• Tag results for ರಾಮನಗರ

ಕೊರೋನಾ ಸೋಂಕಿತ ಶವಕ್ಕೆ ಸಂಸ್ಕಾರ ನೆರವೇರಿಸಿ ನೈಜ ಮಾನವೀಯತೆ ಮೆರೆಯುವ ಆಶಾ

ಕೊರೋನಾ ಸಾಂಕ್ರಾಮಿಕ ರೋಗದಿಂದ ಮೃತಪಟ್ಟವರನ್ನು ಅವರ ಸಂಬಂಧಿಕರೆ ಮುಟ್ಟಲು ಹಿಂದೇಟು ಹಾಕುತ್ತಿದ್ದಾರೆ. ಅದೆಷ್ಟೋ ಸೋಂಕಿತರು ಬೀದಿ ಹೆಣವಾಗುತ್ತಿದ್ದರೆ, ಇತ್ತೀಚೆಗೆ ಅಮಾನವೀಯವಾಗಿ ಗುಂಡಿಗೆ ಶವಗಳನ್ನು ಎಸೆದಿದ್ದು ಕೂಡ ಸುದ್ದಿಯಾಗಿತ್ತು.

published on : 9th July 2020

ಟೊಯೋಟಾ ಕಿರ್ಲೋಸ್ಕರ್ ಬಿಡದಿ ಪ್ಲಾಂಟ್ ನ 2 ಸಿಬ್ಬಂದಿಗೆ ಕೊರೋನಾ, ಇತರೆ ಸಿಬ್ಬಂದಿಗೂ ಸೋಂಕಿನ ಭೀತಿ

ಮಾರಕ ಕೊರೋನಾ ವೈರಸ್ ದಿನಗಳೆದಂತೆ ತನ್ನ ಕರಾಳ ಮುಖದ ಪ್ರದರ್ಶನ ಮಾಡುತ್ತಿದ್ದು, ಇಂದು ಬಿಡದಿಯಲ್ಲಿರುವ ಟೊಯೋಟಾ ಕಿರ್ಲೋಸ್ಕರ್ ಸಂಸ್ಥೆಯ ಇಬ್ಬರು ಸಿಬ್ಬಂದಿಗೆ ಸೋಂಕು ಒಕ್ಕರಿಸಿದೆ. ಇದರಿಂದಾಗಿ ಸಂಸ್ಥೆಯ ಇತರೆ ಸಿಬ್ಬಂದಿಗಳಿಹೂ ಸೋಂಕು ಭೀತಿ ಶುರುವಾಗಿದೆ.

published on : 18th June 2020

ಲಾಕ್ ಡೌನ್ ಎಫೆಕ್ಟ್: ತೀವ್ರ ಸಂಕಷ್ಟದಲ್ಲಿ ರಾಮನಗರದ ರೇಷ್ಮೆ ಬೆಳೆಗಾರರು ಮತ್ತು ನೇಕಾರರು

ಕಂಚಿ, ಧರ್ಮಾವರಂ, ಬನಾರಸ್ ಸೀರೆಗಳು, ಕರ್ನಾಟಕದ ಇಳ್ಕಲ್, ಮೊಳಕಾಲ್ಮೂರು, ಮೈಸೂರು ಸಿಲ್ಕ್ ಸೀರೆಗಳಿಗೆ ರೇಷ್ಮೆ ಪೂರೈಕೆಯಾಗುವುದು ಇಲ್ಲಿಂದಲೇ. ಇಲ್ಲಿನ ರೇಷ್ಮೆಯ ದಾರದಿಂದ ತೆಗೆದ ನೂಲಿನಿಂದ ಸುಂದರವಾದ ಸೀರೆಗಳು ಲೆಕ್ಕವಿಲ್ಲದಷ್ಟು ಉತ್ಪಾದನೆಯಾಗುತ್ತವೆ.

published on : 7th June 2020

ನನಸಾಗದ ಕನಸು: 14 ವರ್ಷಗಳಿಂದ ಸ್ವಂತ ಸೂರಿಗೆ ಕಾಯುತ್ತಿರುವ ರಾಮನಗರ ಜಿಲ್ಲೆಯ ದೊಡ್ಡಮಣ್ಣಿನ ಗುಡ್ಡೆ ನಿವಾಸಿಗಳು!

