ಕಾಳಿಂಗ ಸರ್ಪ ರಕ್ಷಿಸಲು ಹೋಗಿ, ಅದಕ್ಕೇ ಬಲಿಯಾದ ಉರಗರಕ್ಷಕ

ಕಲ್ಕೋಡು ಗ್ರಾಮದ ಧರಣೇಂದ್ರ ಎಂಬುವವರ ಮನೆ ಆವರಣಕ್ಕೆ ನುಗ್ಗಿದ್ದ ಕಾಳಿಂಗ ಸರ್ಪವನ್ನು ರಕ್ಷಿಸಲು ಹೋಗಿದ್ದ ಮೂಡಿಗೆರೆ ತಾಲ್ಲೂಕಿನ ಉರಗ ರಕ್ಷಕ ೬೬ ವರ್ಷದ
ಕಾಳಿಂಗ ಕಚ್ಚುವುದಕ್ಕೂ ಮೊದಲು ಅದನ್ನು ಹಿಡಿದು ಪ್ರದರ್ಶಿಸಿದ ಪ್ರಫುಲ್
ಕಾಳಿಂಗ ಕಚ್ಚುವುದಕ್ಕೂ ಮೊದಲು ಅದನ್ನು ಹಿಡಿದು ಪ್ರದರ್ಶಿಸಿದ ಪ್ರಫುಲ್

ಚಿಕ್ಕಮಗಳೂರು: ಕಲ್ಕೋಡು ಗ್ರಾಮದ ಧರಣೇಂದ್ರ ಎಂಬುವವರ ಮನೆ ಆವರಣಕ್ಕೆ ನುಗ್ಗಿದ್ದ ಕಾಳಿಂಗ ಸರ್ಪವನ್ನು ರಕ್ಷಿಸಲು ಹೋಗಿದ್ದ ಮೂಡಿಗೆರೆ ತಾಲ್ಲೂಕಿನ ಉರಗ ರಕ್ಷಕ ೬೬ ವರ್ಷದ ಪ್ರಫುಲ್ ದಾಸ್ ಭಟ್ ಹಾವಿನ ಕಡಿತಕ್ಕೆ ಅಸುನೀಗಿದ ಘಟನೆ ನಡೆದಿದೆ.

೨೫ ವರ್ಷಗಳಿಂದ ೩೦೦ ಕ್ಕೂ ಹೆಚ್ಚು ಹಾವುಗಳನ್ನು ಹಿಡಿದಿರುವ ಪ್ರಫುಲ್ ಅವರಿಗೆ ಕರೆ ಬಂದ ತಕ್ಷಣ ಸ್ಥಳಕ್ಕೆ ಧಾವಿಸಿ ೧೨ ಅಡಿ ಉದ್ದದ ಕಾಳಿಂಗನನ್ನು ಹಿಡಿದಿದ್ದಾರೆ. ನಂತರ ಅದನ್ನು ಪ್ರದರ್ಶಿಸುವಾಗ, ನೆರೆದಿದ್ದವರಲ್ಲಿ ಒಬ್ಬರು ಫೋಟೊ ತೆಗೆಯಲು ಅನುವಾದಾಗ ಹಾವು ಗಾಬರಿಗೊಂಡು, ಹಿಡಿತದಿಂದ ಬಿಡಿಸಿಕೊಂಡು ಫ್ರಫುಲ್ ಅವರಿಗೆ ಎರಡು ಬಾರಿ ಕಚ್ಚಿದೆ.

ಪ್ರಫುಲ್ ಅವರನ್ನು ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾದರೂ ಅವರು ಮೃತಪಟ್ಟಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com