

ರಾಮನಗರ: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಬಣಗಳ ನಡುವಿನ ವಾಗ್ವಾದ ಜೋರಾಗಿದೆ.
ಡಿಸಿಎಂ ಡಿ.ಕೆ ಶಿವಕುಮಾರ್, ಬೇರೆ ನಾಯಕರ ರೀತಿ ಬಿಜೆಪಿ ಜೊತೆ ರಾಜೀ ಮಾಡಿಕೊಂಡಿದ್ರೆ, ಇಷ್ಟೊತ್ತಿಗೆ ಎಲ್ಲಿರ್ತಿದ್ರೋ ಗೊತ್ತಿಲ್ಲ ಎಂದು ಮಾಗಡಿ ಶಾಸಕ ಹೆಚ್.ಸಿ ಬಾಲಕೃಷ್ಣ ಹೇಳಿದ್ದಾರೆ. ಈ ಮೂಲಕ ಹೈಕಮಾಂಡ್ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ರಾಮನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಡಿಕೆ ಶಿವಕುಮಾರ್ ಯಾವುದಕ್ಕೂ ರಾಜಿಯಾಗದೇ ಕಾಂಗ್ರೆಸ್ ನಲ್ಲೇ ಉಳಿದಿದ್ದಾರೆ. ಪಕ್ಷಕ್ಕೋಸ್ಕರ ತ್ಯಾಗ ಮಾಡಿದ್ದಾರೆ, ಪಕ್ಷಕ್ಕೋಸ್ಕರ ಜೈಲಿಗೆ ಹೋಗಿ ಬಂದಿದ್ದಾರೆ ಎಂದರು.
ಹಿಂದೆ ಸ್ವತಂತ್ರವಾಗಿ ಗೆದ್ದಾಗ ಜನತಾದಳ ಸರ್ಕಾರ ಇತ್ತು. ಆಗಲೂ ಎಲ್ಲೂ ಹೋಗದೇ ಕಾಂಗ್ರೆಸ್ ನಲ್ಲಿ ಉಳಿದುಕೊಂಡರು. ಹಾಗಾಗಿ ನಮ್ಮ ನಾಯಕರಿಗೂ ಅವಕಾಶ ಕೊಡಿ ಎಂದು ಹೈಕಮಾಂಡ್ ಗೆ ಮನವಿ ಮಾಡುತ್ತೇವೆ. ಡಿಕೆಶಿ ಸಿಎಂ ಆದ್ರೆ ನಮ್ಮ ಜಿಲ್ಲೆಯೂ ಅಭಿವೃದ್ಧಿ ಆಗುತ್ತೆ ಎನ್ನುವ ಸ್ವಾರ್ಥ ಇದೆ ಎಂದರು.
ಇನ್ನೂ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಹಾಗೂ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಭೇಟಿ ವಿಚಾರ ಕುರಿತು ಮಾತನಾಡಿದ ಬಾಲಕೃಷ್ಣ, ಯಾವ ವಿಚಾರಕ್ಕೆ ಭೇಟಿ ಆಗಿದ್ದಾರೆ ಅಂತ ಗೊತ್ತಿಲ್ಲ. ಎಲ್ಲೋ ಸಿಕ್ಕಿದಾಗ ಮಾತನಾಡೋದು ಸಹಜ. ಮನೆಗೆ ಹೋಗಿ ಭೇಟಿ ಮಾಡಿದ್ರೆ ಅದಕ್ಕೆ ಒಂದು ಅರ್ಥ ಇದೆ. ಕಚೇರಿಯಲ್ಲಿ, ರೋಡಲ್ಲಿ, ಮದುವೆಲಿ ಸಿಕ್ಕಿದಾಗ ಮಾತಾಡೋದ್ರಲ್ಲಿ ವಿಶೇಷ ಏನಿಲ್ಲ ಎಂದು ತಿಳಿಸಿದರು.
Advertisement