ರಾಮನಗರ: ಒಂದೇ ಕುಟುಂಬದ ಮೂವರನ್ನು ಬರ್ಬರವಾಗಿ ಹತ್ಯೆ ಮಾಡಿರುವ ದಾರುಣ ಘಟನೆ ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಭೀಮೆಗೌಡನ ದೊಡ್ಡಿಯಲ್ಲಿ ಬುಧವಾರ ನಡೆದಿದೆ..ತಾಯಿ ಗೌರಮ್ಮ(47), ಪುತ್ರಿ ಸುಕನ್ಯಾ(14) ಹಾಗೂ ತಾತ ಮಾರೇಗೌಡ(60) ಅವರನ್ನು ದುಷ್ಕರ್ಮಿಗಳು ಇಂದು ಬೆಳಗ್ಗೆ ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದಾರೆ..ಮನೆಯೊಳಗೆ ತಾಯಿ ಮತ್ತು ಮಗಳ ಶವ ಪತ್ತೆಯಾಗಿದ್ದು, ಮನೆಯ ಹೊರಗೆ ತಾತನ ಶವ ಪತ್ತೆಯಾಗಿದೆ. .ಈ ಮಧ್ಯೆ 14 ವರ್ಷದ ಬಾಲಕಿ ಸುಕನ್ಯಾ ಮೇಲೆ ದುಷ್ಕರ್ಮಿಗಳು ಅತ್ಯಾಚಾರ ಎಸಗಿರುವ ಶಂಕೆ ವ್ಯಕ್ತವಾಗಿದೆ..ಸ್ಥಳಕ್ಕೆ ಹಾರೋಹಳ್ಳಿ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. .Follow KannadaPrabha channel on WhatsApp KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ Subscribe to KannadaPrabha YouTube Channel and watch Videos