ಒಂದು ಹಂದಿ ಹಿಡಿಯಲು ಬಿಬಿಎಂಪಿಗೆ 550 ಖರ್ಚು!

ಬಿಬಿಎಂಪಿಗೆ ನಾಯಿ ಹಿಡಿಯುವುದು, ಕಛೇರಿಯಲ್ಲಿರುವ ಇಲಿ ಹಿಡಿಯುವುದರ ತಲೆನೋವಿನ ಜೊತೆಗೆ ಇತ್ತೀಚಿನ ದಿನಗಳಲ್ಲಿ ಹಂದಿ ಹಿಡಿಯುವುದು ಸಹ ತಲೆನೋವಿನ ವಿಷಯವಾಗಿ ಪರಿಣಮಿಸಿದೆ.
ಒಂದು ಹಂದಿ ಹಿಡಿಯಲು ಬಿಬಿಎಂಪಿಗೆ 550 ಖರ್ಚು! (ಚಿತ್ರ ಕೃಪೆ: ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್)
ಒಂದು ಹಂದಿ ಹಿಡಿಯಲು ಬಿಬಿಎಂಪಿಗೆ 550 ಖರ್ಚು! (ಚಿತ್ರ ಕೃಪೆ: ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್)

ಬೆಂಗಳೂರು: ಬಿಬಿಎಂಪಿಗೆ ನಾಯಿ ಹಿಡಿಯುವುದು, ಕಛೇರಿಯಲ್ಲಿರುವ ಇಲಿ ಹಿಡಿಯುವುದರ ತಲೆನೋವಿನ ಜೊತೆಗೆ ಇತ್ತೀಚಿನ ದಿನಗಳಲ್ಲಿ ಹಂದಿ ಹಿಡಿಯುವುದು ಸಹ ತಲೆನೋವಿನ ವಿಷಯವಾಗಿ ಪರಿಣಮಿಸಿದೆ.
ಒಂದು ಹಂದಿ ಹಿಡಿಯುವುದಕ್ಕೆ ಪಾಲಿಕೆಗೆ 550 ರೂಪಾಯಿ ಖರ್ಚಾಗುತ್ತಿದೆ. ಅಷ್ಟೇ ಅಲ್ಲದೇ ಹಂದಿ ಹಿಡಿಯುವುದಕ್ಕೂ ಪೊಲೀಸ್ ಭದ್ರತೆ ಬೇಕಾಗಿದೆ ಎನ್ನುತ್ತಾರೆ ಪಾಲಿಕೆ ಅಧಿಕಾರಿಗಳು. ಕಳೆದ ಏಪ್ರಿಲ್ ನಲ್ಲಿ ಹಂದಿ ಹಿಡಿಯುವುದಕ್ಕೆ ಬಿಬಿಎಂಪಿ ಖಾಸಗಿ ಸಂಸ್ಥೆಯೊಂದನ್ನು ನೇಮಿಸಿತ್ತು. ಪ್ರತಿಯೊಂದು ಹಂದಿ ವರ್ಷಕ್ಕೆ 40 -50 ಮರಿಗಳಿಗೆ ಜನ್ಮ ನೀಡುತ್ತದೆ, ಇದರಿಂದ ಹಂದಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು ಹಂದಿ ಹಿಡಿಯುವುದು ಬಿಬಿಎಂಪಿಗೆ ತಲೆನೋವಿನ ವಿಷಯವಾಗಿ ಪರಿಣಮಿಸಿದೆ.
