ಹಿಂಬದಿ ಸವಾರರಿಗೂ ಬರಲಿದೆ ಹೆಲ್ಮೆಟ್?

ದ್ವಿಚಕ್ರ ವಾಹನದ ಹಿಂಬದಿ ಸವಾರರೂ ಹೆಲ್ಮೆಟ್ ಧರಿಸಿ ಸಂಚರಿಸಬೇಕಾದ ದಿನ ದೂರವಿಲ್ಲ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ದ್ವಿಚಕ್ರ ವಾಹನದ ಹಿಂಬದಿ ಸವಾರರೂ ಹೆಲ್ಮೆಟ್ ಧರಿಸಿ ಸಂಚರಿಸಬೇಕಾದ ದಿನ ದೂರವಿಲ್ಲ. ಅರ್ಥಾತ್ ಮುಂದಿನ ದಿನಗಳಲ್ಲಿ ರಾಜ್ಯ ಸರ್ಕಾರ ದ್ವಿ ಚಕ್ರ ವಾಹನ ಹಿಂಬದಿ ಸವಾರರಿಗೂ  ಹೆಲ್ಮೆಟ್ ಕಡ್ಡಾಯಗೊಳಿಸಿ ಆದೇಶ ಹೊರಡಿಸುವ ಎಲ್ಲಾ ಲಕ್ಷಣಗಳು ಇವೆ. ಈ ಆದೇಶ ರಾಜ್ಯಾದ್ಯಂತ ಅಥವಾ ಮೈಸೂರು, ಮಂಗಳೂರು, ಹುಬ್ಬಳ್ಳಿ--ಧಾರವಾಡ, ಬೆಂಗಳೂರಿನಂತಹ ನಗರಗಳಲ್ಲಿ ಜಾರಿಗೆ ಬರುವ ಸಾಧ್ಯತೆಯಿದೆ.

ಸುಪ್ರಿಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ  ಹಾಗೂ ರಸ್ತೆ ಸುರಕ್ಷಾ ಸಮಿತಿ ನಿಯಮದಂತೆ ಹಿಂಬದಿ ಸವಾರರು ಹೆಲ್ಮೆಟ್ ಧರಿಸುವುದು ಕಡ್ಡಾಯ ಮಾಡುವ ಬಗ್ಗೆ ಕರಡು ಪ್ರತಿ ಆದೇಶ ಹೊರಡಿಸಿದೆ. ಹಾಗಾಗಿ ದ್ವಿ ಚಕ್ರ ವಾಹನಗ ಹಿಂಬದಿಯಲ್ಲಿ  ಆರಾಮವಾಗಿ ಸಂಚರಿಸಬಹುದು. ಹೆಲ್ಮೆಟ್ ಕಿರಿಕಿರಿಯಿಲ್ಲ ಎಂದು ಹಿರಿಹಿರಿ ಹಿಗ್ಗುವವರಿಗೆ ಇದು ಕಹಿಯೂ ಆಗಬಹುದು.

ಸೆ.18ರಂದು ಕರಡು ಅಧಿಸೂಚನೆ ಹೊರಬಿದ್ದಿದ್ದು , ಈ ಬಗ್ಗೆ ಯಾವುದೇ ತಕರಾರು ಇದ್ದಲ್ಲಿ ಅದನ್ನು ಸರ್ಕಾರಕ್ಕೆ ತಿಳಿಸಲು ಸಾರ್ವಜನಿಕರಿಗೆ ಅ.18 ಕೊನೆ ದಿನ. ಜನರಿಂದ ಈ ಬಗ್ಗೆ ತಕರಾರು ಬಂದ ನಂತರ ಎಷ್ಟು ಆಕ್ಷೇಪಣೆಗಳು, ಎಷ್ಟು ಜನ ಸ್ವಾಗತಿಸಿದ್ದಾರೆ ಎಂಬುದನ್ನು ಪರಿಶೀಲಿಸಿ ನಂತರ ಮುಂದಿನ ನಿರ್ಧಾರ ಕೈಗೊಳ್ಳಲಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಕರ್ನಾಟಕ ರಾಜ್ಯ ಪ್ರಾದೇಶಿಕ ಸಾರಿಗೆ ಇಲಾಖೆ ಆಯುಕ್ತ ರಾಮೇಗೌಡ ಅವರು, ಸುಪ್ರೀಂ ಕೋರ್ಟ್ ಆದೇಶದಂತೆ ರಾಜ್ಯ ಸರ್ಕಾರ ಈ ಸಂಬಂಧ ಕರಡು ಆದೇಶ ಹೊರಡಿಸಿದೆ. ನಂತರ ಸರ್ಕಾರವೇ ಈ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಿದೆ. ಹಾಗಾಗಿ ಇದು ಜಾರಿಗೆ ಬಂದರೆ ನವೆಂಬರ್‍ನಿಂದ ಕಡ್ಡಾಯಗೊಳಿಸುವ ಸಾಧ್ಯತೆ ಇದೆ. ಸಾಕಷ್ಟು ಅಪಘಾತ ಪ್ರಕರಣಗಳಲ್ಲಿ ಹಿಂಬದಿ ಸವಾರರು ಸಹ ತಲೆಗೆ ಪೆಟ್ಟು ಬಿದ್ದು ಮೃತಪಡುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಈ ಹಿನ್ನೆಯಲ್ಲಿ ಹಿಂಬದಿ ಸವಾರರಿಗೆ ಹೆಲ್ಮೆಟ್ ಕಡ್ಡಾಯ ಮಾಡುವ ಬಗ್ಗೆ ಸಂಚಾರ ಪೊಲೀಸರು ಸಹಮತ ವ್ಯಕ್ತಪಡಿಸಿದ್ದಾರೆ. ಆಕ್ಷೇಪಣೆ ಸಲ್ಲಿಸಲು ಇಚ್ಚಿಸುವವರು ಸಹಾಯಕ ಮುಖ್ಯ ಕಾರ್ಯದರ್ಶಿ, ಸಾರಿಗೆ ಇಲಾಖೆ, ಎಂ.ಎಸ್ .ಬಿಲ್ಡಿಂಗ್, ಬೆಂಗಳೂರು, ಇಲ್ಲಿಗೆ ಪತ್ರದ ಮುಖಾಂತರ ಸಲ್ಲಿಸಬಹುದು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com