ಕೈಗೆಟಕುವ ದರದಲ್ಲಿ ಮನೆಗಳು ಸಿಗಬಹುದೆಂದು 1,400ಕ್ಕೂ ಹೆಚ್ಚು ಮಂದಿ ಅರ್ಜಿ ಸಲ್ಲಿಸಿ ಸತತ 14 ವರ್ಷಗಳಿಂದ ಕಾಯುತ್ತಿದ್ದಾರೆ. ಆದರೆ ಸ್ವಂತ ಮನೆ ಮಾಡಿಕೊಳ್ಳುವ ಅವರ ಕನಸು ಇಲ್ಲಿಯವರೆಗೆ ನನಸಾಗೇ ಇಲ್ಲ.

published on : 6th June 2020

ರಾಮನಗರದ 'ಹೆಲ್ತ್ ಸಿಟಿ' ಕಾರ್ಯ ಈ ವರ್ಷವೇ ಆರಂಭ: ಡಾ.ಅಶ್ವತ್ ನಾರಾಯಣ್

ರೇಷ್ಮೆ ನಗರ ಖ್ಯಾತಿಯ ರಾಮನಗರದಲ್ಲಿ ಈ ವರ್ಷದ ಕೊನೆಯೊಳಗೆ 'ಹೆಲ್ತ್‌ ಸಿಟಿ' ನಿರ್ಮಾಣ ಕಾರ್ಯ ಆರಂಭವಾಗಲಿದ್ದು, ನಂತರ ಆರೋಗ್ಯ ಸೇವೆಯಲ್ಲಿ ಜಿಲ್ಲೆ ಇಡೀ ರಾಜ್ಯಕ್ಕೆ ಮಾದರಿ ಎನಿಸಿಕೊಳ್ಳಲಿದೆ ಎಂದು ಉಪಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದ್ದಾರೆ. 

published on : 30th May 2020

ಪ್ರತಿಪಕ್ಷಗಳು ಹಗಲು ಗನಸು ಬಿಡಲಿ, 2023ರ ನಂತರವೂ ನಮ್ಮದೇ ಸರ್ಕಾರ- ಡಾ. ಅಶ್ವತ್ ನಾರಾಯಣ

ಬಿಜೆಪಿಯಲ್ಲಿ ಭಿನ್ನಮತ ಇಲ್ಲ. ಸರ್ಕಾರ ಉರುಳಿಸಿ ಅಧಿಕಾರಕ್ಕೆ ಬರುವ ಬಗ್ಗೆ ಪ್ರತಿಪಕ್ಷಗಳು ಹಗಲುಗನಸು ಕಾಣುವುದನ್ನು ಬಿಡಲಿ ಎಂದು ಉಪಮುಖ್ಯಮಂತ್ರಿ ಡಾ. ಅಶ್ವತ್ಥನಾರಾಯಣ ಹೇಳಿದ್ದಾರೆ.

published on : 29th May 2020

ಗ್ರೀನ್ ಝೋನ್ ರಾಮನಗರಕ್ಕೂ ವಕ್ಕರಿಸಿದ ಕೊರೋನಾ; ರಾಜ್ಯದಲ್ಲಿ 69 ಹೊಸ ಪ್ರಕರಣ; ಸೋಂಕಿತರ ಸಂಖ್ಯೆ 2,158ಕ್ಕೆ ಏರಿಕೆ

ರಾಜ್ಯದಲ್ಲಿ ಕೊರೋನಾ ವೈರಸ್ ಸೋಂಕಿನ ಅಬ್ಬರ ಮುಂದುವರೆದಿದ್ದು, ಸೋಮವಾರ ಮತ್ತೆ 69 ಮಂದಿಯಲ್ಲಿ ಹೊಸದಾಗಿ ಸೋಂಕು ದೃಢಪಟ್ಟಿದೆ. ಅಲ್ಲದೆ, ಗ್ರೀನ್ ಝೋನ್ ರಾಮನಗರಕ್ಕೂ ಕೊರೋನಾ ವಕ್ಕರಿಸಿದ್ದು, ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 2,158ಕ್ಕೆ ಏರಿಕೆಯಾಗಿದೆ. 

