• Tag results for ಯೋಗ

ಅಮೆರಿಕಾದಲ್ಲಿ ಸಿಲುಕಿದ್ದ 200 ಉದ್ಯೋಗಿಗಳ ವಾಪಸ್ ಕರೆತಂದ ಇನ್ಫೋಸಿಸ್!

ಅಮೆರಿಕಾದಲ್ಲಿ ಸಿಲುಕಿದ್ದ 200 ಉದ್ಯೋಗಿಗಳನ್ನು ಇನ್ಫೋಸಿಸ್  ವಾಪಸ್ ಕರೆಸಿಕೊಂಡಿದೆ.

published on : 7th July 2020

ರಾಜ್ಯದ 57 ಪ್ರಯೋಗಾಲಯಗಳಲ್ಲಿ ಇನ್ನೂ 27,000 ಮಾದರಿಗಳ ವೈದ್ಯಕೀಯ ವರದಿ ಬಾಕಿಯಿದೆ!

ರಾಜ್ಯದ 57 ಪ್ರಯೋಗಾಲಯಗಳಲ್ಲಿ 27,000 ಮಾದರಿಗಳ ವೈದ್ಯಕೀಯ ವರದಿ ಇನ್ನೂ ಬಾಕಿಯಿದೆ ಎಂದು ವರದಿಗಳಿಂದ ತಿಳಿದುಬಂದಿದೆ. 

published on : 7th July 2020

65ಕ್ಕಿಂತ ಹಿರಿಯರಿಗೆ ಅಂಚೆ ಮತದಾನ ನಿರ್ಧಾರ ಹಿಂಪಡೆಯುವಂತೆ ಚುನಾವಣಾ ಆಯೋಗಕ್ಕೆ ಟಿಎಂಸಿ ಆಗ್ರಹ

ಕೊರೋನಾ ವೈರಸ್ ಹಿನ್ನೆಲೆಯಲ್ಲಿ ಚುನಾವಣೆ ನಿಯಮಗಳಿಗೆ ತಿದ್ದುಪಡಿ ತರಲಾಗಿದ್ದು, 65 ವರ್ಷ ಮೇಲ್ಪಟ್ಟವರಿಗೆ ಅಂಚೆ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ. ಆದರೆ ಇದಕ್ಕೆ ತೃಣಮೂಲ ಕಾಂಗ್ರೆಸ್(ಟಿಎಂಸಿ) ತೀವ್ರ ವಿರೋಧ ವ್ಯಕ್ತಪಡಿಸಿದ್ದು, 65ಕ್ಕಿಂತ ಹಿರಿಯರಿಗೆ ಅಂಚೆ ಮತದಾನ ನಿರ್ಧಾರ ಹಿಂಪಡೆಯುವಂತೆ ಸೋಮವಾರ ಚುನಾವಣಾ ಆಯೋಗಕ್ಕೆ ಒತ್ತಾಯಿಸಿದೆ.

published on : 6th July 2020

ಮಹಾರಾಷ್ಟ್ರ: ಸಂಸ್ಥೆಯ ಅಧಿಕಾರಿಗಳಿಂದ ಉದ್ಯೋಗಿಗೆ ಕಿರುಕುಳ, ಗುಪ್ತಾಂಗಕ್ಕೆ ಸ್ಯಾನಿಟೈಸರ್ ಸ್ಪ್ರೇ!

ಹಣಕಾಸು ವಿಚಾರದಲ್ಲಿ ವಿವಾದ ಉಂಟಾಗಿ ಕಂಪನಿಯೊಂದರ ಹಿರಿಯ ಅಧಿಕಾರಿಗಳು ಉದ್ಯೋಗಿಗೆ ಕಿರುಕುಳ ನೀಡಿ ಗುಪ್ತಾಂಗಕ್ಕೆ ಸ್ಯಾನಿಟೈಸರ್ ಸ್ಪ್ರೇ ಮಾಡಿರುವ ಘಟನೆ ಮಹಾರಾಷ್ಟ್ರದ ಕೊಥ್ರುಡ್ ನಲ್ಲಿ ನಡೆದಿದೆ.

published on : 6th July 2020

ಎಲ್ಲ ಸುಸೂತ್ರವಾಗಿ ನಡೆದರೆ 2021ರ ಆರಂಭಕ್ಕೆ 'ಕೊವಾಕ್ಸಿನ್' ಲಭ್ಯ: ಕೊರೋನಾಕ್ಕೆ ಸಿಗಲಿದೆಯೇ ಲಸಿಕೆ?

