ಇ-ತ್ಯಾಜ್ಯ ವಿಲೇವಾರಿಗೆ ನಮ್ಮ ಮೆಟ್ರೋ ನೆರವು

ನಮ್ಮ ಮೆಟ್ರೋ ತನ್ನ ಪ್ರಯಾಣಿಕರಿಗೆ ಇ-ತ್ಯಾಜ್ಯ ಮರುಬಳಕೆ ಪರಿಚಯಿಸುತ್ತಿದೆ. ಅಕ್ಟೋಬರ್ 2ರಿಂದ ನಗರದ ನಾಲ್ಕು ಮೆಟ್ರೋ ರೈಲು ನಿಲ್ದಾಣಗಳಲ್ಲಿ ಈ ಸೇವೆ ಆರಂಭವಾಗಲಿದೆ...
(ಸಾಂದರ್ಭಿಕ  ಚಿತ್ರ)
(ಸಾಂದರ್ಭಿಕ ಚಿತ್ರ)

ಬೆಂಗಳೂರು: ನಮ್ಮ ಮೆಟ್ರೋ ತನ್ನ ಪ್ರಯಾಣಿಕರಿಗೆ ಇ-ತ್ಯಾಜ್ಯ ಮರುಬಳಕೆ ಪರಿಚಯಿಸುತ್ತಿದೆ. ಅಕ್ಟೋಬರ್ 2ರಿಂದ ನಗರದ ನಾಲ್ಕು ಮೆಟ್ರೋ ರೈಲು ನಿಲ್ದಾಣಗಳಲ್ಲಿ ಈ ಸೇವೆ ಆರಂಭವಾಗಲಿದೆ.

ನಾಗರಿಕರು ಇ-ತ್ಯಾಜ್ಯವನ್ನು ಹೊರಹಾಕಲು ನಮ್ಮ ಮೆಟ್ರೋ ಸಹಾಯ ಮಾಡಲಿ ದ್ದು, ಬಿನ್‍ಬ್ಯಾಗ್ ನೀಡಲಿದೆ. ಮೆಟ್ರೋ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಇ-ತ್ಯಾಜ್ಯ ವಿಲೇವಾರಿಗೆ ಸಹಾಯವಾಗುವ ನಿಟ್ಟಿನಲ್ಲಿ ಇದನ್ನು ಜಾರಿಗೆ ತರಲಾಗುತ್ತಿದೆ. ಎಂ.ಜಿ.ರಸ್ತೆ, ಟ್ರಿನಿಟಿ ವೃತ್ತ, ಇಂದಿರಾನಗರ, ಬೈಯಪ್ಪನಹಳ್ಳಿ ನಿಲ್ದಾಣಗಳಲ್ಲಿ ಇ-ತ್ಯಾಜ್ಯ ಮರುಬಳಕೆ ಪರಿಚಯಿಸಲಾಗುತ್ತಿದೆ. ಸೋಮವಾರ ದಿಂದ ಶುಕ್ರವಾರದವರೆಗೆ ಬೆಳಗ್ಗೆ 8ರಿಂದ 10 ಗಂಟೆ ನಡುವೆ ಸಂಗ್ರಹ ಮಾಡಲಾಗುವುದು. ಅದಕ್ಕಾಗಿ ಸ್ವಯಂ ಸೇವಕರು ಕೆಲಸ ನಿರ್ವಹಿಸಲಿದ್ದಾರೆ. ಸಂಗ್ರಹವಾಗುವ ತ್ಯಾಜ್ಯವನ್ನು ಬೇರೆಡೆಗೆ ಸಾಗಿಸಲಾಗುವುದು. ಇದು ಅಕ್ಟೋಬರ್ ತಿಂಗಳು ಪೂರ್ತಿ ನಡೆಯಲಿದೆ.

ಇ-ತ್ಯಾಜ್ಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಮೆಟ್ರೋ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್ ಸಿಂಗ್ ಖರೋಲಾ, ಬಿನ್ ಬ್ಯಾಗ್ ಸಂಸ್ಥಾಪಕ ಅಚಿತ್ರಾ ಬರ್ಗೋಹೈನ್ ಭಾಗವಹಿಸಲಿದ್ದಾರೆ ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ. ಮಾಹಿತಿಗಾಗಿ ದೂ. ಸಂ.96639 43939 ಸಂಪರ್ಕಿಸಬಹುದು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com