ಸಿಇಟಿ ಆನ್ ಲೈನ್ ಅರ್ಜಿ ಸಲ್ಲಿಕೆ ಅವಧಿ ಫೆ.25ರ ವರೆಗೆ ವಿಸ್ತರಣೆ

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು "ಸಿಇಟಿ-2016' ಪ್ರವೇಶ ಪರೀಕ್ಷೆಗೆ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸುವ ಅಂತಿಮ ದಿನಾಂಕ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on
ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು "ಸಿಇಟಿ-2016' ಪ್ರವೇಶ ಪರೀಕ್ಷೆಗೆ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸುವ ಅಂತಿಮ ದಿನಾಂಕವನ್ನು ಫೆ.25ರ ವರೆಗೆ ವಿಸ್ತರಣೆ ಮಾಡಿ ಆದೇಶ ಮಾಡಿದೆ. 
ಸಿಇಟಿ ಆನ್ ಅರ್ಜಿ ಸಲ್ಲಿಕೆಗೆ ಫೆಬ್ರವರಿ 13 ಕಡೇ ದಿನವಾಗಿತ್ತು. ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಫೆ.21ರವರೆಗೆ ವಿಸ್ತರಿಸಿತ್ತು. ಈಗ ಮತ್ತೆ ಸಿಇಟಿ ಆನ್ ಲೈನ್ ಅರ್ಜಿ ಸಲ್ಲಿಸುವ ಅವಧಿಯನ್ನು ವಿಸ್ತರಿಸಿದ್ದು ಫೆ.25ರ ವರೆಗೆ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದ್ದು, ಬ್ಯಾಂಕ್ ಗಳಲ್ಲಿ ಶುಲ್ಕ ಪಾವತಿಸಲು ಫೆಬ್ರವರಿ 26 ಕಡೇ ದಿನವಾಗಿದೆ.
ಪ್ರಾಧಿಕಾರವು ಈಗಾಗಲೇ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಿ ಶುಲ್ಕ ಪಾವತಿಸಿರುವ ವಿದ್ಯಾರ್ಥಿಗಳಿಗೆ ಫೆಬ್ರವರಿ 27ರಿಂದ 29ರವರೆಗೆ ತಪ್ಪುಗಳ ತಿದ್ದುಪಡಿ, ಭರ್ತಿ ಮಾಡದೆ ಬಿಟ್ಟಿರುವ ವಿವರನ್ನು ಪುನಃ ಸೇರಿಸುವ ಅವಕಾಶವನ್ನು ಕಲ್ಪಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com