

ಬೆಂಗಳೂರು: ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿರುವ ಆರೋಪ ಕೇಳಿಬಂದಿದೆ. ರಾಷ್ಟ್ರ ಧ್ವಜದ ಮೇಲೆ ಶೂ ಕಾಲಿನಲ್ಲಿ ನಿಂತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
ನಿನ್ನೆ ಕನಕಪುರದಲ್ಲಿ ಕನಕೊತ್ಸವದ ಅಂಗವಾಗಿ ನಡೆದಿದ್ದ ರಂಗೋಲಿ ಸ್ಪರ್ಧೆ ವೇಳೆ ಈ ಆಚಾತುರ್ಯ ನಡೆದಿದೆ.
ನಗರದ ಪ್ರತಿ ವಾರ್ಡ್ ಗೂ ಭೇಟಿ ನೀಡಿ ರಂಗೋಲಿ ಸ್ಪರ್ಧೆ ವೀಕ್ಷಿಸಿದ ಡಿಕೆ ಶಿವಕುಮಾರ್, ರಂಗೋಲಿಯಲ್ಲಿ ಬಿಡಿಸಿದ್ದ ರಾಷ್ಟ್ರದ ಧ್ವಜದ ಮೇಲೆ ಕಾಲಿಟ್ಟಿರೋ ವಿಡಿಯೋಗಳು ವೈರಲ್ ಆಗುತ್ತಿವೆ.
ಸಂವಿಧಾನದ ಬಗ್ಗೆ ಮಾತನಾಡುವ ಡಿಕೆ ಶಿವಕುಮಾರ್ ರಾಷ್ಟ್ರಧ್ವಜಕ್ಕೆ ಕೊಡುವ ಗೌರವ ಇದೇನಾ ಎಂದು ಬಿಜೆಪಿ ಟ್ರೋಲ್ ಮಾಡುತ್ತಿದೆ.
Advertisement