ಅಂತರ್ಜಾಲ ನೀತಿ ರಚನೆಯಲ್ಲಿ ಸರ್ಕಾರದ ಪಾತ್ರ ಮಹತ್ವವಾದದ್ದು: ಉಪ ರಾಷ್ಟ್ರೀಯ ಭದ್ರತಾ ಸಲಹೆಗಾರ

ಅಂತರ್ಜಾಲ ನೀತಿ ರಚನೆಯಲ್ಲಿ ಸರ್ಕಾರದ ಪಾತ್ರ ಮಹತ್ವ ಪಡೆದಿದೆ ಎಂದು ರಾಷ್ಟ್ರೀಯ ಭದ್ರತಾ ಉಪಸಲಹೆಗಾರ ಡಾ.ಅರವಿಂದ್ ಗುಪ್ತಾ ಅಭಿಪ್ರಾಯಪಟ್ಟಿದ್ದಾರೆ.
ಅಂತರ್ಜಾಲ ಬಳಕೆ(ಸಾಂದರ್ಭಿಕ ಚಿತ್ರ)
ಅಂತರ್ಜಾಲ ಬಳಕೆ(ಸಾಂದರ್ಭಿಕ ಚಿತ್ರ)

ಬೆಂಗಳೂರು: ಸೈಬರ್ ಗೆ ಸಂಬಂಧಿಸಿದಂತೆ ನೀತಿ ರಚನೆಯಾಗಬೇಕೆಂಬ ಒತ್ತಾಯ ಕೇಳಿಬರುತ್ತಿದ್ದು,  ಅಂತರ್ಜಾಲ ನೀತಿ ರಚನೆಯಲ್ಲಿ ಸರ್ಕಾರದ ಪಾತ್ರ ಮಹತ್ವ ಪಡೆದಿದೆ ಎಂದು ರಾಷ್ಟ್ರೀಯ ಭದ್ರತಾ ಉಪಸಲಹೆಗಾರ ಡಾ.ಅರವಿಂದ್ ಗುಪ್ತಾ ಅಭಿಪ್ರಾಯಪಟ್ಟಿದ್ದಾರೆ.
ಬೆಂಗಳೂರಿನಲ್ಲಿ ನಡೆದ ಸೈಬರ್ 360 ಸಭೆಯಲ್ಲಿ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ಇಂಟರ್ನೆಟ್ ಪ್ರಮುಖ ಸ್ಪರ್ಧಿಗಳು ಭಾರತದವರಾಗಲಿದ್ದಾರೆ. ಆದ್ದರಿಂದ ಸೂಕ್ತ ನೆಟ್ವರ್ಕ್ ಮತ್ತು ನೀತಿ ರಚನೆ ಪ್ರಾಮುಖ್ಯತೆ ಪಡೆದಿದೆ. ಸರ್ಕಾರ ಈ ನಿಟ್ಟಿನಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸಬೇಕಿದೆ ಎಂದು ಹೇಳಿದ್ದಾರೆ.
ಸೈಬರ್ ದಾಳಿ ಮತ್ತು ಸೈಬರ್ ಯುದ್ಧ ಭಯ ಕಾಡುತ್ತಿರುವುದರಿಂದ ಅಂತರ್ಜಾಲ ನೀತಿ ರಚನೆ, ಸಮರ್ಪಕ ನೆಟ್ವರ್ಕ್ ಸ್ಥಾಪಿಸುವುದು ಅಗತ್ಯವಾಗಿದೆ. ಜಾಗತಿಕ ಮಟ್ಟದ ಭದ್ರತೆ ವಿಷಯ ಚರ್ಚೆಯಾದಾಗಳೆಲ್ಲಾ ಸೈಬರ್ ಭದ್ರತೆ ವಿಷಯ ಮಹತ್ವ ಪಡೆದುಕೊಳ್ಳುತ್ತದೆ. ಸೈಬರ್ ಭದ್ರತೆ ಬಗ್ಗೆ ಜಗತ್ತಿನಲ್ಲಿರುವ ಎಲ್ಲಾ ರಾಷ್ಟ್ರಗಳು ಚರ್ಚೆ ನಡೆಸುತ್ತಿವೆ. ವಿಶ್ವ ಸಂಸ್ಥೆ ಮಟ್ಟದಲ್ಲಿ ಕೂಡ ಈ ಬಗ್ಗೆ ಗಂಭೀರ ಚರ್ಚೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಸೈಬರ್ ನೀತಿ ರಚನೆಗೆ ಸಂಬಂಧಿಸಿದಂತೆ ಭಾರತ ಮಹತ್ವದ ಪಾತ್ರ ವಹಿಸಬೇಕಿದೆ ಎಂದು ಅರವಿಂದ್ ಗುಪ್ತಾ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com