published on : 25th May 2020

ರಾಮನಗರ: ಅರಣ್ಯಾಧಿಕಾರಿಗಳಿಂದ 2 ಚಿರತೆ ಮರಿಗಳ ಸೆರೆ

ರಾಮನಗರ ಜಿಲ್ಲೆಯಲ್ಲಿ ಚಿರತಣಗಳ ಹಾವಳಿ ಹೆಚ್ಚಾಗಿದ್ದು, ಯಾವ ಭಾಗದಲ್ಲಿ ನೋಡಿದರೂ ಚಿರತೆ ದಾಳಿಯ ಮಾತುಗಳೇ ಕೇಳಿ ಬರುತ್ತಿವೆ. ಈ ಹಿಂದೆ ನರಭಕ್ಷಕ ಚಿರತೆ ರಾಮನಗರದಲ್ಲಿ 62 ವರ್ಷದ ಮಹಿಳೆಯೊಬ್ಬರನ್ನು ಕೊಂದು ಹಾಕಿತ್ತು. ಈ ಬೆಳವಣಿಗೆ ಬಳಿಕ ಚಿರತೆ ಸೆರೆಹಿಡಿಯಲು ಬಲೆ ಬೀಸಿದ್ದ ಅರಣ್ಯಾಧಿಕಾರಿಗಳು ಇದೀಗ ಎರಡು ಚಿರತೆ ಮರಿಗಳನ್ನು ಸೆರೆ ಹಿಡಿದಿದ್ದಾರೆ. 

published on : 18th May 2020

ರಾಮನಗರ: ಮಲಗಿದ್ದ ವೃದ್ಧೆ ಚಿರತೆಗೆ ಬಲಿ

ಜಿಲ್ಲೆಯ ಮಾಗಡಿ ತಾಲೂಕಿನಲ್ಲಿ ‌ಮತ್ತೆ ಚಿರತೆ ಅಟ್ಟಹಾಸ ಮೆರೆದಿದೆ. ಮನೆಯ ಹೊರಗಡೆ ಮಲಗಿದ್ದ ವೃದ್ಧೆ ಮೇಲೆ ಚಿರತೆಯೊಂದು ದಾಳಿ ಮಾಡಿ ಕೊಂದು ಹಾಕಿರುವ ಘಟನೆ ಮಾಗಡಿ ತಾಲ್ಲೂಕಿನ ಕೊತ್ತಗಾನಹಳ್ಳಿ ಗ್ರಾಮದಲ್ಲಿ ಶುಕ್ರವಾರ ರಾತ್ರಿ ನಡೆದಿದೆ.

published on : 16th May 2020

ರಾಮನಗರ ಜಾತ್ರೆ: ಅಧಿಕಾರಿಗಳ ವಿರುದ್ಧ ಡಿಸಿಎಂ ಅಶ್ವತ್ಥ್ ನಾರಾಯಣ್ ತೀವ್ರ ಕಿಡಿ

ಲಾಕ್'ಡೌನ್ ನಡುವಲ್ಲೂ ರಾಮನಗರದಲ್ಲಿ ಜಾತ್ರೆಗೆ ಅನುಮತಿ ನೀಡಿದ್ದ ಅಧಿಕಾರಿಗಳನ್ನು ಉಪಮುಖ್ಯಮಂತ್ರಿ ಅಶ್ವತ್ಥ್ ನಾರಾಯಣ್ ಅವರು ತರಾಟೆಗೆ ತೆಗೆದುಕೊಂಡಿದ್ದಾರೆ. 

published on : 16th May 2020

ರಾಮನಗರ: ಮಗುವನ್ನು ಕೊಂದಿದ್ದ ಚಿರತೆ ಸೆರೆ

ಪೋಷಕರ ಜತೆ ಮಲಗಿದ್ದ ಮೂರು ವರ್ಷದ ಮಗುವನ್ನು ಹೊತ್ತೊಯ್ದು ಕೊಂದು ಹಾಕಿದ್ದ ಚಿರತೆ ಬೋನಿನಲ್ಲಿ ಸೆರೆಯಾಗಿದೆ. ಮಾಗಡಿ ತಾಲೂಕಿನ ಕದಿರಯ್ಯನ ಪಾಳ್ಯದಲ್ಲಿ ಈ ನರಭಕ್ಷಕ ಚಿರತೆ ಸೆರೆಯಾಗಿದ್ದು ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.  

