ಫೇಸ್ ಬುಕ್ ಫ್ರೆಂಡ್ ನಿಂದ ಬೆಂಗಳೂರು ವೈದ್ಯೆಗೆ ರು. 6.ಲಕ್ಷ ಪಂಗನಾಮ

ಸರ್ಕಾರಿ ಆಸ್ಪತ್ರೆ ವೈದ್ಯೆಯೊಬ್ಬರು ಫೇಸ್ ಬುಕ್ ನಲ್ಲಿ ಪರಿಚತನಾದ ವ್ಯಕ್ತಿಯ ಮೋಸಕ್ಕೆ ಸಿಲುಕಿ ಬರೋಬ್ಬರಿ ರು. 5.60 ಲಕ್ಷ ಹಣ ಕಳೆದುಕೊಂಡಿರುವ...
ಫೇಸ್ ಬುಕ್
ಫೇಸ್ ಬುಕ್

ಬೆಂಗಳೂರು: ಸರ್ಕಾರಿ ಆಸ್ಪತ್ರೆ ವೈದ್ಯೆಯೊಬ್ಬರು ಫೇಸ್ ಬುಕ್ ನಲ್ಲಿ ಪರಿಚತನಾದ ವ್ಯಕ್ತಿಯ ಮೋಸಕ್ಕೆ ಸಿಲುಕಿ ಬರೋಬ್ಬರಿ ರು. 5.60 ಲಕ್ಷ ಹಣ ಕಳೆದುಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.

ಬೆಂಗಳೂರು ಮೂಲದ ವೈದ್ಯೆ ಕೋಲಾರ ಜಿಲ್ಲೆ ಮಾಲೂರು ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. 2015 ರ ಫೆ 2 ರಂದು ವೈದ್ಯೆಗೆ ಪಿಲಿಫ್ ಕ್ಲೈನ್ ಎಂಬ ವ್ಯಕ್ತಿಯ ಪರಿಚಯವಾಗಿದೆ.ತಾನು ಯುಕೆ ಪ್ರಜೆ ಎಂದು ಹೇಳಿ ಕೊಂಡಿದ್ದಾನೆ. ಇಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವುದಾಗಿ ಹೇಳಿ ನಂಬಿಸಿದ್ದಾನೆ.

ಹೀಗೆ ಫೇಸ್ ಬುಕ್ ನಲ್ಲಿ ಆರಂಭವಾದ ಇವರ ಸ್ನೇಹ ಒಂದು ತಿಂಗಳೊಳಗೆ ವಿಡಿಯೋ ಕಾನ್ಫರೆನ್ಸ್ ನಲ್ಲಿ ಮಾತನಾಡುವಷ್ಟು ಗಾಢವಾಯಿತು. ಬಳಿಕ ನಿತ್ಯ ಫೇಸ್ ಬುಕ್ ನಲ್ಲಿ ಚಾಟಿಂಗ್, ವಿಡಿಯೋ ಕಾನ್ಫ್ ರೇನ್ಸ್ ನಲ್ಲಿ  ಗಂಟೆಗಟ್ಟಲೇ ಹರಟುತ್ತಿದ್ದರು.

ಒಂದು ದಿನ ತನ ಗೆ ಹಣದ ಸಮಸ್ಯೆ ಇರುವುದಾಗಿ ಹೇಳಿಕೊಂಡ ಫಿಲಿಫ್ ನಿನ್ನ ಬಳಿ ಹಣವಿದ್ದರೇ ಸಾಲ ನೀಡು ಎಂದು ವೈದ್ಯೆಗೆ ಕೇಳಿದ್ದಾನೆ. ಗೆಳೆಯನ ಸಮಸ್ಯೆ ಆಲಿಸಿದ ವೈದ್ಯೆಗೆ ಸುಮ್ಮನಿರಲು ಸಾದ್ಯವಾಗಲಿಲ್ಲ. ತಮ್ಮ ಬಳಿ ಇದ್ದ ಹಣದ ಜೊತೆಗೆ 4.70 ಲಕ್ಷ ಹೊಂದಿಸಿ, ಏ.6 ರಂದು ಬೆಂಗಳೂರಿನ ಸ್ಟೇಟ್ ಬ್ಯಾಂಕ್ ಆಫ್  ಮೈಸೂರು ಮುಖ್ಯ ಶಾಖೆಗೆ ತೆರಳಿ ಫಿಲಿಫ್ ನೀಡಿದ್ದ ಇಂಗ್ಲೆಂಡ್ ನ ಲಾಯ್ಡ್ ಬ್ಯಾಂಕ್ ಖಾತೆಗೆ ವರ್ಗಾಯಿಸಿದ್ದರು. ಗೆಳತಿಯ ಈ ಸಹಾಯಕ್ಕೆ ಫಿಲಿಫ್ ಥ್ಯಾಂಕ್ಸ್ ಹೇಳಿದ್ದಯ ಇವರಿಬ್ಬರ ಗೆಳೆತನ ಮತ್ತಷ್ಟು ಗಟ್ಟಿಯಾಯಿತು.

ಏಪ್ರಿಲ್ ನಿಂದ ಎರಡು ತಿಂಗಳ ಕಾಲ ಫಿಲಿಫ್ ಮತ್ತು ವೈದ್ಯೆ ಫೇಸ್ ಬುಕ್ ನಲ್ಲಿ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಮತ್ತೆ ತನ್ನ ಸಮಸ್ಯೆ ಹೇಳಿಕೊಂಡ ಫಿಲಿಫ್ ಹಣ ನೀಡವಂತೆ ಕೇಳಿದ್ದಾನೆ. ಮತ್ತೆ ವೈದ್ಯೆಯ ಮನ ಕರಗಿ 90 ಸಾವಿರ ರೂ ಹಣವನ್ನು ಉತ್ತರ ಪ್ರದೇಶದಲ್ಲಿರುವ ತನ್ನ ಸ್ನೇಹಿತನ ಖಾತೆಗೆ ಹಾಕುವಂತೆ ಹೇಳಿದ್ದಾನೆ. ಅದರಂತೆ ವೈದ್ಯೆ  ಉತ್ತರ ಪ್ರದೇಶದ ಗೋಮತಿ ನಗರದ ಎಸ್ ಬಿಐ ಖಾತೆಗೆ 90 ಸಾವಿರ ಹಣ ವರ್ಗಾಯಿಸಿದ್ದಾರೆ.  ಬಳಿಕ ಹಣ ಹಾಕಿದ ವಿಚಾರವನ್ನು ಹೇಳಲು ಹೋದಾಗ ಫಿಲಿಫ್ ಸಂಪರ್ಕಕ್ಕೆ ಸಿಗಲಿಲ್ಲ. ಆ ದಿನ ಫಿಲಿಫ್ ಫೇಸ್ ಬುಕ್ ಕೂಡ ಲಾಕ್ ಆಗಿದೆ. ನಂತರ ವಂಚನೆಗೊಳಗಾದ ವಿಷಯ ಮನವರಿಕೆಯಾಗಿ ನಗರದ ಸೈಬರ್ ಕ್ರೈಂ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com