ಕೊವಕ್ಸಿನ್ ನ ಕ್ಲಿನಿಕಲ್ ಪ್ರಯೋಗ ಯಶಸ್ವಿಯಾಗಿ ಪ್ರಾಧಿಕಾರಗಳು ಒಪ್ಪಿಗೆ ನೀಡಿದರೆ 2021ರ ಆರಂಭದಲ್ಲಿ ಕೊರೋನಾ ಸೋಂಕಿಗೆ ಜನರಿಗೆ ಔಷಧಿ ಸಿಗಲಿದೆ ಎಂದು ಭರತ್ ಬಯೋಟೆಕ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಮತ್ತು ಅಧ್ಯಕ್ಷ ಡಾ ಕೃಷ್ಣ ಎಲ್ಲಾ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪ್ರತಿನಿಧಿ ಸುಮಿ ಸುಕನ್ಯಾ ದತ್ತ ಜತೆ ನಡೆಸಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

published on : 3rd July 2020

18 ಸಾವಿರ ಉದ್ಯೋಗಿಗಳಿಗೆ ರಾಜೀನಾಮೆ ನೀಡಲು ಕಾಗ್ನಿಜೆಂಟ್ ಕಂಪೆನಿ ಆಗ್ರಹ: ಸರ್ಕಾರದ ಮೊರೆ ಹೋಗಲು ಒಕ್ಕೂಟ ನಿರ್ಧಾರ

ಅಮೆರಿಕ ಮೂಲದ ತಂತ್ರಜ್ಞಾನ ಸಂಸ್ಥೆ ಕಾಗ್ನಿಜೆಂಟ್ ಭಾರತದಾದ್ಯಂತ ಸುಮಾರು 18 ಸಾವಿರ ಉದ್ಯೋಗಿಗಳಿಗೆ ಸಾಮೂಹಿಕವಾಗಿ ರಾಜೀನಾಮೆ ನೀಡಲು ಒತ್ತಡ ಹೇರುತ್ತಿದೆ ಎಂದು ಕರ್ನಾಟಕ ಮತ್ತು ಚೆನ್ನೈ ಐಟಿ ಉದ್ಯೋಗಿಗಳ ಒಕ್ಕೂಟ ಆರೋಪಿಸಿದೆ.

published on : 3rd July 2020

ಮುಖ್ಯಮಂತ್ರಿಗಳಿಗೆ ನ್ಯಾ. ನಾಗಮೋಹನ್‌ ದಾಸ್‌ ವರದಿ ಸಲ್ಲಿಕೆ: ಎಸ್‌ಟಿ ಮೀಸಲು ಶೇ.2ಕ್ಕೆ ಹೆಚ್ಚಿಸಲು ಶಿಫಾರಸು

ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಮೀಸಲಾತಿ ಪರಿಷ್ಕರಣೆ ಸಂಬಂಧ ಸರ್ಕಾರ ರಚಿಸಿದ್ದ ನ್ಯಾ.ನಾಗಮೋಹನ್ ದಾಸ್ ನೇತೃತ್ವದ ಏಕ ಸದಸ್ಯ ಆಯೋಗ  ಮುಖ್ಯಮಂತ್ರಿಗೆ  ವರದಿ ಸಲ್ಲಿಕೆ ಮಾಡಿದೆ.

