ಪಂಜಾಬ್: ಪಂಜಾಬ್ ನ ಗೋಲ್ಡನ್ ಟೆಂಪಲ್ ನಲ್ಲಿ ಯೋಗ ಮಾಡಿದ್ದ ಸಾಮಾಜಿಕ ಜಾಲತಾಣದ influencer ವಿರುದ್ಧ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದಡಿ ಪ್ರಕರಣ ದಾಖಲಾಗಿದೆ.
ಅರ್ಚನಾ ಮಕ್ವಾನಾ ವಿರುದ್ಧ ಸೆಕ್ಷನ್ 295ಎ ಅಡಿ ಪ್ರಕರಣ ದಾಖಲಾಗಿದೆ. ಇದು ಯಾವುದೇ ವರ್ಗದ ಧಾರ್ಮಿಕ ಭಾವನೆಗಳನ್ನು ಅದರ ಧರ್ಮ ಅಥವಾ ಧಾರ್ಮಿಕ ನಂಬಿಕೆಗಳನ್ನು ಅವಮಾನಿಸುವ ಉದ್ದೇಶದಿಂದ ಉದ್ದೇಶಪೂರ್ವಕ ಮತ್ತು ದುರುದ್ದೇಶಪೂರಿತ ಕೃತ್ಯಗಳಿಗೆ ಸಂಬಂಧಿಸಿದ ಸೆಕ್ಷನ್ ಆಗಿದೆ.
ದೇಶಾದ್ಯಂತ ಗುರುದ್ವಾರಗಳನ್ನು ನಿರ್ವಹಿಸುವ ಶಿರೋಮಣಿ ಗುರುದ್ವಾರ ಪ್ರಬಂಧಕ್ ಸಮಿತಿ (ಎಸ್ ಜಿಪಿಸಿ) ಪೊಲೀಸರಿಗೆ ದೂರು ಸಲ್ಲಿಸಿದ್ದು, ಮಕ್ವಾನಾ ಅವರ ಕ್ರಮಗಳು ಸಿಖ್ ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸಿದೆ ಎಂದು ಹೇಳಿದೆ. ಯೋಗ ಆಚರಿಸಿದ ಬಳಿಕ ಮಹಿಳೆ ಗೋಲ್ಡನ್ ಟೆಂಪಲ್ ಗೆ ಭೇಟಿ ನೀಡದೇ ತೆರಳಿದ್ದಾರೆ ಎಂದು ಎಸ್ ಜಿಪಿಸಿ ಅಧ್ಯಕ್ಷ ಹರ್ಜಿಂದರ್ ಸಿಂಗ್ ಧಾಮಿ ಹೇಳಿದ್ದಾರೆ. ಕೇಸ್ ದಾಖಲಾದ ಬೆನ್ನಲ್ಲೇ ಮಕ್ವಾನಾ ತನ್ನ ಸಾಮಾಜಿಕ ಮಾಧ್ಯಮದಿಂದ ಗೋಲ್ಡನ್ ಟೆಂಪಲ್ ಗೆ ಭೇಟಿ ನೀಡಿದ ಕಂಟೆಂಟ್ ನ್ನು ತೆಗೆದುಹಾಕಿದ್ದಾರೆ ಮತ್ತು Instagram ಸ್ಟೋರೀಸ್ ಮೂಲಕ ಕ್ಷಮೆಯಾಚಿಸಿದ್ದಾರೆ.
Advertisement