಸೇದುವಂತೆ ಬಲವಂತ ಮಾಡಿ ರ್ಯಾಗಿಂಗ್ ಮಾಡಿದ್ದರು.
ಅದಕ್ಕೊಪ್ಪದಿದ್ದಾಗ ಮಾರಕ ಆಯುಧದಿಂದ ಹಲ್ಲೆ ನಡೆಸಿದ್ದಾರೆ ಎಂದು ನೊಂದ ಬಿಬಿಎಂ ವಿದ್ಯಾರ್ಥಿ ಘನಶ್ಯಾಮ್ ಪೊಲೀಸರಿಗೆ ಹೇಳಿದ್ದಾನೆ ಇಬ್ಬರೂ ವಿದ್ಯಾರ್ಥಿಗಳನ್ನು ಕಾಲೇಜಿನಿಂದ ಅಮಾನತು ಮಾಡಲಾಗಿದೆ ಎಂದು ಕಾಲೇಜು ಸಿಬ್ಬಂದಿ ಹೇಳಿದ್ದಾರೆ.
Advertisement