published on : 3rd July 2020

ಕೆಎಸ್ಆರ್ ಟಿಸಿ ನೇಮಕಾತಿ: ವಂಚಕರಿಂದ ದೂರವಿರಿ - ಶಿವಯೋಗಿ ಕಳಸದ್

ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ ಸಹಾಯಕ ತಾಂತ್ರಿಕ ಹುದ್ದೆಗೆ ಆಯ್ಕೆಯಾಗಿರುವ ಅಭ್ಯರ್ಥಿಗಳ ನಿಯೋಜನೆಗೆ ಆದೇಶ ಹೊರಡಿಸಿರುವುದಾಗಿ ಸಾಮಾಜಿಕ ಜಾಲತಾಣವಾದ ವಾಟ್ಸ್ ಆಪ್‌ನಲ್ಲಿ ಊಹಾಪೋಹಗಳು ಹರಿದಾಡುತ್ತಿದ್ದು, ಜನತೆ ಈ ಕುರಿತು ಎಚ್ಚರಿಕೆಯಿಂದಿರಬೇಕು ಎಂದು ಕೆ.ಎಸ್.ಆರ್.ಟಿ.ಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ ಕಳಸದ್ ಹೇಳಿದ್ದಾರೆ. 

published on : 30th June 2020

ಕೋವಿಡ್-19: ದೇಶದ ಮೊದಲ ಲಸಿಕೆ 'ಕೊವಾಕ್ಸಿನ್' ಮಾನವ ಪ್ರಯೋಗಕ್ಕೆ ಡಿಸಿಜಿಐ ಅನುಮೋದನೆ

ಕೋವಿಡ್-19 ವಿರುದ್ಧದ ದೇಶದ ಮೊದಲ ಲಸಿಕೆ 'ಕೊವಾಕ್ಸಿನ್ 'ನ ಮೊದಲ ಹಾಗೂ ಎರಡನೇ ಹಂತದ ಮಾನವ ಪ್ರಯೋಗ ಕಾರ್ಯಕ್ಕೆ  ಹೈದರಾಬಾದ್ ಮೂಲದ ಲಸಿಕೆ ತಯಾರಿಕ ಕಂಪನಿ ಭಾರತ್ ಬಯೋಟೆಕ್ ಗೆ ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ ( ಡಿಸಿಜಿಐ) ಅನುಮೋದನೆ ನೀಡಿದೆ.

published on : 30th June 2020

ಬೇಡಿಕೆ ಆಧರಿಸಿ ಕೌಶಲ್ಯ ಅಭಿವೃದ್ಧಿ ತರಬೇತಿ; ಜುಲೈ 7 ರಂದು ಬೃಹತ್ ಆನ್ ಲೈನ್ ಉದ್ಯೋಗ ಮೇಳ ; ಬಿ.ಎಸ್.ಯಡಿಯೂರಪ್ಪ

 ರಾಜ್ಯ ಸರ್ಕಾರವು ಬೇಡಿಕೆ ಆಧಾರಿತ ಕೌಶಲ್ಯ ಅಭಿವೃದ್ಧಿ ತರಬೇತಿಗೆ ಆದ್ಯತೆ ನೀಡುತ್ತಿದ್ದು, ನಾಡಿನ ಯುವಜನರಿಗೆ ಇದರಿಂದ ಹೆಚ್ಚಿನ ಅನುಕೂಲವಾಗಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ.

published on : 29th June 2020

ಚಾಮರಾಜನಗರದಲ್ಲಿಂದು 13 ಕೊರೊನಾ ಕೇಸ್​ ಪತ್ತೆ: ಕೋವಿಡ್ ಪ್ರಯೋಗಾಲಯವೇ ಸೀಲ್​ ಡೌನ್​!

ವೈದ್ಯಕೀಯ ಮಹಾವಿದ್ಯಾಲಯದ ಕೋವಿಡ್-19 ಪ್ರಯೋಗಾಲಯದ ಟೆಕ್ನಿಶಿಯನ್​​ಗೆ ಕೊರೊನಾ ಸೋಂಕು ತಗುಲಿದ ಹಿನ್ನೆಲೆ ಪ್ರಯೋಗಾಲಯವನ್ನೇ ಸೀಲ್ ಡೌನ್ ಮಾಡಲಾಗಿದೆ.

