ಟೆಕ್ಕಿಗಳಿಗೆ ಕಾಡುತ್ತಿದೆ ಪಾಶ್ರ್ವವಾಯು

ಒತ್ತಡದ ಕೆಲಸಗಳಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳುವ ಐಟಿ ಉದ್ಯೋಗಿಗಳೇ ಪಾಶ್ರ್ವವಾಯುವಿಗೆ ಒಳ ಗಾಗುತ್ತಿದ್ದಾರೆ ಎಂಬ ಅಂಶವನ್ನು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಒತ್ತಡದ ಕೆಲಸಗಳಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳುವ ಐಟಿ ಉದ್ಯೋಗಿಗಳೇ ಪಾಶ್ರ್ವವಾಯುವಿಗೆ ಒಳ ಗಾಗುತ್ತಿದ್ದಾರೆ ಎಂಬ ಅಂಶವನ್ನು ಬೆಂಗಳೂರು ಪಾಶ್ರ್ವವಾಯು ಸೇವಾ ಸಂಘದ ವೈದ್ಯರು ಹೊರ ಹಾಕಿದ್ದಾರೆ.

ವಿಶ್ವ ಪಾಶ್ರ್ವವಾಯು ದಿನಾಚರಣೆ ಅಂಗವಾಗಿ ಗುರುವಾರ ನಡೆದ ನಡೆದ ಸಮಾರಂಭದಲ್ಲಿ ಮಾತನಾಡಿದ ವೈದ್ಯರು ಈ ಅಂಶವನ್ನು ಬಹಿರಂಗಪಡಿಸಿದ್ದಾರೆ. ಹೆಚ್ಚು ರಕ್ತದೊತ್ತಡ, ಸಕ್ಕರೆ ಕಾಯಿಲೆ ಹಾಗೂ ವ್ಯಾಯಾಮದ ಕೊರತೆಯಿಂದ ಜನತೆ ಪಾಶ್ರ್ವವಾಯು ರೋಗಕ್ಕೆ ತುತ್ತಾಗುತ್ತಿದ್ದಾರೆ. ಅದರಲ್ಲೂ 45 ವರ್ಷದೊಳಗಿನವರೇ ಹೆಚ್ಚಾಗಿದ್ದಾರೆ.

ಐಟಿ ಉದ್ಯೋಗಿಗಳಲ್ಲದೆ, ಎಚ್‍ಆರ್, ಫೈನಾನ್ಸ್,ಬಸ್ ಚಾಲಕರು ಮತ್ತು ನಿರ್ವಾಹಕರು ನಂತರದ ಸ್ಥಾನಗಳಲ್ಲಿದ್ದಾರೆ ಎಂದು ಅವರು ತಿಳಿಸಿದರು. ಪೊ್ರ.ಜಿ.ಟಿ. ಸುಭಾಷ್ ಮಾತನಾಡಿ, ಕರ್ನಾಟಕ ದಲ್ಲಿ ಕಳೆದ 2 ವರ್ಷದಲ್ಲಿ 200 ಪಾಶ್ರ್ವವಾಯು ಪ್ರಕರಣಗಳು ವರದಿಯಾಗಿವೆ. 45ಕ್ಕೆ ಚಿಕಿತ್ಸೆ ನೀಡಲಾಗಿದೆ.

ದಿ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ಸಂಶೋಧನೆಯ ಪ್ರಕಾರ 2004ರಲ್ಲಿ ಭಾರತದಲ್ಲಿ 9.3 ಲಕ್ಷ ಪ್ರಕರಣಗಳಿದ್ದವು. 6.4 ಲಕ್ಷ ಮರಣಗಳು ಪಾಶ್ರ್ವವಾಯುವಿನಿಂದ ಸಂಭವಿಸಿವೆ. 2015ರ ಅಂತ್ಯದ ವೇಳೆಗೆ ವಾರ್ಷಿಕ 1.6 ದಶಲಕ್ಷ ಪಾಶ್ರ್ವವಾಯು ಪ್ರಕರಣಗಳು ಪತ್ತೆಯಾಗಿವೆ.

ವಿಶ್ವ ಆರೋಗ್ಯ ಸಂಸ್ಥೆಯ ವರದಿ ಪ್ರಕಾರ ವಿಶ್ವದಲ್ಲಿ ಶೇ. 80 ಪಾಶ್ರ್ವವಾಯು ಪ್ರಕರಣಗಳು ಅಭಿವೃದ್ಧಿ ದುತ್ತಿರುವ ದೇಶಗಳಾದ ಭಾರತ ಮತ್ತು ಚೀನಾದಲ್ಲಿ ಸಂಭವಿಸುತ್ತಿವೆ ಎಂದರು.
ಅ. 17 ರಂದು ವಾಕಥಾನ್: ಬೆಂಗಳೂರು ಪಾಶ್ರ್ವವಾಯು ಸೇವಾ ಸಂಘದಿಂದ ವಿಶ್ವ ಪಾಶ್ರ್ವವಾಯು ದಿನಾಚರಣೆ ಅಂಗವಾಗಿ ಅಕ್ಟೋಬರ್ 17 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‍ನಿಂದ ಕಬ್ಬನ್ ಪಾರ್ಕ್‍ವರೆಗೆ ವಾಕಥಾನ್ ಹಮ್ಮಿಕೊಳ್ಳಲಾಗಿದೆ. ಅಕ್ಟೋಬರ್ 29 ರಂದು ಬೆಂಗಳೂರಿನಲ್ಲಿ ಅಂತಾರಾ ಷ್ಟ್ರೀಯ ಮಟ್ಟದ ಪಾಶ್ರ್ವವಾಯು ಅರಿವು ಸಮ್ಮೇಳನ ನಡೆಯಲಿದೆ.

ಪಾಶ್ರ್ವವಾಯುವಿಗೆ ಪ್ರಮುಖ ಕಾರಣ
ಒಂದೇ ಕಡೆ ಕುಳಿತು ಕೆಲಸ ಮಾಡುವ ಮತ್ತು ಕಣ್ಣುಗಳ ಮೇಲೆ ಒತ್ತಡ ಹೆಚ್ಚಾದಾಗ
ಧೂಮಪಾನ, ಸಕ್ಕರೆ ಕಾಯಿಲೆ, ಅಧಿಕ ರಕ್ತದೊತ್ತಡದಿಂದ
ಪಾಶ್ರ್ವವಾಯುವಿನಿಂದ ಮುಖ, ಕೈ ಮತ್ತು ನಾಲಗೆ ಮೇಲೆ ಸ್ವಾಧೀನ ತಪ್ಪುತ್ತದೆ
ಬದಲಾದ ಜೀವನ ಶೈಲಿ ಮತ್ತು ವ್ಯಾಯಾಮದ ಕೊರತೆಯೇ ಇದಕ್ಕೆ ಕಾರಣ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com