
ಬೆಂಗಳೂರು: ಅಕ್ರಮ ಡಿ-ನೋಟಿಫಿಕೇಶನ್ ಪ್ರಕರಣಗಳ ಸಂಬಂಧ ಮಹಾ ಲೇಖಪಾಲರ (ಸಿಎಜಿ) ವರದಿ ಆಧರಿಸಿ ಲೋಕಾಯುಕ್ತ ಪೊಲೀಸರು ತಮ್ಮ ವಿರುದ್ಧ ದಾಖಲಿಸಿದ್ದ
ಎಫ್ಐಆರ್‍ಗಳನ್ನು ರದ್ದುಪಡಿಸುವಂತೆ ಕೋರಿ ಸಂಸದ ಬಿ.ಎಸ್.ಯಡಿಯೂರಪ್ಪ ಸಲ್ಲಿಸಿದ್ದ 15 ಪ್ರತ್ಯೇಕ ತಕರಾರು ಅರ್ಜಿಗಳ ತೀರ್ಪನ್ನು ಹೈಕೋರ್ಟ್ ಮಂಗಳವಾರ ಪ್ರಕಟಿಸಲಿದೆ.
ಬಿಎಸ್‍ವೈ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆಯನ್ನು ಕಳೆದ ಡಿ.12ರಂದು ಪೂರ್ಣಗೊಳಿಸಿದ್ದ ನ್ಯಾ. ರತ್ನಕಲಾ ಅವರ ಏಕಸದಸ್ಯ ಪೀಠ, ಮಂಗಳವಾರ ಮಧ್ಯಾಹ್ನ 2.30ಕ್ಕೆ ತೀರ್ಪು ಪ್ರಕಟಿಸಲಿದ್ದು, ಈ ತೀರ್ಪು ಯಡಿಯೂರಪ್ಪ ರಾಜಕೀಯ ಭವಿಷ್ಯಕ್ಕೆ ಮಹತ್ವದ್ದಾಗಿದೆ.
ಪ್ರಕರಣವೇನು?: ನಗರದ ಎಚ್‍ಆರ್ ಬಿಆರ್ ಲೇಔಟ್, ರಾಚೇನಹಳ್ಳಿ ಹಾಗೂ ಜೆಪಿನಗರ 8ನೇ ಹಂತ ಸೇರಿ ಹಲವೆಡೆ ಬಡಾವಣೆ ನಿರ್ಮಾಣಕ್ಕೆ ವಶಪಡಿಸಿಕೊಂಡಿದ್ದ ಜಮೀನನ್ನು ಯಡಿಯೂರಪ್ಪ ಸಿಎಂ ಆಗಿದ್ದ ಅವಧಿಯಲ್ಲಿ ಅಕ್ರಮವಾಗಿ ಡಿ-ನೋಟಿಫೈ ಮಾಡಿದ್ದಾರೆ ಎಂಬುದಾಗಿ ಸಿಎಜಿ ವರದಿ ಉಲ್ಲೇಕಿಸಿದೆ ಎಂದು ಆರೋಪಿಸಿ ಜಯಕುಮಾರ್ ಹಿರಮೇಠ್ ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಲೋಕಾ ಪೊಲೀಸರು ಯಡಿಯೂರಪ್ಪ ವಿರುದ್ಧ 2015ರ ಜೂನ್ ನಲ್ಲಿ 15 ಎಫ್ ಐಆರ್ ದಾಖಲಿಸಿದ್ದರು.
Advertisement