published on : 28th June 2020

ಭಾರತದ ಹೊರಗೆ ಮೊದಲ ಯೋಗ ವಿವಿ; ಲಾಸ್‌ ಏಂಜಲಿಸ್‌ನಲ್ಲಿ ಯೋಗ ವಿಶ್ವವಿದ್ಯಾಲಯ ಆರಂಭ

ಭಾರತದ ಹೊರಗೆ ಜಗತ್ತಿನ ಮೊದಲ ಯೋಗ ವಿಶ್ವವಿದ್ಯಾಲಯ ತಲೆ ಎತ್ತಿದ್ದು, ಅಮೆರಿಕದ ಲಾಸ್‌ ಏಂಜಲಿಸ್‌ನಲ್ಲಿ ಮಂಗಳವಾರ ಯೋಗ ವಿಶ್ವವಿದ್ಯಾಲಯವನ್ನು ಆರಂಭಿಸಲಾಗಿದೆ.

published on : 24th June 2020

ಬಾಲಿವುಡ್ ಪ್ರಸಿದ್ದ ನೃತ್ಯ ಸಂಯೋಜಕಿ ಸರೋಜ್ ಖಾನ್ ಆಸ್ಪತ್ರೆಗೆ ದಾಖಲು

ಬಾಲಿವುಡ್ ಹಿರಿಯ ನೃತ್ಯಸಂಯೋಜಕಿ ಸರೋಜ್ ಖಾನ್ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ.  ಮುಂಬೈನ ಗುರುನಾನಕ್ ಆಸ್ಪತ್ರೆಗೆದಾಕಲಾಗಿರುವ ಸರೋಜ್ ಖಾನ್ ಅವರಿಗೆ ಕೊರೋನಾವೈರಸ್ ನೆಗೆಟಿವ್ ವರದಿ ಬಂದಿದೆ.

published on : 24th June 2020

ಕೆ.ಸಿ. ವ್ಯಾಲಿ, ಎತ್ತಿನಹೊಳೆ ಕಾಮಗಾರಿ ಚುರುಕುಗೊಳಿಸಲು ಮುಖ್ಯಮಂತ್ರಿ ಸೂಚನೆ

ಕೋಲಾರ ಜಿಲ್ಲೆಯ ಜನಪ್ರತಿನಿಧಿಗಳ ನಿಯೋಗವು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿಯಾಗಿ ಕೆ.ಸಿ.ವ್ಯಾಲಿ ಮತ್ತು ಎತ್ತಿನಹೊಳೆ ಯೋಜನೆಗಳ ಅನುಷ್ಠಾನದ ಕುರಿತು ಚರ್ಚೆ ನಡೆಸಿತು.

published on : 23rd June 2020

ಮನ್ರೇಗಾಕ್ಕೆ ಹೆಚ್ಚಿದ ಬೇಡಿಕೆ: ಪದವೀಧರರು, ಕೌಶಲ್ಯಭರಿತ ಕೆಲಸಗಾರರಿಗೆ ಉದ್ಯೋಗಗಳನ್ನು ಹುಡುಕಲು ಸರ್ಕಾರ ಮುಂದು

ಹತಾಶ ಪದವೀಧರರು, ಸ್ನಾತಕೋತ್ತರ ಮತ್ತು ಕೌಶಲ್ಯಭರಿತ ಕೆಲಸಗಾರರು ಸೂಕ್ತ ಉದ್ಯೋಗ ಕೊರತೆಯಿಂದಾಗಿ ಮನ್ರೇಗಾ ಯೋಜನೆಯಡಿತಮ್ಮ ಹೆಸರನ್ನು ದಾಖಲಿಸಿಕೊಳ್ಳುತ್ತಿದ್ದಾರೆ. ಇಂತಹವರಿಗೆ ಉದ್ಯೋಗ ಮೇಳದ ಮೂಲಕ ಕೌಶಲ್ಯ ಆಧಾರಿತ ಉದ್ಯೋಗ ಕಂಡುಹಿಡಿಯುವ ಮೂಲಕ ಅವರ ರಕ್ಷಣೆಗೆ ಸರ್ಕಾರ  ಮುಂದಾಗಿದೆ.

published on : 23rd June 2020
1 2 3 4 5 6 >