ಶಿಕ್ಷಣದ ಜೊತೆಗೆ ಯೋಗ ಕೇಂದ್ರ ತೆರೆಯಲು ಮುಂದಾದ ಸರ್ಕಾರ

ನೂತನ ಶಿಕ್ಷಣ ನೀತಿ ಜಾರಿಗೆ ತರುವ ಉತ್ಸಾಹದಲ್ಲಿ ಕೇಂದ್ರ ಸರ್ಕಾರ ಉತ್ಸಾಹದಲ್ಲಿ ಕೇಂದ್ರ ಸರ್ಕಾರ ಯೋಗವನ್ನು ಶಿಕ್ಷಣದಲ್ಲಿ ಒಂದು ಭಾಗವಾಗಿ ರೂಪಿಸಲು ತಯಾರಿ ..
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ನೂತನ ಶಿಕ್ಷಣ ನೀತಿ ಜಾರಿಗೆ ತರುವ ಉತ್ಸಾಹದಲ್ಲಿ ಕೇಂದ್ರ ಸರ್ಕಾರ ಉತ್ಸಾಹದಲ್ಲಿ ಕೇಂದ್ರ ಸರ್ಕಾರ ಯೋಗವನ್ನು ಶಿಕ್ಷಣದಲ್ಲಿ  ಒಂದು ಭಾಗವಾಗಿ ರೂಪಿಸಲು ತಯಾರಿ ನಡೆಸಿದೆ.

ಕೇಂದ್ರ ಸಚಿವೆ ಸ್ಮೃತಿ ಇರಾನಿಯ ಈ ವಿಚಾರದಲ್ಲಿ ವಿಶೇಷ ಆಸಕ್ತಿ ತೆಗೆದುಕೊಂಡಿದ್ದು, ಶಿಕ್ಷಣದಿಂದ ಕಾಲೇಜು ಹಂತದವರೆಗೆ ಯಾವ ರೀತಿಯಲ್ಲಿ ಯೋಗವನ್ನು ಅಳವಡಿಸಬಹುದೆಂಬ ಬಗ್ಗೆ ಯೋಗ ತಜ್ಞರಿಂದ ಸಲಹೆಗಳನ್ನು ಸ್ವೀಕರಿಸುತ್ತಿದ್ದಾರೆ.
ಪ್ರಮುಖವಾಗಿ ಬೆಂಗಳೂರಿನಲ್ಲಿರುವ ವಿವೇಕಾನಂದ ಯೋಗ ಅನುಸಂಧಾನ  (ವಿಶ್ವವಿದ್ಯಾಲಯ) ಈ ಸಂಬಂಧ ವರದಿಯನ್ನು ಕೇಳಿರುವ ಸಚಿವರು ಈ ಬಗ್ಗೆ ಸಭೆ ನಡೆಸಿದ್ದಾರೆ. ಸಭೆಯಲ್ಲಿ ವಿಶ್ವ ವಿದ್ಯಾಲಯ ಧನಸಹಾಯ ಆಯೋಗದ ಅಧ್ಯಕ್ಷ ಪ್ರೊ. ವೇದ ಪ್ರಕಾಶ್ ಸೇರಿದಂತೆ ಇಲಾಖೆಯ ಪ್ರಮುಖರು ಇದ್ದರು. ಯೋಗ ಶಿಕ್ಷಣ ಅನುಷ್ಠಾನದ ಕುರಿತು ಸುದೀರ್ಘ ಚರ್ಚೆ ನಡೆಸಿದ್ದಾರೆ.

ಪ್ರಾಥಮಿಕ ಶಿಕ್ಷಣದಿಂದ ಕಾಲೇಜು ಹಂತದವರೆಗೆ ಯೋಗವನ್ನು ಪರಿಚಯಿಸುವುದು, ಶಿಕ್ಷಕರಿಗೆ ಮೊದಲು ಯೋಗ ತರಬೇತಿ ನೀಡುವುದು, ದೈಹಿಕ ಶಿಕ್ಷಣದಿಂದ ಯೋಗವನ್ನು ಪ್ರತ್ಯೇಕವಾಗಿಸುವುದು, ವಿಶ್ವವಿ ದ್ಯಾಲಯಗಳು ಯೋಗಕ್ಕಾಗಿಯೇ ಒಂದು ಪ್ರತ್ಯೇಕ ವಿಭಾಗ ಆರಂಭಿಸುವುದು, ಯೋಗವನ್ನು ಕಲೆ, ಸಂಸ್ಕೃತಿ, ವಿಜ್ಞಾನವಾಗಿ ಒಂದು ಪ್ರಾಧಾನ್ಯತೆ ಕಲ್ಪಿಸುವುದು.  ಯೋಗ ಕೇವಲ ದೈಹಿಕ ಕಸರತ್ತಷ್ಟೇ ಅಲ್ಲ ಉತ್ತಮ ಮನಸ್ಥಿತಿಗೂ ಪೂರಕ ಎಂಬುದನ್ನು ಎತ್ತಿ ಹಿಡಿಯುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆದಿದೆ.

ಅನುಷ್ಠಾನ ಹೇಗೆ?: ದೇಶಾದ್ಯಂತ ಶಿಕ್ಷಕರಿಗೆ ತರಬೇತಿ ನೀಡುವ ಅನೇಕ ಸಂಸ್ಥೆಗಳಿವೆ, ಅಲ್ಲಿ ಯೋಗ ಶಿಕ್ಷಣಕ್ಕೆ ಆದ್ಯತೆ ನೀಡಲಾಗುತ್ತದೆ. ಇದರಿಂದ ಮುಂದೆ ಸಹಜವಾಗಿ ಶಾಲಾ ಹಂತದಲ್ಲಿ ಯೋಗ ಅರಿತ ಶಿಕ್ಷಕರು ರೂಪುಗೊಳ್ಳುತ್ತಾರೆ. ಇನ್ನು ಯೋಗವನ್ನು ಶಿಕ್ಷಣದ ಭಾಗವಾಗಿಸುವುದು ಪ್ರತಿ ರಾಜ್ಯಗಳ ಜವಾಬ್ದಾರಿಯಾಗಿರುತ್ತದೆ, ಅದನ್ನು ರೂಪಿಸಲು ಕೇಂದ್ರಸರ್ಕಾರ ರಾಜ್ಯಗಳಿಗೆ ಸಲಹೆ ನೀಡಲಿದೆ ಎಂದು ತಿಳಿದುಬಂದಿದೆ. ಇನ್ನು ಯುಜಿಸಿಯು ಕಾಲೇಜುಗಳಲ್ಲಿ ಯೋಗಕ್ಕೆ ಪ್ರಾಧಾನ್ಯತೆ ಕಲ್ಪಿ ಸುವ ಕಾರ್ಯದ ಹೊಣೆ ಹೊತ್ತಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com