published on : 13th May 2020

ರಾಮನಗರದಲ್ಲಿ ಹೈಟೆಕ್ ರೇಷ್ಮೆ ಮಾರುಕಟ್ಟೆ, ಮಾವು ಸಂಸ್ಕರಣಾ ಘಟಕ: ಡಾ. ಸಿ.ಎನ್. ಅಶ್ವತ್ಥ ನಾರಾಯಣ

ಗರದಲ್ಲಿ ಹೈಟೆಕ್ ರೇಷ್ಮೆ ಗೂಡು ಮಾರುಕಟ್ಟೆ ಹಾಗೂ ಮಾವು ಸಂಸ್ಕರಣಾ ಘಟಕವನ್ನು ಶೀಘ್ರದಲ್ಲೇ ಸ್ಥಾಪಿಸಲಾಗುವುದು ಎಂದು ಜಿಲ್ಲೆಯ ಉಸ್ತುವಾರಿ ಸಚಿವರೂ ಆಗಿರುವ  ಉಪಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥ ನಾರಾಯಣ ಹೇಳಿದ್ದಾರೆ. 

published on : 11th May 2020

ರಾಮನಗರ: ಮಲಗಿದ್ದ ಮಗು ಚಿರತೆಗೆ ಬಲಿ

ಮನೆಯಲ್ಲಿ ಮಲಗಿದ್ದ 3 ವರ್ಷದ ಗಂಡು ಮಗುವನ್ನು ಚಿರತೆಯೊಂದು ಹೊತ್ತೊಯ್ದು ಕೊಂದು ತಿಂದಿರುವ ಘಟನೆ ಮಾಗಡಿ ತಾಲೂಕಿನ ಕದಿರಯ್ಯನಪಾಳ್ಯ ಗ್ರಾಮದಲ್ಲಿ ಶುಕ್ರವಾರ ರಾತ್ರಿ ನಡೆದಿದೆ.

published on : 9th May 2020

ರಾಮನಗರದಲ್ಲಿ ಹೋಟೆಲ್ ಉದ್ಯಮ ತೆರೆಯಲು ಅವಕಾಶ ನೀಡಿ: ಸಂಸದ ಡಿ.ಕೆ. ಸುರೇಶ್ 

ರಾಮನಗರ ಜಿಲ್ಲೆಯಲ್ಲಿ ಈವರೆಗೆ ಯಾವುದೇ ಕೊರೋನಾ ಪ್ರಕರಣ ಕಂಡುಬಂದಿಲ್ಲ. ಹೀಗಾಗಿ ಜಿಲ್ಲೆಯನ್ನು ಹಸಿರು ವಲಯ ಎಂದು ಸರ್ಕಾರ ಈಗಾಗಲೇ ಘೋಷಣೆ ಮಾಡಿದೆ.  ಹೋಟೆಲ್ ತೆರೆಯಲು ಸರ್ಕಾರ ಅವಕಾಶ ಮಾಡಿಕೊಡಬೇಕು ಎಂದು ಸಂಸದ ಡಿ.ಕೆ. ಸುರೇಶ್ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

published on : 6th May 2020

5.5 ಕೋಟಿ ರೂ. ವೆಚ್ಚದಲ್ಲಿ ರಾಮನಗರದ 1 ಲಕ್ಷ 4 ಸಾವಿರ ಕುಟುಂಬಗಳಿಗೆ ಆಹಾರ ಕಿಟ್: ಎಚ್ ಡಿ ಕುಮಾರಸ್ವಾಮಿ

ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಪತ್ನಿ ಅನಿತಾ ಕುಮಾರಸ್ವಾಮಿ ಅವರೊಡನೆ ಪುತ್ರ-ಸೊಸೆ ನವದಂಪತಿ ನಿಖಿಲ್-ರೇವತಿ ಕೈಯಿಂದ ಜಿಲ್ಲೆಯ ಜನರಿಗೆ ಉಚಿತ ಆಹಾರ ಕಿಟ್ ವಿತರಿಸಿದರು.

published on : 28th April 2020
1 2 3 4 5 6 >