2015 ಏಪ್ರಿಲ್- 2016 ರ ಜನವರಿಯ ಅಂಕಿ ಅಂಶಗಳ ಪ್ರಕಾರ 427 ಹಂದಿಗಳನ್ನು ಹಿಡಿಯಲಿ ಖರ್ಚಾಗಿರುವುದು ಬರೋಬ್ಬರಿ 2 .34 ಲಕ್ಷ ರೂಪಾಯಿ ಎಂದು ಬಿಬಿಎಂಪಿ ಜಂಟಿ ನಿರ್ದೇಶಕ( ಪಶುಸಂಗೋಪನೆ) ಹೇಳಿದ್ದಾರೆ. ರಾಜರಾಜೇಶ್ವರಿ ನಗರ ಹಾಗೂ ಬನಶಂಕರಿ ಬಡಾವಣೆಗಳಲ್ಲಿ ಹಂದಿಗಳು ಹೆಚ್ಚಾಗಿದ್ದು, ಹಿಡಿಯುವವರು ಸಹ ಸಿಗುತ್ತಿಲ್ಲ.  2011 ರಲ್ಲಿ ಹಂದಿ ಹಿಡಿಯುವುದಕ್ಕಾಗಿ ಟೆಂಡರ್ ಕರೆಯಲಾಗಿತ್ತು. ಆದರೆ ಎರಡು ಬಾರಿ ಟೆಂಡರ್ ಕರೆದಾಗಲೂ ಯಾರೂ ಬಿಡ್ ಮಾಡಲಿಲ್ಲ. 2014 ರಲ್ಲಿ ಇಬ್ಬರು ಬಿಡ್ಡರ್‌ ಗಳು ಹಂದಿ ಹಿಡಿಯುವ ಗುತ್ತಿಗೆ ಪಡೆದರು. ಬಿಬಿಎಂಪಿಗೆ ಹೊಸದಾಗಿ ಸೇರ್ಪಡೆಗೊಂಡಿರುವ ಪ್ರದೇಶಗಳಲ್ಲಿ ಹಂದಿ ಹಿಡಿಯುವವರು ಹಲವರಿದ್ದಾರೆ ಆದರೆ ಸಾಂಪ್ರದಾಯಿಕ ಪದ್ಧತಿಯಲ್ಲಿ ಪಾಲಿಸುತ್ತಿದ್ದು ಅವರ ಬಳಿ ಅತ್ಯಾಧುನಿಕ ಉಪಕರಣಗಳಿಲ್ಲ, ಆದ್ದರಿಂದ ಬಿಡ್ಡರ್ ಗಳು ಸಿಗುತ್ತಿಲ್ಲ ಎಂದು ಬಿಬಿಎಂಪಿ ಅಧಿಕಾರಿಗಳು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಕಸ ತುಂಬಿರುವ ಪ್ರದೇಶಗಳೂ ಸಹ ಹಂದಿ ಸಾಕಣೆಗೆ ಪೂರಕವಾಗಿವೆ. ಜೀವಂತ ಹಂದಿಯನ್ನು ಪ್ರತಿ ಕೆಜಿಗೆ 48 ರೂಪಾಯಿಗೆ ಮಾರಾಟ ಮಾಡಲಾಗುತ್ತದೆ.  ಹಂದಿ ಸಾಕಣೆಯಲ್ಲಿ ತೊಡಗಿರುವವರು ಪರೋಕ್ಷವಾಗಿ ರಾಜಕಾರಣಿಗಳ ಸಂಪರ್ಕ ಹೊಂದಿರುತ್ತಾರೆ. ಒಂದು ವೇಳೆ ಹಂದಿಗಳನ್ನು ಹಿಡಿದರೂ, ಅವುಗಳನ್ನು ಬಿಡುವಂತೆ  ಕೌನ್ಸಿಲ್ಲರ್ ಗಳು , ಎಂಎಲ್ಎ ಗಳು ಒತ್ತಡ ಹಾಕುತ್ತಾರೆ. ಕೆಲವೊಮ್ಮೆ ಹಿಡಿದಿರುವ ಹಂದಿಗಳನ್ನು ಬಿಡುಗಡೆ ಮಾಡಲು ವಿಧಾನಸೌಧದಿಂದಲೂ ಕರೆ ಬರುತ್ತವೆ, ರೌಡಿಗಳೂ ಈ ಉದ್ಯಮದ ಹಿಂದಿದ್ದಾರೆ ಅದ್ದರಿಂದ ಹಂದಿ ಹಿಡಿಯಬೇಕಾದರೆ ಪೊಲೀಸ್ ಭದ್ರತೆಯು ಅಗತ್ಯ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com